»   » ಏಪ್ರಿಲ್ 3 ರಿಂದ ಹೊಸ 'ಖೈದಿ' ಆಟ ಶುರು..!

ಏಪ್ರಿಲ್ 3 ರಿಂದ ಹೊಸ 'ಖೈದಿ' ಆಟ ಶುರು..!

Posted By:
Subscribe to Filmibeat Kannada

'ಖೈದಿ' ಅಂದ ತಕ್ಷಣ ಕನ್ನಡ ಸಿನಿ ಪ್ರಿಯರಿಗೆ ಥಟ್ ಅಂತ ನೆನಪಾಗುವುದು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ಖೈದಿ' ಸಿನಿಮಾ. 1984 ರಲ್ಲಿ ತೆರೆಕಂಡ 'ಖೈದಿ' ಚಿತ್ರ ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾಗಳಲ್ಲೊಂದು. ಇದೀಗ ಇದೇ ಹೆಸರನ್ನಿಟ್ಟುಕೊಂಡು ಹೊಚ್ಚ ಹೊಸ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

'ಸೈಕೋ' ಚಿತ್ರದ ಮೂಲಕ ಎಲ್ಲರನ್ನ ರಂಜಿಸಿದ್ದ ಧನುಷ್ ಈಗ 'ಖೈದಿ'ಯಾಗಿದ್ದಾರೆ. ಲಾಂಗ್ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚಿರುವ ಧನುಷ್, 'ಖೈದಿ' ಚಿತ್ರದಲ್ಲಿ ಸೂಪರ್ ಆಕ್ಷನ್ ಜೊತೆಗೆ ಮಸ್ತ್ ಮಸ್ತ್ ಸ್ಟೆಪ್ ಹಾಕಿರುವುದು ಸ್ಪೆಷಲ್.

ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಎ' ಚಿತ್ರದಲ್ಲಿ ನಟಿಸಿದ್ದ ಚಾಂದಿನಿ ಕೂಡ ಬಹು ವರ್ಷಗಳ ನಂತ್ರ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿರುವುದು 'ಖೈದಿ' ಕೃಪೆಯಿಂದಲೇ.

chandini-dhanush

ಇಷ್ಟೆಲ್ಲಾ ವಿಶೇಷತೆಗಳನ್ನೊಳಗೊಂಡಿರುವ 'ಖೈದಿ' ಸಿನಿಮಾ ಏಪ್ರಿಲ್ 3 ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕರುಗಳಾದ ಜಸ್ಟಿನ್-ಉದಯ್ ಮ್ಯೂಸಿಕ್ ನೀಡಿರುವ 'ಖೈದಿ' ಹಾಡುಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್ ಇದೆ.[ಗಾಂಧಿನಗರದ ಹೊಸ 'ಖೈದಿ'ಯ ಆಟ ನೋಡಿರಣ್ಣ]

ಸೂಪರ್ ಹಿಟ್ 'ತಾಳೆ ಹೂವ ಪೊದೆಯಿಂದ' ಹಾಡಿನ ರೀಮಿಕ್ಸ್ ಎಲ್ಲೆಡೆ ಪಾಪ್ಯುಲರ್ ಆಗುತ್ತಿದೆ. ಮೊದಲ ಪ್ರಯತ್ನದಲ್ಲೇ ಇಷ್ಟೆಲ್ಲಾ ಪ್ರಯೋಗಗಳನ್ನ ಮಾಡಿರುವುದು ನಿರ್ದೇಶಕ ಗುರುದತ್.

'ಸೈಕೋ' ಚಿತ್ರಕ್ಕೆ ಬರೀ ನಿರ್ಮಾಣದ ಹೊಣೆಯನ್ನ ಹೊತ್ತಿದ್ದ ಗುರುದತ್, 'ಖೈದಿ'ಗೆ ಕಥೆ-ಚಿತ್ರಕಥೆ-ಸಂಭಾಷಣೆ ಜೊತೆ ನಿರ್ದೇಶನದ ಹೊಣೆಯನ್ನ ಹೊತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಅದ್ಧೂರಿಯಾಗಿ ರೆಡಿಯಾಗಿರುವ 'ಖೈದಿ'ಯ ಅದೃಷ್ಟ ಪರೀಕ್ಷೆ ಏಪ್ರಿಲ್ 3ಕ್ಕೆ ನಿಗದಿಯಾಗಿದೆ. ಹಳೆ 'ಖೈದಿ'ಯಂತೆ ಹೊಸ 'ಖೈದಿ'ಗೂ ಜೈಕಾರ ಹಾಕುವ ಜವಾಬ್ದಾರಿ ನಿಮ್ಮದು. (ಫಿಲ್ಮಿಬೀಟ್ ಕನ್ನಡ)

English summary
Kannada Actor Dhanush starrer 'Khaidi' is all set to release on April 3rd. Actress Chandini is making comeback with this film, directed by debutant Gurudutt.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada