»   » ಶ್ರುತಿ ಹರಿಹರನ್ ಕಡೆಯಿಂದ ಕನ್ನಡ ಕಲಾಭಿಮಾನಿಗಳಿಗೆ ಹೊಸ ಕೊಡುಗೆ

ಶ್ರುತಿ ಹರಿಹರನ್ ಕಡೆಯಿಂದ ಕನ್ನಡ ಕಲಾಭಿಮಾನಿಗಳಿಗೆ ಹೊಸ ಕೊಡುಗೆ

Posted By:
Subscribe to Filmibeat Kannada

'ಲೂಸಿಯಾ' ಚಿತ್ರದ ಮೂಲಕ ಚಂದನವನದ ತೋಟಕ್ಕೆ ಕಾಲಿಟ್ಟು ತಮ್ಮ ಪವರ್ ಫುಲ್ ಹಾಗೂ ಆಕರ್ಷಕ ನಟನೆಯಿಂದ ಎಲ್ಲರ ಮನೆಮಾತಾದವರು ಗ್ಲಾಮರ್ ಬೊಂಬೆ ನಟಿ ಶ್ರುತಿ ಹರಿಹರನ್.

ನ್ಯಾಚುರಲ್ ನಟನೆಯಿಂದ ಗಮನಸೆಳೆದ ನಟಿ ಶ್ರುತಿ ಹರಿಹರನ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಅವಕಾಶಗಳು ದೊರೆತವು. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡ ಶ್ರುತಿ ಅವರು ನಟಿಸಿದ ಎಲ್ಲಾ ಸಿನಿಮಾಗಳು ಹಿಟ್.

ಪ್ರತೀ ಸಿನಿಮಾದಲ್ಲೂ ವಿಭಿನ್ನ ಪಾತ್ರ ವಹಿಸುವ ಶ್ರುತಿ ಹರಿಹರನ್ ಅವರು ಅಭಿಮಾನಿಗಳು ಸೇರಿದಂತೆ ಸಿನಿಮಾ ಪ್ರಿಯರಿಗೂ ಬಹಳ ಇಷ್ಟವಾಗುತ್ತಾರೆ.

ಹೀಗೆ ಒಂದರ ಮೇಲೊಂದು ಹಿಟ್ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಯಶಸ್ವಿ ನಟಿಯಾಗಿ ನಟಿ ಶ್ರುತಿ ಹರಿಹರನ್ ಅವರು ಹೊರಹೊಮ್ಮಿದ್ದಾರೆ. ಇದೀಗ ಇದೇ ಖುಷಿಯಲ್ಲಿ ಗ್ಲಾಮರ್ ನಟಿ ಶ್ರುತಿ ಅವರು ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.[ಇವರು 'ಲೂಸಿಯಾ' ಬೆಡಗಿ ಶ್ರುತಿ ಅಂದ್ರೆ ನೀವು ನಂಬಲೇಬೇಕು.!]

ಅಷ್ಟಕ್ಕೂ ಶ್ರುತಿ ಹರಿಹರನ್ ಅವರ ಹೊಸ ಸಾಹಸ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

ಶ್ರುತಿ ಹರಿಹರನ್ ಸಾರಥ್ಯದ ಹೊಸ ತಂಡ

ನಟಿ ಶ್ರುತಿ ಹರಿಹರನ್ ಅವರು ತಮ್ಮದೇ ಆದ ಹೊಸ ತಂಡವೊಂದನ್ನು ರೂಪಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಈ ಕನಸಿನ ತಂಡದಿಂದ ಕಥೆ-ಕಿರುಚಿತ್ರ ಮತ್ತು ನಾಟಕಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.[ಮಹಿಳಾಮಣಿಗಳ ವಿರುದ್ಧ ನಿಂತ ಅಚ್ಯುತ್ ಕುಮಾರ್]

ನಿರ್ಮಾಪಕಿಯಾದ ಶ್ರುತಿ ಹರಿಹರನ್

ಅಂದಹಾಗೆ ಈ ಹೊಸ ತಂಡ ಈಗಾಗಲೇ ಒಂದು ಕಿರುಚಿತ್ರ ತಯಾರಿಸಿದ್ದು, ಇದಕ್ಕೆ ನಟಿ ಶ್ರುತಿ ಅವರೇ ನಾಯಕಿ ಮತ್ತು ನಿರ್ಮಾಪಕಿ. ಅಂತೂ ನಟಿ ಆಯ್ತು, ಡ್ಯಾನ್ಸರ್ ಆಯ್ತು, ಇದೀಗ ನಿರ್ಮಾಪಕಿಯಾಗಿ ಹೊಸ ಸಾಹಸ ಮಾಡುತ್ತಿದ್ದಾರೆ.[ಶ್ರುತಿ ಹರಿಹರನ್ ಅವರ ಮುಂದಿನ ಚಿತ್ರ ಯಾರ ಜೊತೆ?]

ತಂಡದ ಹೆಸರೇನು.?

ಅಂದಹಾಗೆ ಇವರ ನಿರ್ಮಾಣದ ಸಂಸ್ಥೆಯ ಹೆಸರು "ಕಲಾತ್ಮಿಕ". ಈ "ಕಲಾತ್ಮಿಕ" ಸಂಸ್ಥೆಯ ಚೊಚ್ಚಲ ಕಾಣಿಕೆಯಾಗಿ "ದಿ ಲಾಸ್ಟ್ ಕನ್ನಡಿಗ" ಎಂಬ ಕಿರುಚಿತ್ರವೊಂದು ಹೊರಬರುತ್ತಿದೆ. ಈ ಕಿರುಚಿತ್ರಕ್ಕೆ ರಾಘವ ರಘು ಅವರ ಸ್ಟಿಲ್ ಫೋಟೋಗ್ರಫಿ ಹಾಗೂ ಛಾಯಾಗ್ರಾಹಕ ಅಭಿಷೇಕ್ ಜಿ ಕಾಸರಗೋಡು ಅವರು ಕ್ಯಾಮೆರಾ ಕೈ ಚಳಕ ತೋರಿದ್ದಾರೆ.

ಕಿರುಚಿತ್ರ ತಾರಾಗಣ

ಈ ಕಿರುಚಿತ್ರದಲ್ಲಿ ಶ್ರುತಿ ಸೇರಿದಂತೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಒಳ್ಳೆ ಹೃದಯವಂತಿಕೆ ಇರೋ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅದ್ಭುತ ನಟ ವಸಿಷ್ಠ ಎಂ ಸಿಂಹ, ರವಿಕಿರಣ್, ಹಿರಿಯ ನಟ ಜಯಪ್ರಕಾಶ್ ಮತ್ತಿತ್ತರರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮದನ್ ರಾಮ್ ವೆಂಕಟೇಶ್ ಆಕ್ಷನ್-ಕಟ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ.

ನಟಿ ಶ್ರುತಿ ಹರಿಹರನ್ ಕನ್ನಡಾಭಿಮಾನ

ಶ್ರುತಿ ಅವರ ಮಾತೃಭಾಷೆ ತಮಿಳಾದರು ಕನ್ನಡ ಭಾಷೆ ಬಗೆಗಿನ ಕಾಳಜಿ, ಆಸಕ್ತಿ, ಅಭಿಮಾನ ಹಾಗೂ ಪ್ರೀತಿ ಹೊಂದಿರುವ ಇವರು ಉಳಿದೆಲ್ಲ ನಟಿಯರ ಸಾಲಲ್ಲಿ ಭಿನ್ನವಾಗಿ ನಿಲ್ಲುತ್ತಾರೆ ಮತ್ತು ಎಲ್ಲರಿಗೂ ಮಾದರಿಯಾಗುತ್ತಾರೆ.

ಏನಿದರ ಆಶಯ?

ಅಷ್ಟಕ್ಕೂ ಈ 'ಲಾಸ್ಟ್ ಕನ್ನಡಿಗ' ಎಂಬ ಕಿರುಚಿತ್ರದ ಆಶಯ ಏನಪ್ಪಾ ಅಂದ್ರೆ ಇತ್ತೀಚೆಗೆ ಕನ್ನಡ ಬರುವವರು ಕೂಡ ಕನ್ನಡ ಮಾತನಾಡುತ್ತಿಲ್ಲ. ನಮ್ಮ ಭಾಷೆ, ಸಂಸ್ಕೃತಿಯನ್ನು ನಾವೇ ಕೀಳಾಗಿ ನೋಡುತ್ತೇವೆ. ಪರಭಾಷೆಗಳ ಪೂಜೆ ಮಾಡುತ್ತಿರುವ ನಮ್ಮ ಕನ್ನಡದ ಊರಲ್ಲಿ ಹೊರಗಿನ ಭಾಷೆಗಳದೇ ಅಬ್ಬರ ಜಾಸ್ತಿ. ಜೊತೆಗೆ ಪರಭಾಷೆಯವರು ನಮ್ಮ ಊರಿಗೆ ಬಂದು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡಿಗರಲ್ಲಿ ಕನ್ನಡಾಭಿಮಾನ ಮೂಡಿಸಲು ಈ ಕಿರುಚಿತ್ರ ನಿರ್ಮಾಣ ಮಾಡಲಾಗಿದೆ.

ಬಿಸಿರಕ್ತದ ಯುವಕರ ಸಾಹಸ

ಬಹುತೇಕ ಯುವಕರೇ ಇರುವ ಶ್ರುತಿ ಹರಿಹರನ್ ಸಾರಥ್ಯದ ತಂಡ ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಮಾಜಿಕ ಕಳಕಳಿಯುಳ್ಳ ಉತ್ತಮ ಕಿರುಚಿತ್ರಗಳನ್ನು ತಯಾರಿಸುವ ಆಶಯ ಹೊಂದಿದೆ. ಒಟ್ನಲ್ಲಿ ಕಲಾಸೇವೆಗೆ ಮುಂದಾಗಿರುವ ನಟಿ ಶ್ರುತಿ ಹರಿಹರನ್ ಅವರ ಕನಸಿನ "ಕಲಾತ್ಮಿಕ" ಉತ್ತುಂಗಕ್ಕೇರಲಿ ಅನ್ನೋದೇ ನಮ್ಮ ಆಶಯ. ನೀವೇನಂತೀರಾ?.

ಶ್ರುತಿ ಹರಿಹರನ್ ಮುಂಬರುವ ಚಿತ್ರಗಳು

ಸದ್ಯಕ್ಕೆ ನಟಿ ಶ್ರುತಿ ಹರಿಹರನ್ ಅವರು 'ಬ್ಯೂಟಿಫುಲ್ ಮನಸುಗಳು' ಮತ್ತು 'ಉರ್ವಿ' ಚಿತ್ರದ ಶೂಟಿಂಗ್ ಮುಗಿಸಿ, ಬಿಡುಗಡೆಗೆ ಕಾಯುತ್ತಿದ್ದಾರೆ. ಜೊತೆಗೆ ನಟ ಅರ್ಜುನ್ ಸರ್ಜಾ ಅವರ ಜೊತೆ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ಹಾಗೂ ಉಪೇಂದ್ರ ಅವರ ಜೊತೆ 'ಉಪೇಂದ್ರ ಮತ್ತೆ ಹುಟ್ಟಿ ಬಾ-ಇಂತಿ ಪ್ರೇಮ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

English summary
Kannada Actress Sruthi Hariharan who is doing very well at the career front as an actress is now turning into a Producer. Her first venture will be a short film titled 'The Last Kannadiga', in which she is going to be seen producing under her banner Kalathmika.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada