»   » ಸ್ವಾತಂತ್ರ್ಯದಿನೋತ್ಸವದ ಪ್ರಯುಕ್ತ 'ಸೆಂಚುರಿ ಸ್ಟಾರ್' ಸಿನಿಮಾ ರಿಲೀಸ್

ಸ್ವಾತಂತ್ರ್ಯದಿನೋತ್ಸವದ ಪ್ರಯುಕ್ತ 'ಸೆಂಚುರಿ ಸ್ಟಾರ್' ಸಿನಿಮಾ ರಿಲೀಸ್

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ಮಾಸ್ ಲೀಡರ್' ಚಿತ್ರದ ಟ್ರೈಲರ್ ಸ್ಯಾಂಡಲ್ ವುಡ್ ನಲ್ಲಿ ಚಿಂದಿ ಉಡಾಯಿಸುತ್ತಿದೆ. ಸದ್ಯ, ಆಡಿಯೋ ಬಿಡುಗಡೆಗೆ ಅದ್ಧೂರಿಯಾಗಿ ಸಿದ್ದವಾಗುತ್ತಿರುವ 'ಲೀಡರ್' ಚಿತ್ರತಂಡ ಈ ಚಿತ್ರವನ್ನ ವಿಶೇಷ ದಿನ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಹೌದು, 'ಮಾಸ್ ಲೀಡರ್' ಚಿತ್ರ ದೇಶಪ್ರೇಮದ ಕಥಾಹಂದರವನ್ನ ಹೊಂದಿದ್ದು, ಸ್ವಾತಂತ್ರ್ಯದಿನೋತ್ಸವ ಪ್ರಯುಕ್ತ ಚಿತ್ರವನ್ನ ಬಿಡುಗಡೆ ಮಾಡಲು ಮುಂದಾಗಿದೆ. ಬಾಂಗ್ಲಾದೇಶದಿಂದ ವಲಸೆ ಬಂದವರು ಭಾರತದಲ್ಲಿ ಡ್ರಗ್ಸ್ ಮಾಫಿಯಾ ನಡೆಸುತ್ತಾರೆ. ಅದರ ವಿರುದ್ಧ ದೇಶಕಾಯೋ ಸಿಪಾಯಿ ಲೀಡರ್ ಸಮರ ಸಾರುತ್ತಾನೆ. ಕೊಲ್ಕತ್ತಾ, ಕತಾರ್, ಕಾಶ್ಮೀರದಲ್ಲಿ ಚಿತ್ರದ ಕಥೆ ಸಾಗುತ್ತೆ.

ಚಿಂದಿ ಉಡಾಯಿಸುತ್ತಿದೆ 'ಮಾಸ್ ಲೀಡರ್' ಟ್ರೈಲರ್

Kannada Movie 'Mass Leader' Release on August 11th

ಹೀಗಾಗಿ, 'ಮಾಸ್ ಲೀಡರ್' ಚಿತ್ರ ದೇಶಪ್ರೇಮದ ನಂಟು ಹೊಂದಿರುವುದರಿಂದ ಸ್ವಾತಂತ್ರ್ಯದಿನದ ಪ್ರಯುಕ್ತ ಆಗಸ್ಟ್ 11ಕ್ಕೆ ತೆರೆಕಾಣಲಿದೆಯಂತೆ. ಇನ್ನು ಜುಲೈ 9 ರಂದು ಬೆಂಗಳೂರಿನಲ್ಲಿ 'ಮಾಸ್ ಲೀಡರ್' ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು, ತೆಲುಗು ಖ್ಯಾತ ನಟ ಬಾಲಕೃಷ್ಣ ಧ್ವನಿಸುರುಳಿ ಬಿಡುಗಡೆ ಮಾಡಲಿದ್ದಾರೆ.

'ಮಾಸ್ ಲೀಡರ್'ನ ಸ್ಟೈಲ್, ಖದರ್, ಅಬ್ಬರಕ್ಕೆ ಸರಿಸಾಟಿಯಿಲ್ಲ

'ಮಾಸ್ ಲೀಡರ್' ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವಿದೆ. ಶಿವರಾಜ್ ಕುಮಾರ್ ಜೊತೆಯಲ್ಲಿ ನಟ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಆರ್ಮಿಗಳಾಗಿ ಬಣ್ಣ ಹಚ್ಚಿದ್ದಾರೆ. ಲೂಸ್ ಮಾದ ಯೋಗೇಶ್ ಸೂಪಾರಿ ಕಿಲ್ಲರ್ ಪಾತ್ರವನ್ನ ನಿರ್ವಹಿಸಿದ್ದಾರೆ. ಬಹುಭಾಷಾ ನಟಿ 'ಪ್ರಣೀತಾ ಸುಭಾಶ್' ನಾಯಕಿಯಾಗಿದ್ದು, ಶ್ರೀನಗರ ಕಿಟ್ಟಿ-ಭಾವನಾ ದಂಪತಿಯ ಪುತ್ರಿ ಪರಿಣಿತಾ, ಶಿವಣ್ಣನ ಮಗಳ ಪಾತ್ರ ನಿರ್ವಹಿಸುತ್ತಿದ್ದಾರೆ.

'ಲೀಡರ್' ಚಿತ್ರಕ್ಕೆ 'ರೋಸ್' ಖ್ಯಾತಿಯ ನಿರ್ದೇಶಕ ನರಸಿಂಹ (ಸಹನಾ ಮೂರ್ತಿ) ಆಕ್ಷನ್ ಕಟ್ ಹೇಳಿತ್ತಿದ್ದಾರೆ. ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಚನದಲ್ಲಿ ತರುಣ್ ಶಿವಪ್ಪ ಹಾಗೂ ಹಾರ್ದಿಕ್ ಗೌಡ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಮತ್ತು ಗುರು ಪ್ರಶಾಂತ್ ಛಾಯಾಗ್ರಹಣವಿದೆ.

English summary
Kannada Actor Shiva Rajkumar starrer Kannada Movie 'Mass Leader' is all set to release on August 11th all over Karnataka. The movie is directed by Narasimha, features Praneetha, Vijay Ragavendra, Loos Madha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada