»   » ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವದಂದು ನಡೆಯಿತು 'ಆರೆಂಜ್' ಮುಹೂರ್ತ

ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವದಂದು ನಡೆಯಿತು 'ಆರೆಂಜ್' ಮುಹೂರ್ತ

Posted By:
Subscribe to Filmibeat Kannada

ಫೆಬ್ರವರಿ 11... ನಿನ್ನೆ ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಅತ್ಯಂತ ವಿಶೇಷ ದಿನ. ಯಾಕಂದ್ರೆ, ಹತ್ತು ವರ್ಷಗಳ ಹಿಂದೆ ಗಣೇಶ್-ಶಿಲ್ಪಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೇ ದಿನ.

ಹತ್ತನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದ ಗಣೇಶ್-ಶಿಲ್ಪಾ ದಂಪತಿಗೆ ನಿನ್ನೆ ಮತ್ತೊಂದು ಸರ್ಪ್ರೈಸ್ ಕಾದಿತ್ತು. ಅದು 'ಆರೆಂಜ್' ಚಿತ್ರತಂಡದಿಂದ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿರುವ ಮುಂದಿನ ಚಿತ್ರವೇ 'ಆರೆಂಜ್'. ಈ 'ಆರೆಂಜ್' ಚಿತ್ರದ ಮುಹೂರ್ತ ಸಮಾರಂಭ ನಿನ್ನೆ ಗಣೇಶ್-ಶಿಲ್ಪಾ ಅವರ ಹತ್ತನೇ ವಿವಾಹ ವಾರ್ಷಿಕೋತ್ಸವದಂದೇ ನೆರವೇರಿತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ದೇವಸ್ಥಾನದಲ್ಲಿ 'ಆರೆಂಜ್' ಮುಹೂರ್ತ ನಡೆಯಿತು.

Kannada Movie Orange goes on floors

ಈ ವರ್ಷದ ಗಣೇಶ್ ವಿವಾಹ ವಾರ್ಷಿಕೋತ್ಸವ ತುಂಬ ಸ್ಪೆಷಲ್

'ಆರೆಂಜ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಪ್ರಶಾಂತ್ ರಾಜ್. ಹಾಗ್ನೋಡಿದ್ರೆ, ಪ್ರಶಾಂತ್ ರಾಜ್ ಹಾಗೂ ಗಣೇಶ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದು.

Kannada Movie Orange goes on floors

ಈ ಹಿಂದೆ ಪ್ರಶಾಂತ್ ರಾಜ್ ಹಾಗೂ ಗಣೇಶ್ ಕಾಂಬಿನೇಶನ್ ನಲ್ಲಿ 'ಜೂಮ್' ಚಿತ್ರ ತೆರೆಕಂಡಿತ್ತು. 'ಜೂಮ್' ಸಕ್ಸಸ್ ಆದ್ದರಿಂದ ಈಗ ಈ ಜೋಡಿ 'ಆರೆಂಜ್' ಮೂಲಕ ಒಂದಾಗಿದೆ. 'ನಿಮ್ಮ ಸಿನಿಮಾಸ್' ಬ್ಯಾನರ್ ನಡಿ 'ಆರೆಂಜ್' ನಿರ್ಮಾಣ ಆಗಲಿದೆ.

English summary
Golden Star Ganesh starrer Kannada Movie 'Orange' muhoortha held at a temple in Rajarajeshwari Nagar on Feb 11th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada