Don't Miss!
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Automobiles
ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Sports
ODIನಲ್ಲಿ ಭರ್ಜರಿ ಆಟ, ಆದರೆ ಟಿ20ಯಲ್ಲಿ ವೈಫಲ್ಯ: ಟೀಮ್ ಇಂಡಿಯಾದ 3 ಯುವ ಆಟಗಾರರ ಕಥೆಯಿದು!
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡಕ್ಕೆ ಬರಲಿದ್ದಾರೆಯೆ ವಿಜಯ್ ಸೇತುಪತಿ? ಸಿನಿಮಾ ಯಾವುದು? ಪಾತ್ರವೇನು?
ದಕ್ಷಿಣ ಭಾರತದ ಖ್ಯಾತ ನಟ, ಹರಿವ ನೀರಿನಂತಾ ಅಭಿನಯ ನೀಡುವ ವಿಜಯ್ ಸೇತುಪತಿ ಅವರನ್ನು ಕನ್ನಡ ಸಿನಿಮಾಕ್ಕೆ ಕರೆತರುವ ಪ್ರಯತ್ನ ಗಟ್ಟಿಯಾಗಿ ನಡೆಯುತ್ತಿದೆ.
Recommended Video
ಹೌದು, ತಮಿಳು, ತೆಲುಗು ಸಿನಿರಂಗದಲ್ಲಿ ಭಾರಿ ಬೇಡಿಕೆ ಇರುವ ವಿಜಯ್ ಸೇತುಪತಿ ಈಗ ಹಿಂದಿಯಲ್ಲಿ ಅಮಿರ್ ಖಾನ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇಂತಿಪ್ಪ ವಿಜಯ್ ಅವರನ್ನು ಕನ್ನಡ ಸಿನಿಮಾ ವೊಂದಕ್ಕೆ ಕರೆತರಲಾಗುತ್ತಿದೆ. ಮಾತುಕತೆಗಳು ಸಾಗಿವೆ.
ಶ್ರೀಮುರಳಿ ನಟಿಸಿರುವ ಮದಗಜ ಸಿನಿಮಾಕ್ಕಾಗಿ ವಿಜಯ್ ಸೇತುಪತಿ ಅವರನ್ನು ಕರೆತರುವ ಯತ್ನ ಮಾಡಲಾಗುತ್ತಿದೆ. ಆದರೆ ಸೇತುಪತಿ ಇನ್ನೂ ಓಕೆ ಎಂದಿಲ್ಲ. ಯೋಜನೆ ಇನ್ನೂ ಮಾತು-ಕತೆ ಹಂತದಲ್ಲಿದೆ.

ಬ್ಯುಸಿ ನಟ ವಿಜಯ್ ಸೇತುಪತಿ ಒಪ್ಪುತ್ತಾರಾ?
ಬಹಳ ಬ್ಯುಸಿ ನಟ ವಿಜಯ್ ಸೇತುಪತಿ ಒಂದೊಮ್ಮೆ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದರೆ ಜಗಪತಿ ಬಾಬು ಅವರು ಆ ಪಾತ್ರವನ್ನು ನಿರ್ವಹಿಸಲಿದ್ದಾರೆ. ವಿಜಯ್ ಸೇತಪತಿ ಅಥವಾ ಜಗಪತಿ ಬಾಬು ಇಬ್ಬರಲ್ಲಿ ಒಬ್ಬರು ಮದಗಜದ ವಿಲನ್ ಪಾತ್ರದಲ್ಲಿರಲಿದ್ದಾರೆ.

ಶೇ 30 ರಷ್ಟು ಚಿತ್ರೀಕರಣ ಮುಗಿದಿದೆ
ಮದಗಜ ಸಿನಿಮಾದ ಶೇ 30 ಭಾಗ ಚಿತ್ರೀಕರಣ ಮುಗಿದಿದ್ದು ಕೊರೊನಾ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಜುಲೈ 1 ರಿಂದ ಅರ್ಧಕ್ಕೆ ನಿಂತ ಚಿತ್ರೀಕರಣ ಆರಂಭ ಮಾಡಬಹುದಾಗಿರುವ ಕಾರಣ ಮದಗಜ ಸಿನಿಮಾ ತಂಡ ಚಿತ್ರೀಕರಣ ಪ್ರಾರಂಭ ಮಾಡಲಿದೆ.

ಜುಲೈ 13 ರಿಂದ ಚಿತ್ರೀಕರಣ ಪ್ರಾರಂಭ
ಜುಲೈ 13 ರಿಂದ ನಾವು ಚಿತ್ರೀಕರಣ ಪ್ರಾರಂಭ ಮಾಡುತ್ತೇವೆ. ಮೈಸೂರು-ಗುಂಡ್ಲುಪೇಟೆಗಳಲ್ಲಿ ಚಿತ್ರೀಕರಣ ನಡೆಸುತ್ತೇವೆ. 36 ದಿನ ಚಿತ್ರೀಕರಣ ಮಾಡುತ್ತೇವೆ. ಕ್ಲೈಮ್ಯಾಕ್ಸ್ ಬಿಟ್ಟು 90 ಭಾಗ ಚಿತ್ರೀಕರಣ ಪೂರ್ತಿಯಾದಂತಾಗುತ್ತದೆ ಎಂದಿದ್ದಾರೆ ನಿರ್ದೇಶಕ ಎಸ್.ಮಹೇಶ್ ಕುಮಾರ್.

ಒಂದು ದಿನದ ಸಂಭಾವನೆ 7 ಲಕ್ಷ
ವಿಜಯ್ ಸೇತುಪತಿ ಅವರ ಒಂದು ದಿನದ ಸಂಭಾವನೆ 7 ಲಕ್ಷವಂತೆ. ಪ್ರಸ್ತುತ ಅವರು ತೆಲುಗಿನ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಗಪತಿ ಬಾಬು ಸಹ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.