»   » ಸೈಲೆಂಟಾಗಿ ನಡೀತಿದೆ 'ಮೈನಾ-2' ಶೂಟಿಂಗ್

ಸೈಲೆಂಟಾಗಿ ನಡೀತಿದೆ 'ಮೈನಾ-2' ಶೂಟಿಂಗ್

By: ಜೀವನರಸಿಕ
Subscribe to Filmibeat Kannada

ನಟ, ನಿರ್ದೇಶಕ ನಾಗಶೇಖರ್ ಇತ್ತೀಚೆಗೆ ಕಾಣಿಸ್ತಿಲ್ಲ. ನಾಗಶೇಖರ್ 'ಸಿಗರೇಟು' ಮುಗಿಸಿ ಎಲ್ಲಿ ನಾಪತ್ತೆಯಾದ್ರೂ ಅಂತ ಹುಡುಕಿದ್ರೆ ಸಕಲೇಶಪುರದ ಬಳಿ ನಾಗಶೇಖರ್ ನಡೆದಾಡಿರೋ ಕುರುಹು ದೊರೆತಿದೆ. ಇದೇನಪ್ಪಾ ಐತಿಹಾಸಿಕ ಸ್ಥಳವನ್ನ ಉತ್ಖನನ ಮಾಡುವ ಅಧಿಕಾರಿಗಳ ಹೇಳಿಕೆ ತರಹ ಇದೆ ಅನ್ಕೋಬೇಡಿ.

ಸಿಂಪಲ್ಲಾಗಿ ಹೇಳೋದಾದ್ರೆ ಸೆಂಟಿಮೆಂಟ್ ಸಿನಿಮಾಗಳ ಸರದಾರ ನಾಗಶೇಖರ್ ನಾಯಕರಾಗಿರೋ 'ಮೈನಾ' ಚಿತ್ರದ ಶೂಟಿಂಗ್ ಸದ್ದಿಲ್ಲದೆ ನಡೀತಿದೆ. ಈ ಶೂಟಿಂಗ್ ಸಕಲೇಶಪುರದ ಹಳ್ಳಿಯೊಂದರಲ್ಲಿ ಮುಹೂರ್ತ ಮಾಡಿಕೊಂಡು ಸೈಲೆಂಟಾಗಿ ಶುರುಮಾಡಿದ್ದಾರೆ ನಾಗಶೇಖರ್. [ಮೈನಾ ಚಿತ್ರ ವಿಮರ್ಶೆ]

A still from Myna

'ಮೈನಾ' ಸಿನಿಮಾ ನೋಡಿದವರಿಗೆ ಥಿಯೇಟರ್ನಲ್ಲಿ ಕಾಡಿರದೆ ಇರೋದಿಲ್ಲ. ಹಾಗಾದ್ರೆ ಈಗ ಬರ್ತಿರೋ 'ಮೈನಾ-2' ಕಥೆ ಏನು? ಅದೂ ರಿಯಲ್ ಸ್ಟೋರೀನಾ. ಇಲ್ಲ ಮೈನಾದ ಮುಂದುವರಿದ ಭಾಗವೆ? ಇಷ್ಟಕ್ಕೂ ಮುಂದುವರಿಸೋಕೆ ಹೀರೋ ಹೀರೋಯಿನ್ನೇ ಇಲ್ವಲ್ಲ.

ಮೇಲಿನ ಈ ಎಲ್ಲಾ ಪ್ರಶ್ನೆಗಳೂ ನಿಮ್ಮನ್ನ ಕಾಡದೇ ಇರೋದಿಲ್ಲ. ಆದರೆ ಇದ್ಯಾವುದಕ್ಕೂ ಉತ್ತರ ಸದ್ಯಕ್ಕಿಲ್ಲ. ಮೈನಾ ಚಿತ್ರದಲ್ಲಿ ದೂದ್ ಸಾಗರ್ ನಂತಹ ಕಣ್ಣಿಗೆ ಹಬ್ಬ ನೀಡೋ ಲೊಕೇಷನ್ ತೋರಿಸಿದ್ದ ನಾಗಶೇಖರ್ ಈ ಬಾರಿ ಗಿರಿವನಗಳ ನಾಡು ಸಕಲೇಶಪುರದಲ್ಲಿ ಮತ್ಯಾವುದೋ ಅದ್ಭುತ ಲೊಕೇಷನ್ ಹುಡುಕಿದ್ದಾರೆ ಅನ್ನಿಸ್ತಿದೆ. ಮತ್ತೊಂದು ಕಲರ್ ಫುಲ್ ಚಿತ್ರವನ್ನು ಸಿನಿಪ್ರೇಮಿಗಳು ನಿರೀಕ್ಷಿಸಬಹುದು.

English summary
It is said the director Nagashekar silently starts the shooting of Kannada movie 'Myna' sequel 'Myna 2'. At present the shooting is brisk progress in Sakleshpur. People who have watched the film might be shocked to hear the news as the film ends in a tragedy with the lovers getting killed. But that is not th
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada