»   » ಆಗಸ್ಟ್ 2ಕ್ಕೆ ಥಿಯೇಟರ್ ನಲ್ಲಿ ಕೇಸ್ ನಂ.18/9

ಆಗಸ್ಟ್ 2ಕ್ಕೆ ಥಿಯೇಟರ್ ನಲ್ಲಿ ಕೇಸ್ ನಂ.18/9

Posted By:
Subscribe to Filmibeat Kannada

ತಮಿಳು ಚಿತ್ರರಂಗದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದ್ದ 'ವಜಕ್ಕು ಎನ್ನ್ 18/9' ಚಿತ್ರ ಕನ್ನಡಕ್ಕೆ 'ಕೇಸ್ ನಂ.18/9' ಆಗಿ ಬರುತ್ತಿದೆ. ನಿರಂಜನ್ ಶೆಟ್ಟಿ, ಸಿಂಧು ಲೋಕನಾಥ್, ಶ್ವೇತಾ ಪಂಡಿತ್, ರಂಗಾಯಣ ರಘು ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

ಈ ಚಿತ್ರದ ಮೂಲಕ ನಿರಂಜನ್ ಶೆಟ್ಟಿ ಅವರು ನಾಯಕನಟನಾಗಿ ಪರಿಚಯವಾಗುತ್ತಿದ್ದಾರೆ. ಮಹೇಶ್ ರಾವ್ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರ ಇದು. ಈಗಾಗಲೆ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.


ಅರ್ಜುನ್ ಜನ್ಯಾ ಅವರ ಸಂಗೀತ ಚಿತ್ರಕ್ಕಿದ್ದು, ಇದು ಅವರ ಸಂಗೀತ ಸಂಯೋಜನೆಯ 25ನೇ ಚಿತ್ರ. ಶ್ರೀನಗರ ಕಿಟ್ಟಿ ಅವರ 'ಟೋನಿ' ಚಿತ್ರದ ಜೊತೆ 'ಕೇಸ್ ನಂ.18/9' ಬಿಡುಗಡೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಆಗಸ್ಟ್ 2ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ.

ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಚಿತ್ರ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಚಿತ್ರದ ಸ್ಯಾಟಲೈಟ್ ರೈಟ್ಸ್ ಗೂ ಭರ್ಜರಿ ಬೆಲೆ ಸಿಕ್ಕಿದ್ದು, ರು.1,57,80,000 ಮಾರಾಟವಾಗಿರುವುದು ವಿಶೇಷ. ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಅವರು ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಮೂಲ ಚಿತ್ರದಲ್ಲಿನ ಕೆಲವು ಅನಗತ್ಯ ಸನ್ನಿವೇಶಗಳನ್ನು ಕೈಬಿಟ್ಟಿದ್ದು, ಹೆಚ್ಚುವರಿಯಾಗಿ ಎರಡು ಹಾಡುಗಳನ್ನು ಸೇರಿಸಿಕೊಂಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯವರಾದ ಪ್ರವೀಣ್ ಕುಮಾರ್ ಶೆಟ್ಟಿ, ಶಿವಾನಂದ್ ಶೆಟ್ಟಿ, ವಿಕೆ. ಮೋಹನ್ ಹಾಗೂ ಕಾಂತಿ ಶೆಟ್ಟಿ ನಾಲ್ವರು ನಿರ್ಮಾಪಕರು. (ಏಜೆನ್ಸೀಸ್)

English summary
Kannada movie Case No 18/9, remake of critically acclaimed Tamil movie Vazhakku Enn 18/9, is all set to hit screens on 2nd August. Main theatre - Aparna. The movie has Sindhu Lokanath and Niranjan Shetty in the lead roles. 
Please Wait while comments are loading...