ಆಸ್ಟ್ರೇಲಿಯಾದಲ್ಲಿ ಬ್ಲಾಕ್ ಬಸ್ಟರ್ ಕನ್ನಡ ಚಿತ್ರ ಉಗ್ರಂ
ಸೈಲೆಂಟ್ ಸ್ಟಾರ್ ಶ್ರೀಮುರಳಿ ಹಾಗೂ ಹರಿಪ್ರಿಯಾ ಜೋಡಿಯ ಉಗ್ರಂ ಚಿತ್ರ ಶತದಿನೋತ್ಸವ ಸಂಭ್ರಮಕ್ಕೆ ಅಣಿಯಾಗಿದೆ. ತನ್ನ ಮೇಕಿಂಗ್ ಮೂಲಕ ಎಲ್ಲರ ಗಮನಸೆಳೆದ ಉಗ್ರಂ ಇದೀಗ ಆಸ್ಟ್ರೇಲಿಯಾಗೆ ಹಾರುತ್ತಿದೆ. ಇದೇ ಮೇ.18ರಂದು ಉಗ್ರಂ ಚಿತ್ರ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗುತ್ತಿದೆ.
ಎಲ್ಲೋ ದೂರದ ದೇಶದಲ್ಲಿರುವ ಕನ್ನಡಿಗರಿಗೆ ಹೊಸ ಚಿತ್ರಗಳು ಮಾಡುತ್ತಿರುವ ಸದ್ದು ಕೇಳಿ ಪುಳಕಿತರಾಗುತ್ತಾರೆ. ಅವನ್ನು ನೋಡಿ ಎಂಜಾಯ್ ಮಾಡಬೇಕೆಂಬ ಅದಮ್ಯ ಬಯಕೆ ಅವರಿಗೂ ಇರುತ್ತದೆ. ಕೆಲವು ಚಿತ್ರಗಳು ಸ್ವಲ್ಪ ತಡವಾದರೂ ಅನಿವಾಸಿ ಕನ್ನಡಿಗರಿಗೆ ವಿಕ್ಷಿಸುವ ಸೌಭಾಗ್ಯ ದೊರೆಯುತ್ತಿದೆ. [ಉಗ್ರಂ ಚಿತ್ರ ವಿಮರ್ಶೆ]

ಪ್ರಶಾಂತ್ ನೀಲ್ ಅವರ ಚೊಚ್ಚಲ ನಿರ್ದೇಶನದ ಉಗ್ರಂ ಚಿತ್ರ ಕೇವಲ ಸಿಂಗಲ್ ಸ್ಕ್ರೀನ್ ತೆರೆಯ ಮೇಲಷ್ಟೇ ಅಲ್ಲದೆ ಮಲ್ಟಿಫ್ಲೆಕ್ಸ್ ಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡಿರುವುದು ವಿಶೇಷ. ಚಿತ್ರವನ್ನು ಮೊದಲ ಬಾರಿಗೆ ಕೋಲಾರ ಗೋಲ್ಡ್ ಫೀಲ್ಡ್ಸ್ ನಲ್ಲಿರುವ ಚಿನ್ನದ ಗಣಿಯ ಸೈನೇಡ್ ರಾಶಿಯ ಹೊರಗೆ ಚಿತ್ರಿಸಲಾಗಿದೆ.
ಆರಂಭದಿಂದ ಕೊನೆಯವರೆಗೂ ಕುತೂಹಲ ಕೆರಳಿಸುವ 'ಉಗ್ರಂ' ತನ್ನ ಅತ್ಯುತ್ತಮ ಚಿತ್ರಕಥೆಯಿಂದಾಗಿ ಪ್ರೇಕ್ಷಕರ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ಪಾತ್ರವರ್ಗದಲ್ಲಿ ತಿಲಕ್ ಶೇಖರ್, ಪದ್ಮಜಾ ರಾವ್, ಮಿತ್ರ, ಜೈ ಜಗದೀಶ್, ಅವಿನಾಶ್, ಅತುಲ್ ಕುಲಕರ್ಣಿ ಮುಂತಾದವರು ಅಭಿನಯಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











