»   » ಕಿಚ್ಚ ಸುದೀಪ್ ಚಿತ್ರ 'ರನ್ನ' ಮೇ.22ಕ್ಕಾದರೂ ಬರಲಿದೆಯಾ?

ಕಿಚ್ಚ ಸುದೀಪ್ ಚಿತ್ರ 'ರನ್ನ' ಮೇ.22ಕ್ಕಾದರೂ ಬರಲಿದೆಯಾ?

Posted By:
Subscribe to Filmibeat Kannada

'ರನ್ನ' ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಆದರೆ ಯಾವಾಗ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಈಗಾಗಲೆ 'ರನ್ನ' ಹಾಡುಗಳು ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಕಾತುರರಾಗಿದ್ದಾರೆ.

ಇನ್ನೊಂದೆರಡು ದಿನಗಳಲ್ಲಿ 'ರನ್ನ' ಚಿತ್ರ ಸೆನ್ಸಾರ್ ಗೆ ಹೋಗಲಿದೆ ಎಂದು ಸುದೀಪ್ ಹೇಳಿದ್ದು, ಮೇ.14ಕ್ಕೆ ಬಿಡುಗಡೆಯಾಗುತ್ತಿಲ್ಲ. ಇನ್ನೊಂದು ವಾರ ಎಂದುಕೊಂಡರೆ ಮೇ.22ಕ್ಕೆ ಪಕ್ಕಾ ಎಂದುಕೊಳ್ಳಬಹುದು. ಆ ಡೇಟ್ ಮಿಸ್ ಆದರೆ ಮೇ.29ಕ್ಕಂತೂ ಗ್ಯಾರಂಟಿಯಾಗಿ ಚಿತ್ರಮಂದಿರಗಳಿಗೆ ದಾಂಗುಡಿ ಇಡಲಿದೆ 'ರನ್ನ'. [ಕಿಚ್ಚ 'ರನ್ನ' 7ಕ್ಕೆ ಇಲ್ಲ 14ಕ್ಕೂ ಡೌಟು, ಏನು ಕಾರಣ?]


Ranna

ರನ್ನ ಇಷ್ಟೆಲ್ಲಾ ಲೇಟಾಗಲು ಕಾರಣ ಏನಿರಬಹುದು? ಮೇಕಿಂಗ್ ವಿಷಯದಲ್ಲಿ ಕಿಚ್ಚ ತಾವೇ ಸ್ವತಃ ತಲೆಕೆಡಿಸಿಕೊಂಡು ಸಿನಿಮಾವನ್ನ ತೆರೆಗೆ ತರ್ತಿದ್ದಾರಂತೆ. ನಂದಕಿಶೋರ್ ನಿರ್ದೇಶಕರಾದ್ರೂ ಸೆಟ್ ನಲ್ಲಿ ಕಿಚ್ಚ ಸುದೀಪ್ ಹೇಳಿದ್ದೇ ಅಂತಿಮ. ಹಾಗಾಗಿ ಮೊದಲ ಫೋಟೋ ಶೂಟ್ ನ ಸೂಟ್ ಗಳಿಗೆ ರು.10 ಲಕ್ಷದಿಂದ ಶುರುವಾಗಿ ಸಣ್ಣ ಸಣ್ಣ ವಿಷಯಗಳಿಗೂ ಲಕ್ಷದ ಲೆಕ್ಕದಲ್ಲಿ ಖರ್ಚಾಗಿದೆ ಎನ್ನುತ್ತಿದೆ ಗಾಂಧಿನಗರ.


ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, 'ಬುಲ್ ಬುಲ್' ಖ್ಯಾತಿಯ ರಚಿತಾ ರಾಮ್ ಹಾಗೂ ಹರಿಪ್ರಿಯಾ ನಾಯಕಿಯರಾಗಿರುವ ಚಿತ್ರದಲ್ಲಿ ಅತ್ತೆ ಪಾತ್ರವನ್ನು "ಗೊಂಬೆ ಗೊಂಬೆ ಗೊಂಬೆ ನಿನ್ನ ಮುದ್ದಾಡಬೇಕು ನರಗೊಂಬೆ..." ಎಂದು ಕ್ರೇಜಿಸ್ಟಾರ್ ಜೊತೆ ಕುಣಿದಿದ್ದ ಮಧು ಅತ್ತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸರಿಸುಮಾರು ರು.20 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ ಎಂ ಚಂದ್ರಶೇಖರ್. ಚಿತ್ರದ ಮುಖ್ಯಪಾತ್ರಗಳಲ್ಲಿ ದೇವರಾಜ್ ಹಾಗೂ ಪ್ರಕಾಶ್ ರೈ ಸಹ ಇದ್ದು ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಸುಧಾಕರ್ ಎಸ್ ರಾಜು ಅವರ ಛಾಯಾಗ್ರಹಣ ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. (ಏಜೆನ್ಸೀಸ್)


English summary
Kichcha Sudeep's Ranna to release on 22nd May. The action film directed by Nanda Kishore. The principal cast includes Kiccha Sudeep, Rachita Ram, Haripriya and Madhoo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada