»   » ನೆಚ್ಚಿನ ಚಿತ್ರಮಂದಿರಗಳಲ್ಲಿ 'ರುದ್ರತಾಂಡವ' ಶುರು

ನೆಚ್ಚಿನ ಚಿತ್ರಮಂದಿರಗಳಲ್ಲಿ 'ರುದ್ರತಾಂಡವ' ಶುರು

Posted By:
Subscribe to Filmibeat Kannada

'ಚಂದ್ರಲೇಖ' ಚಿತ್ರದ ಬಳಿಕ ಚಿರಂಜೀವಿ ಸರ್ಜಾ ಹಾಗೂ 'ಸ್ವೀಟಿ ನನ್ನ ಜೋಡಿ' ಚಿತ್ರದ ಬಳಿಕ ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ರುದ್ರತಾಂಡವ'. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿರು ಅವರಿಗೆ 'ಯುವ ಸಾಮ್ರಾಟ್' ಎಂಬ ಬಿರುದನ್ನು ನೀಡಲಾಗಿತ್ತು.

ಲವ್ವರ್ ಬಾಯ್ ಆಗಿ ಚಿರಂಜೀವಿ ಸರ್ಜಾ ಕಾಣಿಸಿಕೊಂಡಿದ್ದರೆ, ಮಿಡ್ಲ್ ಸ್ಕೂಲ್ ಟೀಚರ್ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಮಿಂಚಿದ್ದಾರೆ. ಇಬ್ಬರಿಗಿಂತ ಟ್ರೇಲರ್ ನಲ್ಲಿ ರವಿಶಂಕರ್ 'ಸಿಂಹ' ಘರ್ಜನೆಯೇ ಹೆಚ್ಚು.


ಖತರ್ನಾಕ್ ಖೇಡಿಯಾಗಿರುವ ರವಿಶಂಕರ್ ವಿರುದ್ಧ ಚಿರಂಜೀವಿ ಸರ್ಜಾ 'ರುದ್ರತಾಂಡವ'ವಾಡುವುದೇ ಚಿತ್ರದ ಕಥಾಹಂದರ. ಹೀಗಾಗಿ ಸಿನಿಮಾದಲ್ಲಿ 'ಮುಂಗಾರು ಮಳೆ'ಯಂತಹ ನವಿರಾದ ಪ್ರೇಮ ಕಥೆ ಇದೆ. ಹಾಗೇ, 'ದುನಿಯಾ' ರೇಂಜಿಗೆ ಸೂಪರ್ ಡ್ಯೂಪರ್ ಫೈಟ್ಸೂ ಇವೆ.


Kannada movie Rudra Tandava releases

ಆಕ್ಷನ್ ಮಧ್ಯೆ ಪ್ರೇಕ್ಷಕರನ್ನ ರಿಲ್ಯಾಕ್ಸ್ ಮಾಡುವುದಕ್ಕೆ ಚಿಕ್ಕಣ್ಣ ಕಾಮಿಡಿ ಕಚಗುಳಿ ಇಡುತ್ತಾರೆ. 'ಮದರಂಗಿ' ಕೃಷ್ಣ, ಕುಮಾರ್ ಗೋವಿಂದ್, ಗಿರೀಶ್ ಕಾರ್ನಾಡ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗ ಕೂಡ ಇದೆ.


ಮುರುಗನ್ ಪಿಕ್ಚರ್ಸ್ ಮತ್ತು ಜಿ ಸಿನೆಮಾಸ್ ಲಾಂಛನದಲ್ಲಿ ತಯಾರಾಗಿರುವ ಗುರು ದೇಶಪಾಂಡೆ ನಿರ್ದೇಶನದ, ಚಿರಂಜೀವಿ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಅಭಿನಯದ ರುದ್ರತಾಂಡವ' ಚಿತ್ರ ಈ ಶುಕ್ರವಾರ (ಫೆ.27) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.


ಈ ಚಿತ್ರ ತಮಿಳಿನಲ್ಲಿ ಬಂದು ಸೂಪರ್ ಹಿಟ್ ಆಗಿದ್ದ 'ಪಾಂಡಿಯ ನಾಡು' ಚಿತ್ರದ ಅವತರಿಣಿಕೆ. ಜಗದೀಶ್ ವಾಲಿ ಅವರ ಛಾಯಾಗ್ರಹಣ ಮತ್ತು ವಿ. ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕಿದೆ. ಕೆ.ಎಂ. ಪ್ರಕಾಶ್ ಸಂಕಲನ, ಜಡೇಶ್ ಮತ್ತು ಗುರುವೇಂದ್ರ ಸಂಭಾಷಣೆ, ಮುರಳಿ ಮತ್ತು ಕಲೈ ಅವರ ನೃತ್ಯ ಸಂಯೋಜನೆ, ಮಾಸ್ ಮಾದ ಅವರ ಸಾಹಸ, ವಿನೋದ್ ಮತ್ತು ಶ್ರೀ ನಾಗೇಶ್ ಅವರು ಈ ಚಿತ್ರದ ನಿರ್ಮಾಪಕರುಗಳು.


ಚಿತ್ರದ ಪಾತ್ರವರ್ಗದಲ್ಲಿ ಗಿರೀಶ್ ಕಾರ್ನಾಡ್, ಕುಮಾರ್ ಗೋವಿಂದ್, ಮಿತ್ರ, ಚಿಕ್ಕಣ್ಣ, ರವಿಶಂಕರ್, ವಸಿಷ್ಠ, ಸುರೇಶ್ ಮಂಗಳೂರು ಮತ್ತು ಶೃತಿರಾಜ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Chiranjeevi Sarja and Radhika Kumaraswamy starrer Kannada Movie 'Rudra Tandava' releases on 27th February. It is based on the 2014 Tamil film Pandiya Naadu.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada