»   » ಈ ವಾರ ತೆರೆ ಕಾಣುತ್ತಿರುವ ಚಿತ್ರಗಳತ್ತ ಒಂದು ನೋಟ

ಈ ವಾರ ತೆರೆ ಕಾಣುತ್ತಿರುವ ಚಿತ್ರಗಳತ್ತ ಒಂದು ನೋಟ

Posted By:
Subscribe to Filmibeat Kannada

'ರಾಜರಥ' ಚಿತ್ರದ ವಿವಾದದ ನಡುವೆ ಈ ವಾರ ಯಾವ ಸಿನಿಮಾಗಳು ಬಿಡುಗಡೆಯಾಗಲಿದೆ ಎನ್ನುವುದನ್ನ ಮರೆತಂತಿದೆ. ಹಲವು ದಿನಗಳಿಂದ ತೆರೆಗೆ ಬರಲು ಕಾಯುತ್ತಿದ್ದ ಚಿತ್ರಗಳೆಲ್ಲವೂ ಈ ವಾರ ಬೆಳ್ಳಿತೆರೆಗೆ ಲಗ್ಗೆಯಿಡುತ್ತಿದೆ.

ಈ ವಾರ ರಿಲೀಸ್ ಆಗುವ ಚಿತ್ರಗಳಲ್ಲಿ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಇಲ್ಲವಾದರೂ, ಹಲವು ವಿಷ್ಯಗಳಲ್ಲಿ ಕುತೂಹಲ ಹುಟ್ಟಿಸಿ ಪ್ರೇಕ್ಷಕರು ನೋಡಲೇಬೇಕು ಎನ್ನುವಂತಿರುವ ಕಥೆಗಳಿವೆ.

ಲವ್ ಸ್ಟೋರಿ, ಹಾರರ್ ಸಿನಿಮಾ, ಆಕ್ಷನ್-ಸಸ್ಪೆನ್ಸ್, ಹಾಗೂ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಹೀಗೆ ವಿಭಿನ್ನ ಬಗೆಯ ಕಥೆ ಹೊಂದಿರುವ ಸಿನಿಮಾಗಳು ಪ್ರೇಕ್ಷಕರೆದುರು ಬರಲು ಸಜ್ಜಾಗಿವೆ. ಹಾಗಿದ್ರೆ, ಈ ವಾರ ಯಾವ ಯಾವ ಚಿತ್ರಗಳು ಚಿತ್ರಮಂದಿರಕ್ಕೆ ಕಾಲಿಡುತ್ತಿದೆ. ಈ ಚಿತ್ರಗಳು ವಿಶೇಷತೆಗಳೇನು.? ಯಾರು ಹೀರೋ, ಯಾರು ಹೀರೋಯಿನ್ ಎಂದು ತಿಳಿಯಲು ಈ ಸ್ಟೋರಿ ಓದಿ....

ಈ ವಾರ ತೆರೆಗೆ 'ನಂಜುಂಡಿ ಕಲ್ಯಾಣ'

ಚಿತ್ರ: ನಂಜುಂಡಿ ಕಲ್ಯಾಣ

ನಿರ್ಮಾಣ: ಶ್ರೀರಾಮಾ ಟಾಕೀಸ್ ಲಾಂಛನ

ನಿರ್ದೇಶನ: ರಾಜೇಂದ್ರ ಕಾರಂತ್

ಕಲಾವಿದರು: ತನುಷ್, ಶ್ರಾವ್ಯ, ಕುರಿ ಪ್ರತಾಪ್, ರಾಜೇಂದ್ರ ಕಾರಂತ್, ಪದ್ಮಜಾರಾವ್ ಮತ್ತು ಇತರರು

ಈ ವಾರ ತೆರೆಗೆ 'ಮದುವೆ ದಿಬ್ಬಣ'

ಚಿತ್ರ: ಮದುವೆ ದಿಬ್ಬಣ

ನಿರ್ಮಾಣ: ಬಾ.ನಾ.ರವಿ

ನಿರ್ದೇಶನ: ಎಸ್.ಉಮೇಶ್

ಕಲಾವಿದರು: ಅಭಿಷೇಕ್, ಸೋನಾಲ್, ಶಿವರಾಜ್ ಕೆ.ಆರ್.ಪೇಟೆ, ಚಂದ್ರಕಲಾ ಮೋಹನ್, ವೀರಣ್ಣ, ಆಲಿಶಾ, ಕಾವ್ಯ, ಮಾಸ್ಟರ್ ಭೂಷಣ್, ಬೇಬಿ ಅಶ್ವಿನಿ ಮತ್ತು ಇತರರು

ಈ ವಾರ ಬಿಡುಗಡೆ 'ಜಯಮಹಲ್'

ಚಿತ್ರ: 'ಜಯಮಹಲ್'

ನಿರ್ಮಾಣ: ಎಂ.ರೇಣುಕಾ ಪ್ರಸಾದ್

ನಿರ್ದೇಶನ: ಹೃದಯ ಶಿವ

ಕಲಾವಿದರು: ಶುಭಪೂಂಜಾ, ಕೌಸಲ್ಯ, ನೀನಾಸಂ ಅಶ್ವಥ್, ಹೃದಯಶಿವ, ಪ್ರತಿಭಾ ನಂದಕುಮಾರ್, ಕರಿಸುಬ್ಬು, ಜೀವನ್, ಸುರೇಶ್ ಮುಂತಾದವರಿದ್ದಾರೆ.

'ರಾಜರಥ' ವಿವಾದದ ಬಗ್ಗೆ ಬಾಯ್ಬಿಟ್ಟ RJ ರಶ್ಮಿ: ಫೇಸ್ ಬುಕ್ ನಲ್ಲಿ ಕೊಟ್ರು ಟ್ವಿಸ್ಟ್.!

ಈ ವಾರ ಬಿಡುಗಡೆಯಾಗಲಿದೆ 'ಹುಚ್ಚ-2'

ಚಿತ್ರ: 'ಹುಚ್ಚ-2'

ನಿರ್ದೇಶನ: ಓಂ ಪ್ರಕಾಶ್ ರಾವ್

ನಿರ್ಮಾಣ: ಎ ಎಂ ಉಮೇಶ್ ರೆಡ್ಡಿ

ಕಲಾವಿದರು: ಮದರಂಗಿ ಕೃಷ್ಣ, ಶ್ರಾವ್ಯ ರಾವ್, ಅವಿನಾಷ್, ಸಾಯಿ ಕುಮಾರ್, ಅವಿನಾಷ್, ಸಾಧು ಕೋಕಿಲ, ಓಂಪ್ರಕಾಶ್ ರಾವ್, ಶ್ರೀನಿವಾಸಮೂರ್ತಿ, ಅಶ್ವಿನ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್

English summary
Om prakash rao Directional 'Huccha 2', Shubha poonja starrer 'jayamahal', nanjundi kalyana, maduve dibbana movies are releasing on april 6th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X