»   » ವರಮಹಾಲಕ್ಷ್ಮೀ ಹಬ್ಬಕ್ಕೆ ಬೈಕ್ ಏರಿ ಬರ್ತಾರೆ 'ಆರ್.ಎಕ್ಸ್ ಸೂರಿ'

ವರಮಹಾಲಕ್ಷ್ಮೀ ಹಬ್ಬಕ್ಕೆ ಬೈಕ್ ಏರಿ ಬರ್ತಾರೆ 'ಆರ್.ಎಕ್ಸ್ ಸೂರಿ'

Posted By:
Subscribe to Filmibeat Kannada

ಬರೀ ಟ್ರೈಲರ್ ಹಾಗೂ ಲಿಪ್ ಲಾಕ್ ಮೂಲಕ ಗಾಂಧಿನಗರದಲ್ಲಿ ಭಾರಿ ಸುದ್ದಿಯಾಗಿದ್ದ, ದುನಿಯಾ ವಿಜಿ ಅಭಿನಯದ 'ಆರ್.ಎಕ್ಸ್ ಸೂರಿ' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ಅಂದಹಾಗೆ ಇದೀಗ ಶ್ರೀಜೈ ಆಕ್ಷನ್-ಕಟ್ ಹೇಳಿರುವ 'ಆರ್ ಎಕ್ಸ್ ಸೂರಿ' ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಬೋರ್ಡ್ 'ಎ' ಪ್ರಮಾಣ ಪತ್ರ ನೀಡುವ ಮೂಲಕ ಚಿತ್ರಬಿಡುಗಡೆ ಮಾಡಲು ಅನುಮತಿ ನೀಡಿದೆ.

ಸಂಪೂರ್ಣ ರೌಡಿಸಂ, ಮಚ್ಚು, ಲಾಂಗು, ರಕ್ತದ ಆರ್ಭಟವಿರುವ 'ಆರ್ ಎಕ್ಸ್ ಸೂರಿ' ಭೂಗತ ಲೋಕದ ಕಥಾನಕವನ್ನು ತೆರೆದಿಡುತ್ತದೆ. ಆದ್ದರಿಂದ 'ಎ' ಪ್ರಮಾಣ ಪತ್ರ ನೀಡಲು ಸೆನ್ಸಾರ್ ಮಂಡಳಿ ನಿರ್ಧರಿಸಿದೆ.[ದುನಿಯಾ ವಿಜಿ 'ಆರ್ ಎಕ್ಸ್' ಸೂರಿ ಜಬರ್ದಸ್ತ್ ಟ್ರೈಲರ್ ಔಟ್ ]

Duniya vijay

ಸುರೇಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ 'ಆರ್ರ ಎಕ್ಸ್ ಸೂರಿ' ಚಿತ್ರಕ್ಕೆ ಸುರೇಶ್ ಬಂಡವಾಳ ಹಾಕಿದ್ದಾರೆ. ಆಗಸ್ಟ್ 28 ವರಮಹಾಲಕ್ಷ್ಮಿ ಹಬ್ಬದಂದು ಸೂರಿ ಆರ್ ಎಕ್ಸ್ ಬೈಕ್ ಏರಿ ತೆರೆ ಮೇಲೆ ರಾರಾಜಿಸಲಿದ್ದಾರೆ.

ಸಖತ್ ಮಾಸ್ ಲುಕ್ ನಲ್ಲಿ ಮಿಂಚಿರುವ 'ಬ್ಲ್ಯಾಕ್ ಕೋಬ್ರಾ' ವಿಜಯ್ ಗ್ಲಾಮರ್ ಗೊಂಬೆ ಆಕಾಂಕ್ಷ ಜೊತೆ ರೋಮಾನ್ಸ್ ಮಾಡಿದ್ದಾರೆ. ಒಟ್ನಲ್ಲಿ ಮೊದಲ ನೋಟಕ್ಕೆ 'ಆರ್ ಎಕ್ಸ್ ಸೂರಿ' ಅಂದರೆ ವೈಲ್ಡ್ ಆಂಡ್ ಮೈಲ್ಡ್ ಸ್ಟೋರಿ.[ಮತ್ತೆ ಲಿಪ್ ಲಾಕ್ ಮಾಡಿ ಸಿಕ್ಕಿ ಬಿದ್ದ ಕರಿಯ]

'ದುನಿಯಾ', ಚಿತ್ರದ ನಂತರ ಮತ್ತೊಮ್ಮೆ ವಿಜಿ ಅವರು ರೌಡಿಸಂ ಲೋಕದಲ್ಲಿ ಮಿಂಚಿದ್ದು, ಹೊಡಿ, ಬಡಿ, ಕಡಿ ಅನ್ನೋ ರೂಲ್ಸ್ ಗಳನ್ನು ಸಖತ್ ಆಗೆ ಫಾಲೋ ಮಾಡಿದ್ದಾರೆ.

ಇನ್ನೂ ಚಿತ್ರದಲ್ಲಿನ ಕಲರ್ ಫುಲ್ ಹಾಡುಗಳ ಜೊತೆಗೆ ಮೆಲೋಡಿಯಸ್ ಹಾಡುಗಳಿಗೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ರವಿಶಂಕರ್, ಶೋಭರಾಜ್, 'ಬಿಡ್ಡಾ' ಆದಿ ಲೋಕೆಶ್, ವಿನಯಾ ಪ್ರಸಾದ್, ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.[ಅಭಿಮಾನಿಯ ಅಂತಿಮ ಇಚ್ಛೆ ಪೂರ್ಣಗೊಳಿಸಿದ ವಿಜಿ]

Duniya vijay

'ಆರ್ ಎಕ್ಸ್ ಸೂರಿ' ಬೈಕ್ ಏರಿ ಬರುವ ಹೊತ್ತಿಗೆ ದ್ವಾರಕೀಶ್ ಅವರ ಅಸಲಿ 'ಆಟಗಾರ'ನ ಆಟ ಕೂಡ ಆಗಸ್ಟ್ 28 ರಂದೇ ಶುರುವಾಗಲಿದ್ದು, ಅಭಿಮುಖವಾಗಿ ನಿಂತು ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

ಒಟ್ನಲ್ಲಿ ಜಾಸ್ತಿ ಮಾಸ್ ಲುಕ್ ಹಾಗು ಡಿಫರೆಂಟ್ ಡ್ಯಾನಿ ಫೈಟ್ ಇಷ್ಟ ಪಡೋರು ಆರಾಮವಾಗಿ 'ಆರ್ ಎಕ್ಸ್ ಸೂರಿ' ನೋಡಬಹುದು. ಅಂತೂ ವಿಜಯ್ ಖಡಕ್ ಡೈಲಾಗ್ ನೋಡಲು ಮುಂದಿನ ವಾರ ಆಗಸ್ಟ್ 28 ರವರೆಗೆ ಅಭಿಮಾನಿಗಳು ಕಾಯಲೇಬೇಕು.

English summary
Kannada movie 'RX Soori' gets 'A' Certificate from the Censor Board. 'RX Soori' features Kannada actor Duniya vijay, Actress Akankshaa in the lead role. The movie is directed by Shri Jai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada