»   » 'ನನ್ನ ಮೊದಲ ಸಿನಿಮಾ' : ಮೊದಲ ಲೇಖನ ನಾಳೆಯಿಂದ ಶುರು

'ನನ್ನ ಮೊದಲ ಸಿನಿಮಾ' : ಮೊದಲ ಲೇಖನ ನಾಳೆಯಿಂದ ಶುರು

Posted By:
Subscribe to Filmibeat Kannada

ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ 'ನನ್ನ ಮೊದಲ ಸಿನಿಮಾ' ಎಂಬ ಹೊಸ ಲೇಖನ ಸರಣಿ ನಾಳೆಯಿಂದ ಶುರು ಆಗುತ್ತಿದೆ. ಮೊದಲ ಲೇಖನ ಕನ್ನಡ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ 'ಗೋವಿಂದಾಯ ನಮಃ' ಸಿನಿಮಾದ ಬಗ್ಗೆ ಇರಲಿದೆ. ಇಲ್ಲಿ ಎಲ್ಲಿ ಹೇಳಿಕೊಂಡಿರದ ತಮ್ಮ ಮೊದಲ ಸಿನಿಮಾದ ಅನೇಕ ವಿಷಯವನ್ನು ಮುಕ್ತವಾಗಿ ಪವನ್ ಒಡೆಯರ್ ಹಂಚಿಕೊಂಡಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ಅವರ ಜೊತೆ ಕೆಲವೇ ದಿನ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದು, ಡೈರೆಕ್ಟರ್ ಆಗುವ ಕನಸು ಹುಟ್ಟಿದ್ದು, ನಿರ್ಮಾಪಕರಿಗಾಗಿ ಅಲೆದಾಟ, 10 ನಿಮಿಷದಲ್ಲಿ 'ಪ್ಯಾರ್ ಗೆ ಆಗ್ಬಿಟ್ಟತೆ' ಹಾಡು ಬರೆದಿದ್ದು, ರಿಲೀಸ್ ಹಿಂದಿನ ದಿನ ರಾತ್ರಿ 4 ಗಂಟೆ ವರೆಗೆ ಚಿತ್ರಮಂದಿರದಲ್ಲಿ ಕುಳಿತುಕೊಂಡು ಯೋಚನೆ ಮಾಡಿದ್ದು ಹೀಗೆ ಅನೇಕ ಕುತೂಹಲಕಾರಿ ವಿಷಯವನ್ನು ನಗುನಗುತ್ತಾ ಮಾತನಾಡಿದ್ದಾರೆ.

'ನನ್ನ ಮೊದಲ ಸಿನಿಮಾ' : ವಾರಾಂತ್ಯದಲ್ಲಿ 'ಫಿಲ್ಮಿಬೀಟ್ ಕನ್ನಡ' ವಿಶೇಷ ಲೇಖನ ಸರಣಿ

Kannada director Pawan Wadeyar interview

'ಸಾವಿರ ಮೈಲಿಯ ಪಯಣ ಶುರುವಾಗುವುದು ಮೊದಲ ಹೆಜ್ಜೆಯಿಂದ..' ಎಂಬ ಮಾತಿದೆ. ಮಗುವಿನ ಮೊದಲ ಹೆಜ್ಜೆ, ಮೊದಲು ಶಾಲೆಗೆ ಹೋದ ದಿನ, ಮೊದಲ ಪ್ರೀತಿ, ಮೊದಲ ಗೆಲುವು, ಮೊದಲ ಅನುಭವಗಳು.. ಹೀಗೆ 'ಮೊದಲು' ಎನ್ನುವುದಕ್ಕೆ ನಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ನಮಗೆ ಗೊತ್ತಿಲ್ಲದೆ ನಾವೇ ನೀಡಿರುತ್ತೇವೆ. ಒಂದು ಸಿನಿಮಾದ ಒಳಗೆ ಒಂದು ಕಥೆ ಇದ್ದರೆ, ಆ ಸಿನಿಮಾ ಹುಟ್ಟುವುದಕ್ಕೂ ಒಂದು ಕಥೆ ಇರುತ್ತದೆ. ಅಂತಹ ಕಥೆಯನ್ನು 'ನನ್ನ ಮೊದಲ ಸಿನಿಮಾ' ಮೂಲಕ ಹೇಳುವ ಪ್ರಯತ್ನ ನಮ್ಮದು. ಎರಡುವರೆ ಗಂಟೆ ಚಿತ್ರಮಂದಿರದಲ್ಲಿ ಓಡುವ ಸಿನಿಮಾದ ಹಿಂದಿನ ಪರಪಂಚದ ದರ್ಶನ ಇಲ್ಲಿ ನಿಮಗೆ ಆಗಲಿದೆ. ಓದಿ.. ನಿಮ್ಮ ಅಭಿಪ್ರಾಯ ತಿಳಿಸಿ....

English summary
Kannada director Pawan Wadeyar interview about his first movie 'Govindaya Namaha' will be published Tomorrow (January 6).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X