»   » ಸೆನ್ಸಾರ್ ಪಾಸ್‌ ಆದ ನಟರಾಜ' ಅಕ್ಟೋಬರ್‌ 20ಕ್ಕೆ ಬರ್ತಾವ್ನೆ !

ಸೆನ್ಸಾರ್ ಪಾಸ್‌ ಆದ ನಟರಾಜ' ಅಕ್ಟೋಬರ್‌ 20ಕ್ಕೆ ಬರ್ತಾವ್ನೆ !

By: ಭರತ್‌ ಕುಮಾರ್‌
Subscribe to Filmibeat Kannada

ಸ್ಯಾಂಡಲ್‌ವುಡ್‌ನ ಯಾವ ಗಲ್ಲಿಗೋದ್ರು ನಟರಾಜ ಸರ್ವೀಸ್‌. ಯಾರನ್ನ ಕೇಳಿದ್ರೂ ನಟರಾಜ ಸರ್ವೀಸ್‌ ಅಂತಾ ಹೋದಲ್ಲಿ ಬಂದಲ್ಲಿ ನಟರಾಜನ ಗುಣಗಾನವೇ ಆಗಿತ್ತು. ಯಾವಾಗಪ್ಪ ಈ ನಟರಾಜ ಬರ್ತಾನೆ ಅಂತಾ ಕನ್ನಡ ಪ್ರೇಕ್ಷಕರು ಕುಂತಲ್ಲೆ ತಲೆಕೆಡಿಸಿಕೊಳ್ಳುವಂತಾಗಿತ್ತು ಅಂದ್ರೆ ನಂಬಲೇಬೇಕು.

ಅಂತೂ ಇಂತೂ ಈಗ ನಟರಾಜನ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೊನೆಗೂ ಚಿತ್ರದ ಬಿಡುಗಡೆಯ ದಿನಾಂಕವನ್ನ ಚಿತ್ರತಂಡ ಬಹಿರಂಗಪಡಿಸಿದೆ. ಆರಂಭದಿಂದಲೂ ಒಂದಲ್ಲ ಒಂದು ವಿಷಯದಲ್ಲಿ ನಿರೀಕ್ಷೆ ಹೆಚ್ಚಿಸುತ್ತಾ ಬರ್ತಿರೋ ನಟರಾಜ ಸರ್ವೀಸ್ ತೆರೆಗೆ ಬರಲು ದಿನಗಣನೆ ಶುರುವಾಗಿದೆ. [ಸ್ಟಾರ್ ಗಳಾಗಿದ್ದರೂ ಗಾಡಿ ಬಿಟ್ಟು ಕಾಲ್ನಡಿಗೆಯಲ್ಲಿ ಸಾಗಿದ 'ಆ' ಘಟನೆಗಳಿವು.!]


ಹೌದು, ಈಗ ತಾನೆ ಸೆನ್ಸಾರ್ ಮುಗಿಸಿದ ನಟರಾಜ ಸರ್ವೀಸ್‌ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ನೀಡಿದ್ದು, ಚಿತ್ರಮಂದಿರಕ್ಕೆ ಬರಲು ಸಿದ್ದವಾಗಿದೆ. ಅದು ಯಾವಾಗ ಅಂತಾ ಮುಂದೆ ಓದಿ....


ನಟರಾಜನಿಗೆ `ಯು' ಸರ್ಟಿಫಿಕೇಟ್

ಪವನ್‌ ಒಡೆಯರ್‌ ನಿರ್ದೇಶನದ ನಟರಾಜ್‌ ಸರ್ವೀಸ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದು, `ಯು' ಸರ್ಟಿಫಿಕೇಟ್ ನೀಡಿದೆ. ಹೀಗಾಗಿ ಚಿತ್ರದ ಬಿಡುಗಡೆ ದಿನಾಂಕವನ್ನ ಕೂಡ ಚಿತ್ರತಂಡ ಅಂತಿಮಗೊಳಿಸಿದೆ.


ರಿಲೀಸ್ ಯಾವಾಗ ?

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗಾಗಲೇ ನಟರಾಜ ಸರ್ವೀಸ್ ಬಿಡುಗಡೆಯಾಗಬೇಕಿತ್ತು. ಆದ್ರೆ, ಸೆನ್ಸಾರ್ ಗಾಗಿ ಕಾಯ್ತಿದ್ದ ಚಿತ್ರ ಈಗ ಇದೇ ತಿಂಗಳು 20ರಂದು ತೆರೆಗೆ ಬರಲು ನಿರ್ಧರಿಸಿದೆ.


ಕಾಮಿಡಿ ಎಂಟರ್‌ಟೈನರ್

ಅಂದಾಗೆ, ನಟರಾಜ್ ಸರ್ವೀಸ್ ಪಕ್ಕಾ ಕಾಮಿಡಿ ಎಂಟರ್‌ಟೈನರ್. ಸಾಮಾನ್ಯ ಮನುಷ್ಯನ ಸಣ್ಣ ಸಣ್ಣ ಅಂಶಗಳನ್ನಿಟ್ಟು ಕಥೆ ಎಣೆಯಲಾಗಿದ್ದು, ಮನರಂಜನಾತ್ಮಕವಾಗಿ ಸಿನಿಮಾ ಮಾಡಲಾಗಿದೆಯಂತೆ. ಹೀಗಾಗಿ, ನಿರ್ದೇಶಕ ಪವನ್‌ ಒಡೆಯರ್‌ರ ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರದಲ್ಲೂ ಹಾಸ್ಯದೌತಣ ಪಕ್ಕಾ ಇರಲಿದೆಯಂತೆ.


ಶರಣ್-ಮಯೂರಿ ಕಾಂಬಿನೇಶನ್‌

ಇದೇ ಮೊದಲ ಬಾರಿಗೆ ಶರಣ್ ಹಾಗೂ ಮಯೂರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣಲೀಲಾ, ಇಷ್ಟಕಾಮ್ಯ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ಸು ಕಂಡಿರೋ ಮಯೂರಿ ನಟರಾಜ ಸರ್ವೀಸ್ ಚಿತ್ರದಲ್ಲೂ ಮೋಡಿ ಮಾಡೊ ನಿರೀಕ್ಷೆಯಲ್ಲಿದ್ದಾರೆ.


ಹಾಡುಗಳು ಸೂಪರ್‌

ಅನೂಪ್‌ ಸೀಳಿನ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ಸೂಪರ್‌ಹಿಟ್‌ ಎನಿಸಿಕೊಂಡಿದೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದೆ. ಚಿತ್ರದ ಒಂದು ಟೈಟಲ್ ಹಾಡಿಗೆ ನಟ ಪುನೀತ್‌ರಾಜ್‌ಕುಮಾರ್‌ ದನಿಯಾಗಿದ್ದು, ಆ ಹಾಡು ಸೂಪರ್‌ಹಿಟ್‌ ಎನಿಸಿಕೊಂಡಿದೆ.[ಶರಣ್ ಗೆ ಸರ್ವಿಸ್ ಮಾಡಿದ ಪವರ್ ಸ್ಟಾರ್ ಪುನೀತ್]


`ಅಲ್ಲಾ ಅಲ್ಲಾ' ಟ್ರೆಂಡಿಂಗ್

ನಟರಾಜ ಸರ್ವೀಸ್ ಚಿತ್ರದ `ಅಲ್ಲಾ ಅಲ್ಲಾ' ಹಾಡು ಸಖತ್‌ ವೈರಲ್ ಆಗಿದೆ. ಪವನ್‌ ಒಡೆಯರ್‌ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದೆ. ಇನ್ನೂ ಈ ಹಾಡಿನಲ್ಲಿ ನಟ ರವಿಶಂಕರ್‌ ಕಾಣಿಸಿಕೊಂಡು ಹೆಜ್ಜೆ ಹಾಕಿರೋದು ಹಾಡಿನ ಮತ್ತಷ್ಟು ಸ್ಪೆಷಲ್‌ ಎನಿಸಿದೆ.[ಭಿಕ್ಷುಕರಾಗಿ 128 ರೂಪಾಯಿ ಸಂಪಾದಿಸಿದ ಕಾಮಿಡಿ ಕಿಂಗ್ ಶರಣ್ ]


ನಟರಾಜ ಸರ್ವೀಸ್ ನೋಡಿ ಎಂಜಾಯ್ ಮಾಡಿ

ಇಷ್ಟೆಲ್ಲಾ ವಿಶೇತೆಗಳನ್ನ ಹೊಂದಿರೋ ಈ ಚಿತ್ರಕ್ಕೆ ಎನ್‌ ಎಸ್‌ ರಾಜ್‌ಕುಮಾರ್‌ ಬಂಡವಾಳ ಹಾಕಿದ್ದಾರೆ. ಈ ತಿಂಗಳ ಅಂತ್ಯಕ್ಕೆ ನಟರಾಜ ಬೆಳ್ಳಿತೆರೆಗೆ ಬರ್ತಿದ್ದು, ಚಿತ್ರಪ್ರೇಮಿಗಳಿಗೆ ಹಾಸ್ಯೋತ್ಸವ ಅನ್ನೋದ್ರಲ್ಲಿ ಅನುಮಾನವಿಲ್ಲ.English summary
Kannada movie Nataraja Service, directed by Pawan Wadeyar, gets U certificate from Karnataka censor board. The much hyped film with star cast of Sharan and Mayuri, will hit silver screen all over Karnataka on October 20.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada