»   » ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ 'ಹೆಬ್ಬೆಟ್ ರಾಮಕ್ಕ' ಟ್ರೇಲರ್ ಬಿಡುಗಡೆ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ 'ಹೆಬ್ಬೆಟ್ ರಾಮಕ್ಕ' ಟ್ರೇಲರ್ ಬಿಡುಗಡೆ

Posted By:
Subscribe to Filmibeat Kannada

ನಟಿ ತಾರಾ ಅಭಿನಯದ 'ಹೆಬ್ಬೆಟ್ ರಾಮಕ್ಕ' ಚಿತ್ರಕ್ಕೆ 2017 ಸಾಲಿನ ಪ್ರತಿಷ್ಟಿತ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ 'ಅತ್ಯುತ್ತಮ ಚಿತ್ರ' ಪ್ರಶಸ್ತಿ ಪಡೆದುಕೊಂಡಿರುವ 'ಹೆಬ್ಬೆಟ್ ರಾಮಕ್ಕ' ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

ರಾಜಕೀಯ ಪ್ರವೇಶ ಮಾಡುವ ಅನಕ್ಷರಸ್ಥ ಮಹಿಳೆಯ ಸುತ್ತ ಹೆಣೆದಿರುವ ಕಥೆಯೇ 'ಹೆಬ್ಬೆಟ್ ರಾಮಕ್ಕ'. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಕಥಾನಾಯಕಿ ರಾಮಕ್ಕನಿಗೆ ಸಹಿ ಹಾಕಲು ಬರುವುದಿಲ್ಲ. ಪತಿ ಸೂಚಿಸಿದ ಜಾಗದಲ್ಲೆಲ್ಲಾ, ಹಿಂದು ಮುಂದು ಯೋಚಿಸದೆ ಹೆಬ್ಬೆಟ್ಟು ಒತ್ತುವ ರಾಮಕ್ಕ ಕಡೆಗೆ ಮಹಿಳೆಯರ ಪರ, ಸಮಾಜದ ಒಳಿತಿನ ಪರ ಹೇಗೆ ದನಿಯಾಗಿ ನಿಲ್ಲುತ್ತಾರೆ ಎಂಬುದೇ ಚಿತ್ರದ ಕಥಾಹಂದರ.

Kannada Movie Hebbet Ramakka trailer released

ನಟಿ ತಾರಾ ಅಭಿನಯದ 'ಹೆಬ್ಬೆಟ್ ರಾಮಕ್ಕ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗೌರವ

ರಾಮಕ್ಕ ಎಂಬ ದಿಟ್ಟ ಮಹಿಳೆಯ ಪಾತ್ರಕ್ಕೆ ಜೀವ ತುಂಬಿರುವವರು ನಟಿ ತಾರಾ. ರಾಮಕ್ಕನ ಪತಿಯ ಪಾತ್ರದಲ್ಲಿ ದೇವರಾಜ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಾಗರಾಜ್ ಮೂರ್ತಿ ಹಾಗೂ ಸುರೇಶ್ ಕೂಡ ಅಭಿನಯಿಸಿದ್ದಾರೆ.

ಮಹಿಳಾ ರಾಜಕಾರಣಿಗಳಿಗೆ ಸ್ಫೂರ್ತಿ ನೀಡುವ ಚಿತ್ರಕ್ಕೆ ಎನ್.ಆರ್.ನಂಜುಂಡೇ ಗೌಡ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ 'ಹೆಬ್ಬೆಟ್ ರಾಮಕ್ಕ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಇದೀಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಸದ್ಯದಲ್ಲೇ ನಿಮ್ಮೆಲ್ಲರ ಮುಂದೆ 'ಹೆಬ್ಬೆಟ್ ರಾಮಕ್ಕ' ಬರಲಿದ್ದಾರೆ.

English summary
65th National Film Awards: Kannada Actress Tara starrer 'Hebbettu Ramakka' wins Best Kannada Film. 'Hebbettu Ramakka' trailer is out

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X