»   » ವಿಧಾನ ಸೌಧ ಮುಂದೆ ನಾಳೆ 'ಧೈರ್ಯಂ' ಹಾಡುಗಳ ಅದ್ಧೂರಿ ಅನಾವರಣ

ವಿಧಾನ ಸೌಧ ಮುಂದೆ ನಾಳೆ 'ಧೈರ್ಯಂ' ಹಾಡುಗಳ ಅದ್ಧೂರಿ ಅನಾವರಣ

Posted By:
Subscribe to Filmibeat Kannada

ಕೃಷ್ಣ ಅಜಯ್ ರಾವ್ ನಟನೆಯ 'ಧೈರ್ಯಂ' ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ನಾಳೆ (ಮೇ 27) ನಡೆಯಲಿದೆ. ಚಿತ್ರತಂಡದ ಪ್ಲಾನ್ ನಂತೆ ಚಿತ್ರದ ಹಾಡುಗಳು ವಿಧಾನ ಸೌಧ ಮುಂದೆ ಅನಾವರಣ ಆಗಲಿದೆ.

'ಧೈರ್ಯಂ' ಚಿತ್ರದ ಆಡಿಯೋವನ್ನು ವಿಧಾನ ಸೌಧ ಮುಂದೆ ರಿಲೀಸ್ ಮಾಡುವುದಕ್ಕೂ ಒಂದು ಮುಖ್ಯ ಕಾರಣ ಇದ್ದು, ಅದನ್ನು ಆಡಿಯೋ ರಿಲೀಸ್ ಸಮಯದಲ್ಲಿ ರಿವೀಲ್ ಮಾಡಲಿದ್ದಾರಂತೆ. ಅಂದಹಾಗೆ, ಸಿನಿಮಾದ ಆಡಿಯೋವನ್ನು ಮೂರು ಪ್ರಮುಖ ವ್ಯಕ್ತಿಗಳಿಂದ ರಿಲೀಸ್ ಮಾಡಿಸಲಿದ್ದು ಅದು ಯಾರು ಎಂಬುದು ನಾಳೆ ತಿಳಿಯಲಿದೆ.[ಆಡಿಯೋ ಬಿಡುಗಡೆ ಸಜ್ಜಾದ ಅಜಯ್ ರಾವ್ 'ಧೈರ್ಯಂ']

'Dhairyam' movie audio will be out tomorrow (May 27)

ಈ ಹಿಂದೆ 'ಮಳೆ' ಸಿನಿಮಾವನ್ನ ನಿರ್ದೇಶನ ಮಾಡಿದ್ದ ಶಿವ ತೇಜಸ್ 'ಧೈರ್ಯಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫ್ಯಾಮಿಲಿ ಡ್ರಾಮಾದ ಜೊತೆಗೆ ಲವ್, ಆಕ್ಷನ್, ಸೆಂಟಿಮೆಂಟ್ ಹೀಗೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆಯಂತೆ.

ಒಬ್ಬ ಮಿಡಲ್ ಕ್ಲಾಸ್ ಹುಡುಗ ಏನಾದರೂ ಸಾಧಿಸುವುದಕ್ಕೆ ಹೊರಟಾಗ ಅವನಿಗೆ ಆಗುವ ತೊಂದರೆಗಳ ಮೇಲೆ ಸಿನಿಮಾದ ಕಥೆ ಸಾಗಿದೆ. ಜೊತೆಗೆ ಎಲ್ಲರ ಜೀವನದಲ್ಲಿ ಬರುವ ಸಮಸ್ಯೆಗಳನ್ನ ಚಿತ್ರದಲ್ಲಿ ತೋರಿಸಿದ್ದಾರೆ. 'ಧೈರ್ಯಂ' ಚಿತ್ರದಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಕೂಡ ಇದ್ದು ಅದಿತಿ ಎನ್ನುವ ಹೊಸ ಹುಡುಗಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ.[ವಿಧಾನಸೌಧ ಮುಂದೆ 'ಧೈರ್ಯಂ' ಆಡಿಯೋ ಬಿಡುಗಡೆ ಮಾಡುವವರು ಯಾರು.?]

'Dhairyam' movie audio will be out tomorrow (May 27)

''ಜಿಂಕೆಮರಿ' ಖ್ಯಾತಿಯ ಎಮಿಲ್ 'ಧೈರ್ಯಂ' ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ವಿಜಯ ಪ್ರಕಾಶ್ ಒಂದು ಹಾಡನ್ನ ಹಾಡಿದ್ದಾರೆ. ಸದ್ಯ, ಸಿನಿಮಾದ ಆಡಿಯೋ ರಿಲೀಸ್ ಅದ್ದೂರಿಯಾಗಿ ಮಾಡಬೇಕೆಂದು ನಿರ್ಧರಿಸಿರುವ ಚಿತ್ರತಂಡ ಎಲ್ಲ ತಯಾರಿಗಳನ್ನು ಮಾಡಿಕೊಂಡಿದೆ.

English summary
Ajay rao starrer 'Dhairyam' kannada movie audio will be out tomorrow (may 27) in vidhana soudha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada