»   » ಆಗಸ್ಟ್ ನಲ್ಲಿ 'ಜಾಗ್ವಾರ್' ಅಬ್ಬರ ಶುರುವಾಗುತ್ತೆ ಕಣ್ರೀ

ಆಗಸ್ಟ್ ನಲ್ಲಿ 'ಜಾಗ್ವಾರ್' ಅಬ್ಬರ ಶುರುವಾಗುತ್ತೆ ಕಣ್ರೀ

Posted By:
Subscribe to Filmibeat Kannada

ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಸಿನಿಮಾದ ಶೂಟಿಂಗ್ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಭರದಿಂದ ಸಾಗುತ್ತಿದ್ದು, ಇನ್ನೇನು ಕೊನೆಯ ಹಂತದಲ್ಲಿದೆ. ಈಗಾಗಲೇ ಎರಡನೇ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಚಿತ್ರದ ಅರ್ಧ ಭಾಗ ಮುಗಿಸಿರುವ ಖುಷಿಯಲ್ಲಿದೆ.

ಇನ್ನೇನು ಚಿತ್ರದ ಹಾಡುಗಳು ಮತ್ತು ಕೆಲವು ಸಾಹಸ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದೆ. ಸದ್ಯಕ್ಕೆ ಮೈಸೂರಿನ ಬೇರೆ ಬೇರೆ ಲೊಕೇಶನ್ ಗಳಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ಆಗಸ್ಟ್ ತಿಂಗಳಿನಲ್ಲಿ ಚಿತ್ರೀಕರಣ ಮುಗಿಸುವ ಯೋಜನೆ ಹಾಕಿಕೊಂಡಿದೆ.[ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ!]


Kannada Movie 'Jaguar' to complete in August 2016

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ 'ಜಾಗ್ವಾರ್' ಸಿನಿಮಾದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಅವರ ತಂದೆಯ ಪಾತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಅವರು ಕಾಣಿಸಿಕೊಳ್ಳುತ್ತಿದ್ದಾರೆ.[ಫೆ.12 ಕ್ಕೆ ಕೊನೆಯಾಗಬೇಕಿದ್ದ 'ಜಾಗ್ವಾರ್' ಶೂಟಿಂಗ್ ಮುಂದೂಡಿದ್ದೇಕೆ?]


Kannada Movie 'Jaguar' to complete in August 2016

ಎಸ್.ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಬರೆದಿರುವ ಕಥೆಯನ್ನು ನಿರ್ದೇಶಕ ಮಹದೇವ್ ಅವರು ತೆರೆ ಮೇಲೆ ತರುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್ ತಮನ್ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ನಿಖಿಲ್ 'ಜಾಗ್ವಾರ್'ಗೆ ನಾಯಕಿ ಯಾರು ಗೊತ್ತಾಯ್ತಾ?]


Kannada Movie 'Jaguar' to complete in August 2016

ಕೇರಳದ ಮಲ್ಲುಕುಟ್ಟಿ ನಟಿ ಕಮ್ ಮಾಡೆಲ್ ದೀಪ್ತಿ ಸತಿ ಅವರು 'ಜಾಗ್ವಾರ್' ಸಿನಿಮಾದಲ್ಲಿ ನಿಖಿಲ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಲಿದ್ದಾರೆ. ಇನ್ನುಳಿದಂತೆ ನಟ ಆದಿತ್ಯ ಮೆನನ್, ನಟ ಸಂಪತ್ ಕುಮಾರ್ ಮುಂತಾದವರು ಪ್ರಮುಖ ಪಾತ್ರ ವಹಿಸಲಿದ್ದಾರೆ.


Kannada Movie 'Jaguar' to complete in August 2016

ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ತಿಂಗಳಿನಲ್ಲಿ ಶೂಟಿಂಗ್ ಮುಕ್ತಾಯಗೊಳಿಸಿ ಆದಷ್ಟು ಬೇಗನೇ ಸಿನಿಮಾ ರಿಲೀಸ್ ಮಾಡುವ ಉತ್ಸಾಹದಲ್ಲಿದೆ ಚಿತ್ರತಂಡ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಖುದ್ದು ಮಗನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

English summary
The shooting for Nikhil Kumar starrer Kannada Movie 'Jaguar' is half way complete and the shooting for the film including songs and fights is expected to conclude by August of this year. Kannada Actor Nikhil Kumar, Actress Deepthi Sati in the lead role. The Movie is directed by Mahadev.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X