Don't Miss!
- News
ಫೆಬ್ರವರಿ 1ರಂದು 324 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರೆಸಾರ್ಟ್ ಗೆ ಹೋಗೋಣ ಬಾ' ಎಂದು ಕರೆದರು : ಸರ್ಜಾ ಮೇಲೆ ಶ್ರುತಿ ಬಾಂಬ್!
Recommended Video

''ನನ್ನ ಪ್ರತಿಭಟನೆಯಿಂದ ಅರ್ಜುನ್ ಸರ್ಜಾ ಅವರು ವಿಚಲಿತರಾದರಂತೆ ಅನಿಸಲಿಲ್ಲ. ಮತ್ತೆ ಮತ್ತೆ ನನ್ನನ್ನು ಡಿನ್ನರ್ ಗೆ ಕರೆಯುತ್ತಿದ್ದರು. 'ರೆಸಾರ್ಟ್ ಗೆ ಹೋಗೋಣ ಬಾ' ಎನ್ನುತ್ತಿದ್ದರು. 'ನೋ ಎಂದರೆ ನೋ' ಎನ್ನುವುದು ಅವರಿಗೆ ಅರ್ಥ ಆಗಲಿಲ್ಲ.'' ಈ ರೀತಿಯ ಗಂಭೀರ ಆರೋಪವನ್ನು ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ Metoo ಬಿಸಿ ಹೆಚ್ಚಾಗಿದೆ. 'ನಟ ಅರ್ಜುನ್ ಸರ್ಜಾ ಅವರಿಂದ ನನ್ನ ಮೇಲೆ ಕೆಟ್ಟ ಅನುಭವ ಆಗಿದೆ' ಎಂದು ನಟಿ ಶೃತಿ ಹರಿಹರನ್ ಹೇಳಿಕೊಂಡಿದ್ದಾರೆ. 'ವಿಸ್ಮಯ' ಸಿನಿಮಾದಲ್ಲಿ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಒಟ್ಟಿಗೆ ನಟಿಸಿದ್ದು, ಚಿತ್ರದ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಶ್ರುತಿ ಹರಿಹರನ್ ಆರೋಪ ಮಾಡಿದ್ದಾರೆ.
ಆ
ನಿರ್ದೇಶಕನ
ಮಂಚಕ್ಕೆ
ಕಳುಹಿಸಲು
ಸ್ಕೆಚ್
ಹಾಕಿದ್ಲು
ಕೇಶ
ವಿನ್ಯಾಸಕಿ:
ಸಂಗೀತಾ
ಭಟ್
ಈ ಹಿಂದೆ ನಟಿ ಸಂಗೀತ ಭಟ್ ಅವರ ಮೀ ಟೂ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದ ಶೃತಿ ಹರಿಹರನ್ ತಮ್ಮ ಕಹಿ ಅನುಭವನ್ನು ಹೇಳಿಕೊಂಡಿದ್ದಾರೆ. 'ಸುಧಾ' ಮ್ಯಾಗಜಿನ್ ನ ವಿಶೇಷ ಸಂದರ್ಶನದಲ್ಲಿ ನಟಿ ಶ್ರುತಿ ಹರಿಹರನ್ ಆಡಿರುವ ಸಂಪೂರ್ಣ ಮಾತುಗಳು ಮುಂದಿದೆ ಓದಿ...

'ವಿಸ್ಮಯ' ಸಿನಿಮಾ ಮಾಡುವ ಸಮಯದಲ್ಲಿ
''ಕಳೆದ ವರ್ಷ ನಾನೊಂದು ಸಿನಿಮಾ ಮಾಡಿದೆ. ಅದರ ಹೆಸರು 'ವಿಸ್ಮಯ'. ಆ ಸಿನಿಮಾದಲ್ಲಿ ನನ್ನ ಸಹ ನಟನಾಗಿ ಅರ್ಜುನ್ ಸರ್ಜಾ ರವರು ಅಭಿನಯಿಸಿದ್ದರು. 'ವಿಸ್ಮಯ' ಸಿನಿಮಾಗೂ ಮುನ್ನ ನಾನು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ತುಂಬಾ ನಟರ ಜೊತೆ ಕೆಲಸ ಮಾಡಿದ್ದೇನೆ. ಎಂದಿಗೂ ನನಗೆ ಬೇರೆ ನಟರ ಜತೆ ನಟಿಸುವಾಗ ಯಾವ ತೊಂದರೆಯೂ ಆಗಿಲ್ಲ. ನಾವೆಲ್ಲ ಪರಸ್ಪರ ಗೌರವದಿಂದಲೇ ನಡೆದುಕೊಳ್ಳುತ್ತಿದ್ದೆವು.'' - ಶ್ರುತಿ ಹರಿಹರನ್, ನಟಿ
ಒಂದೇ
ಕುಟುಂಬದ
ಇಬ್ಬರು
ನಟರ
'ಕಾಮ
ಪುರಾಣ'
ಬಿಚ್ಚಿಟ್ಟ
ಸಂಗೀತಾ
ಭಟ್

ಗಡಿ ರೇಖೆಯನ್ನು ಅರ್ಜುನ್ ಸರ್ಜಾ ದಾಟಿದರು
''ನಾಯಕ ನಾಯಕಿ ನಡುವಿನ ಪ್ರಣಯದ ದೃಶ್ಯ ಪ್ರಣಯದ ದೃಶ್ಯಗಳನ್ನು ಚಿತ್ರೀಕರಿಸುವಾಗ ಕಲಾವಿದರ ನಡುವೆ ಬಹು ಸೂಕ್ಷ್ಮವಾದ ಒಂದು ಗಡಿ ರೇಖೆ ಇರುತ್ತದೆ ಆ ಸೂಕ್ಷ್ಮವಾದ ಗಡಿ ರೇಖೆಯನ್ನು ದಾಟಿದರೆ ಹೆಣ್ಣಿಗೆ uncomfortable ಆಗಲು ಶುರುವಾಗುತ್ತದೆ. 'ವಿಸ್ಮಯ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಆ ಗಡಿ ರೇಖೆಯನ್ನು ಅರ್ಜುನ್ ಸರ್ಜಾ ದಾಟಿದರು.'' - ಶ್ರುತಿ ಹರಿಹರನ್, ನಟಿ
ತಮಿಳು
ನಟ
ಕೊಟ್ಟ
ಕಾಟವನ್ನ
ಬಿಚ್ಚಿಟ್ಟ
ಸಂಗೀತಾ
ಭಟ್

ಜೋರಾಗಿ ತಬ್ಬಿಕೊಂಡರು, ಅದರಿಂದ ನಾನು ತಬ್ಬಿಬ್ಬಾದೆ
''ನಾನು ಅವರ ಹೆಂಡತಿಯಾಗಿ ಚಿತ್ರದಲ್ಲಿ ನಟಿಸಿದ್ದೆ. ರಿಹರ್ಸಲ್ ಮಾಡುವ ವೇಳೆ ಇನ್ನೊಂದು ಚುರು ರಿಹರ್ಸಲ್ ಮಾಡಬಹುದಲ್ವಾ ಎಂದು ಜೋರಾಗಿ ತಬ್ಬಿಕೊಂಡರು. ಆ ಅಪ್ಪುಗೆಯಿಂದ ನಾನು ತಬ್ಬಿಬ್ಬಾದೆ. ತಕ್ಷಣವೇ ನಾನು ನಿರ್ದೇಶಕರಿಗೆ ಇನ್ನು ಮುಂದೆ ರಿಹರ್ಸಲ್ ಗೆ ಬರುವುದಿಲ್ಲ, ಶೂಟಿಂಗ್ ಗೆ ಮಾತ್ರ ಬರುತ್ತೇನೆ ಎಂದು ಹೇಳಿದೆ.'' - ಶ್ರುತಿ ಹರಿಹರನ್, ನಟಿ

'ರೆರ್ಸಾಟ್ ಗೆ ಹೋಗೋಣ ಬಾ'
''ನನ್ನ ಪ್ರತಿಭಟನೆಯಿಂದ ಅರ್ಜುನ್ ಸರ್ಜಾ ಅವರು ವಿಚಲಿತರಾದರಂತೆ ಅನಿಸಲಿಲ್ಲ. ಆದರ ನಂತರ ನನ್ನ ಜೊತೆಗೆ ಅವರು ಮಾತನಾಡಿದ ಭಾಷೆ ಕೂಡ ಸಭ್ಯವಾಗಿ ಇರಲಿಲ್ಲ. ಮತ್ತೆ ಮತ್ತೆ ಡಿನ್ನರ್ ಗೆ ಕರೆಯುತ್ತಿದ್ದರು. 'ರೆರ್ಸಾಟ್ ಗೆ ಹೋಗೋಣ ಬಾ' ಎನ್ನುತ್ತಿದ್ದರು''. - ಶ್ರುತಿ ಹರಿಹರನ್, ನಟಿ

'ನೋ ಎಂದರೆ ನೋ'
''ನಾನು ಬರುವುದಿಲ್ಲ ಎಂದು ಹೇಳಿದೆ. ಅದನ್ನು ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. 'ನೋ ಎಂದರೆ ನೋ' ಎಂಬುದು ಅವರಿಗೆ ಯಾಕೆ ಅರ್ಥವೇ ಆಗುತ್ತಿಲ್ಲ ಎಂದು ನಿಜವಾಗಿಯೂ ನನಗೆ ತಿಳಿಯಲಿಲ್ಲ. ಬಹುಶಃ ಅವರು ಹೀಗೆ ಕರೆದಾಗ ಯಾರೂ 'ನೋ' ಎಂದಿರಲಿಲ್ಲವೋ ಏನೋ.'' - ಶ್ರುತಿ ಹರಿಹರನ್, ನಟಿ