»   » ನಾಲ್ಕೇ ದಿನಕ್ಕೆ ನಾಲ್ಕು ಕೋಟಿ ಬಾಚಿದ ಶಿವ ಚಿತ್ರ

ನಾಲ್ಕೇ ದಿನಕ್ಕೆ ನಾಲ್ಕು ಕೋಟಿ ಬಾಚಿದ ಶಿವ ಚಿತ್ರ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಶಿವ' ಚಿತ್ರ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಬಾಕ್ಸಾಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ ನಾಲ್ಕು ಕೋಟಿ ಗಳಿಸಿದೆ ಎನ್ನುತ್ತವೆ ಮೂಲಗಳು.

ಕಂಪನಿ ಫಿಲಂಸ್ ಬ್ಯಾನರ್ ನಲ್ಲಿ ಕೆ.ಪಿ.ಶ್ರೀಕಾಂತ್ ಹಾಗೂ ಕಾಂತರಾಜ್ ನಿರ್ಮಾಣದ 'ಶಿವ' ಚಿತ್ರ 2೦0ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯಾದ ದಿನವೇ ರು.2.15 ಕೋಟಿ ಕಲೆಕ್ಷನ್ ಮಾಡಿತ್ತು.

ಕನ್ನಡ ಚಿತ್ರಗಳು ಬಾಕ್ಸಾಫೀಸಲ್ಲಿ ಈ ಮಟ್ಟದಲ್ಲಿ ಸದ್ದು ಮಾಡಿ ಬಹಳಷ್ಟು ದಿನಗಳಾಗಿತ್ತು. ಈಗ ಶಿವ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಶಿವ ತಾಂಡವಾಡಿದೆ. ಈ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸೋಮವಾರ (ಆ.27) ಹಲವಾರು ಚಿತ್ರಮಂದಿರಗಳಿಗೆ ಭೇಟಿ ನೀಡಿದರು.

ಬಳ್ಳಾರಿ, ಹೊಸಪೇಟೆಯಲ್ಲೂ ಶಿವ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹತ್ತು ವರ್ಷಗಳ ಗ್ಯಾಪ್ ಬಳಿಕ ಓಂ ಪ್ರಕಾಶ್ ರಾವ್ ಡೈರೆಕ್ಷನ್ ನಲ್ಲಿ ಶಿವಣ್ಣ ಅಭಿನಯಿಸಿರುವ ಚಿತ್ರವಿದು. ಜೋಗಯ್ಯ ನಂತರ ಶಿವಣ್ಣ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಬಂದಿದ್ದ ಜೋಗಯ್ಯ ಕೂಡ 'ಫ್ಲಾಪ್'. ಹೀಗಾಗಿ ಶಿವ ಚಿತ್ರ ಶಿವಣ್ಣ ಅಭಿಮಾನಿಗಳ ಪಾಲಿಗೆ ಸಖತ್ ಇಷ್ಟವಾಗಿದೆ. ಶಿವ ಚಿತ್ರವಿಮರ್ಶೆ ಓದಿ.

ಕೆಪಿ ಶ್ರೀಕಾಂತ್ ನಿರ್ಮಾಣದ ಬಹುನಿರೀಕ್ಷೆಯ ಈ ಚಿತ್ರಕ್ಕೆ ಶಿವಣ್ಣರಿಗೆ ಮೊದಲ ಬಾರಿ ರಾಗಿಣಿ ನಾಯಕಿಯಾಗಿದ್ದಾರೆ. 'ಮೈಲಾರಿ' ನಂತರ ಶಿವಣ್ಣರ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ವಿಶೇಷ ಗ್ರಾಫಿಕ್ಸ್ ಮೂಲಕ ಚಿತ್ರವು ತಾಂತ್ರಿಕವಾಗಿ ತುಂಬಾ ಅದ್ದೂರಿಯಾಗಿದ್ದು ಚಿತ್ರದ ಹೈಲೈಟ್. (ಒನ್ ಇಂಡಿಯಾ ಕನ್ನಡ)

English summary
Hat Trick Hero Shivarajkumar's 101st film Shiva collection would come nearing to Rs. 4 crores it is estimated by trade pundits in opening weekend. N Om Prakash Rao directed film is produced by Company Enterprises KP Shrikanth and Kantharaj.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada