»   » 'ರೈತ, ಯೋಧ, ವಿದ್ಯಾರ್ಥಿ'ಯಿಂದ 'ಧೈರ್ಯಂ' ಆಡಿಯೋ ಬಿಡುಗಡೆ

'ರೈತ, ಯೋಧ, ವಿದ್ಯಾರ್ಥಿ'ಯಿಂದ 'ಧೈರ್ಯಂ' ಆಡಿಯೋ ಬಿಡುಗಡೆ

Posted By:
Subscribe to Filmibeat Kannada

ಕೃಷ್ಣ ಅಜಯ್ ರಾವ್ ನಟನೆಯ 'ಧೈರ್ಯಂ' ಸಿನಿಮಾದ ಆಡಿಯೋ ಇಂದು (ಮೇ 27) ಬಿಡುಗಡೆಯಾಗಿದೆ. ಸಮಾಜದ ಮೂರು ಜನ ವಿಶೇಷ ವ್ಯಕ್ತಿಗಳು ಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಿದ್ದು, ತುಂಬಾ ವಿಶೇಷವಾಗಿತ್ತು.[ವಿಧಾನಸೌಧ ಮುಂದೆ 'ಧೈರ್ಯಂ' ಆಡಿಯೋ ಬಿಡುಗಡೆ ಮಾಡುವವರು ಯಾರು.?]

ವಿಧಾನ ಸೌಧ ಮುಂದೆ 'ರೈತ, ಯೋಧ ಹಾಗೂ ವಿದ್ಯಾರ್ಥಿ'ಯಿಂದ 'ಧೈರ್ಯಂ' ಚಿತ್ರದ ಆಡಿಯೋ ಅನಾವರಣ ಆಯಿತು. ಯೋಧ ಗುರುಪ್ರಸಾದ್, ರೈತ ಗೋಪಾಲ್ ಗೌಡ, ವಿದ್ಯಾರ್ಥಿ ಲಿಖಿತ್ ರಾಜ್ ಮೂವರು 'ಧೈರ್ಯಂ' ಆಡಿಯೋವನ್ನ ರಿಲೀಸ್ ಮಾಡಿದರು. ಈ ವೇಳೆ ಚಿತ್ರದ ನಾಯಕಿ ಅಧಿತಿ ಮತ್ತು ನಟ ಅಜಯ್ ರಾವ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.[ವಿಧಾನ ಸೌಧ ಮುಂದೆ ನಾಳೆ 'ಧೈರ್ಯಂ' ಹಾಡುಗಳ ಅದ್ಧೂರಿ ಅನಾವರಣ]

Kannada Movie Dhairyam Audio Released

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ''ಜಿಂಕೆಮರಿ' ಖ್ಯಾತಿಯ ಎಮಿಲ್ ಸಂಗೀತ ನೀಡಿದ್ದಾರೆ. ವಿಜಯ ಪ್ರಕಾಶ್ ಒಂದು ಹಾಡನ್ನ ಹಾಡಿರುವುದು ಮತ್ತೊಂದು ವಿಶೇಷ. ಆನಂದ್ ರಾಮ್ ಮತ್ತು ಶಿವತೇಜಸ್ ಸಾಹಿತ್ಯ ಬರೆದಿದ್ದಾರೆ.[ಆಡಿಯೋ ಬಿಡುಗಡೆ ಸಜ್ಜಾದ ಅಜಯ್ ರಾವ್ 'ಧೈರ್ಯಂ']

Kannada Movie Dhairyam Audio Released

'ಮಳೆ' ಸಿನಿಮಾವನ್ನ ನಿರ್ದೇಶನ ಮಾಡಿದ್ದ ಶಿವ ತೇಜಸ್ 'ಧೈರ್ಯಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಿ.ಕೆ ರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಫ್ಯಾಮಿಲಿ ಡ್ರಾಮಾದ ಜೊತೆಗೆ ಲವ್, ಆಕ್ಷನ್, ಸೆಂಟಿಮೆಂಟ್ ಹೀಗೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆಯಂತೆ.

English summary
Ajay rao starrer kannada Movie 'Dhairyam' Audio Released Today (May 27th) at Vidhana Soudha.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada