»   » ಕರಾವಳಿ ಚೆಲುವೆಗೆ ಕೊನೆಗೂ ಬಂತು ಲಕ್ಕಿ ಟೈಂ

ಕರಾವಳಿ ಚೆಲುವೆಗೆ ಕೊನೆಗೂ ಬಂತು ಲಕ್ಕಿ ಟೈಂ

By: ಜೀವನರಸಿಕ
Subscribe to Filmibeat Kannada

ಯಜ್ಞಾ ಶೆಟ್ಟಿ ಅನ್ನೋ ಕರಾವಳಿಯ ಈ ಎತ್ತರದ ಚೆಲುವೆ ಪ್ರತಿಭೆಯಲ್ಲೂ ಬಲು ಎತ್ತರಕ್ಕೆ ಏರಿದ್ದಾರೆ. ಆದರೆ ಕೆಲವು ಸಿನಿಮಾಗಳು ಯಜ್ಞಾ ಶೆಟ್ಟಿ ಪಾಲಿಗೆ ಮರೀಚಿಕೆಯಾಗಿತ್ತು. ಎಲ್ಲರಿಗೂ ಒಂದಲ್ಲ ಒಂದ್ಸಾರಿ ಒಳ್ಳೆ ಕಾಲ ಬರುತ್ತೆ ಅಂತಾರಲ್ಲ ಈಗ ಯಜ್ಞಾ ಶೆಟ್ಟಿಗೆ ಯಾವ ಯಾಗ ಯಜ್ಞಾದಿಗಳನ್ನೂ ಮಾಡದೆ ಒಳ್ಳೆಯ ಕಾಲ ಬಂದಿದೆ.

'ಎದ್ದೇಳು ಮಂಜುನಾಥ' ಸಿನಿಮಾದಲ್ಲಿ ಅಭಿನಯಿಸಿದಾಗ ಯಜ್ಞಾ ಶೆಟ್ಟಿ ಅಭಿನಯಕ್ಕೆ ಎಲ್ಲರೂ ಫುಲ್ ಮಾರ್ಕ್ಸ್ ಕೊಟ್ಟಿದ್ರು. ಒಳ್ಳೆಯ ನಟಿ ಅಂತ ಮಾತಾಡಿಕೊಂಡಿದ್ರು. ಆದರೆ ಆಮೇಲೆ ಅಂದುಕೊಂಡಂತೆ ಅವಕಾಶಗಳು ಸಿಗಲಿಲ್ಲ.

ಆದರೆ ಈಗ ಈ ಕರಾವಳಿ ಬೆಡಗಿ ಫುಲ್ ಬಿಜಿ ಬ್ಯೂಟಿ. ಒಂದೊಂದೇ ಸಿನಿಮಾಗಳ ಮೂಲಕ ಬಿಗ್ಸ್ಕ್ರೀನ್ ನಲ್ಲಿ ಮೋಡಿ ಮಾಡೋಕೆ ಬರ್ತಿದ್ದಾರೆ. ಯಜ್ಞಾ ಶೆಟ್ಟಿಯವರ ಸಿನಿಮಾಗಳ ಒಂದು ಝಲಕ್ ನಿಮಗಾಗಿ...

ಕ್ವಾಟ್ಲೆಯ ಪ್ರೀತಿಯ ಹುಡುಗಿ

ಎರಡು ವರ್ಷ ಪೋಸ್ಟ್ ಗ್ರಾಜ್ಯುಯೇಷನ್ ಓದು ಮುಗಿಸಿದ ಯಜ್ಞಾ ಶೆಟ್ಟಿಯವರ ಮೊದಲ ಸಿನಿಮಾ ವ್ಯಾಲಂಟೈನ್ಸ್ ಡೇಗೆ ತೆರೆಗೆ ಬಂದ ಕ್ವಾಟ್ಲೆ ಉತ್ತಮ ವಿಮರ್ಶೆಗೂ ಪಾತ್ರವಾಯಿತು. ಚಿತ್ರದಲ್ಲಿ ಅವರದು ತರಲೆ ಹುಡುಗನನ್ನ ಪ್ರೀತಿಸೋ ಪ್ರಬುದ್ಧ ಹುಡುಗಿ ಪಾತ್ರ.

ಸಡಗರದಲ್ಲಿ ಸ್ವೀಟ್ ಶೆಟ್ಟಿ

ಶಂಕರ್ ಆರ್ಯನ್ ಗೆ ಜೋಡಿಯಾಗಿರೋ ಸಡಗರ ಸಿನಿಮಾ ಕೂಡ ಫೆಬ್ರವರಿ 14ಕ್ಕೆ ಅಂದ್ರೆ ಪ್ರೇಮಿಗಳ ದಿನಕ್ಕೆ ತೆರೆಗೆ ಬರ್ಬೇಕಿತ್ತು. ಈಗ ಎರಡುವಾರ ಮುಂದೆ ಹೋಗಿದೆ. ಸಡಗರ ಫೆಬ್ರವರಿ ಕೊನೆಗೆ ಶುರುವಾಗೋ ಲಕ್ಷಣಗಳಿದೆ.

ಉಳಿದವರು ಕಂಡಂತೆ

ಉಳಿದವರು ಕಂಡಂತೆ ಸಿನಿಮಾದಲ್ಲಿ ಮೀನು ಮಾರೋ ಹೆಣ್ಣಿನ ಪಾತ್ರ ಈಗಾಗ್ಲೇ ಚಿತ್ರಪ್ರೇಮಿಗಳಲ್ಲಿ ದೊಡ್ಡ ಕುತೂಹಲ ಹುಟ್ಟುಹಾಕಿದೆ. ಇಲ್ಲಿ ಕಿಶೋರ್ ಗೆ ಜೋಡಿಯಾಗಿ ಯಜ್ಞಾ ಶೆಟ್ಟಿ ಕಮಾಲ್ ಇರಲಿದೆ.

ಮಂಗಳೂರಲ್ಲಿ ಹೈಯರ್ ಸ್ಟಡೀಸ್ ಮುಗಿಸಿದ ಯಜ್ಞಾ

ಎದ್ದೇಳು ಮಂಜುನಾಥ ಸಿನಿಮಾ ಗೆದ್ದಾಗ ಯಜ್ಞಾಶೆಟ್ಟಿಯವರಿಗೆ ಸಾಕಷ್ಟು ಅವಕಾಶಗಳಿತ್ತು. ಆದರೆ ಓದಿನ ಕಾರಣದಿಂದ ಯಜ್ಞಾ ಎಲ್ಲ ಸಿನಿಮಾ ಬಿಟ್ಟು ಮಂಗಳೂರಲ್ಲಿ ಹೈಯರ್ ಸ್ಟಡೀಸ್ ಮುಗಿಸಿ ಬಂದ್ರು.

ಮತ್ತೊಂದಷ್ಟು ಸಿನಿಮಾಗಳಿಗೆ ಮಾತುಕತೆ

ಸದ್ಯ ಮೂರು ಸಿನಿಮಾಗಳ ಜೊತೆ ಮತ್ತೊಂದಷ್ಟು ಸಿನಿಮಾಗಳಿಗೆ ಮಾತುಕತೆ ನಡೀತಾ ಇದ್ದು ಇನ್ನು ಫುಲ್ ಬಿನಿಯಾಗ್ತೀನಿ ಅನ್ನೋ ನಿರೀಕ್ಷೆಯಲ್ಲಿದ್ದಾರೆ ನೀಳಕಾಲ್ಗಳ ಚೆಲುವೆ. ಎನಿವೇಸ್ ಕಂಬ್ಯಾಕ್ ಆಗಿರೋ ಯಜ್ಞಾ ಶೆಟ್ಟಿಗೆ ನಮ್ಮ ಕಡೆಯಿಂದ ಆಲ್ ದ ಬೆಸ್ಟ್.

English summary
Kannada actress Yagna Shetty is in full swing now. At present the actress busy in Ulidavaru Kandante, Sadagara and recently released Kwatle gets rave review.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada