»   » ಗಾಂಧಿನಗರಕ್ಕೆ ಬರ್ತಿದ್ದಾರೆ ಭರವಸೆಯ 'ಸ್ಟೂಡೆಂಟ್ಸ್'

ಗಾಂಧಿನಗರಕ್ಕೆ ಬರ್ತಿದ್ದಾರೆ ಭರವಸೆಯ 'ಸ್ಟೂಡೆಂಟ್ಸ್'

Posted By:
Subscribe to Filmibeat Kannada

ಪ್ಯಾಶನ್ ಮೂವಿ ಮೇಕರ್ಸ್ ಬ್ಯಾನರಿನಡಿ ತಯಾರಾಗುತ್ತಿರುವ 'ಸ್ಟೂಡೆಂಟ್ಸ್' ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿರುವ, 'ಸ್ಟೂಡೆಂಟ್ಸ್' ಟ್ರೈಲರ್ ಮತ್ತು ಹಾಡುಗಳ ಮೂಲಕ ಹೊಸ ಭರವಸೆ ಮೂಡಿಸಿದೆ.

'ಸ್ಟೂಡೆಂಟ್ಸ್' ಇದೊಂದು ಪಕ್ಕಾ ಯೂತ್ ಫುಲ್ ಕಥೆ. ಕಾಲೇಜು ಜೀವನದ ಸುತ್ತಾ ನಡೆಯುವ ಕಾಮಿಡಿ ಎಂಟರ್ ಟೈನಿಂಗ್ ಸಿನಿಮಾ. ಕಾಲೇಜ್ ಲೈಫ್ ಎನ್ನುವುದು ಕೇವಲ ಎಂಜಾಯ್ ಮಾಡುವುದು ಮಾತ್ರವಲ್ಲ, ಅದೊಂದು ಕಲಿಯುವ ಹಂತ ಎಂಬುದನ್ನ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಮುಂಚೆ ಬಂದಿರುವ ಕಾಲೇಜು ಕಥೆಗಳಿಗಿಂತ ಇದು 'ಸ್ಟೂಡೆಂಟ್ಸ್' ಹೊಸತನವನ್ನ ಹೊಂದಿದೆಯಂತೆ.

Kannada Movie Students is Releasing on June

ಚಿತ್ರದಲ್ಲಿ ಪ್ರಮುಖವಾಗಿ ಮೂರು ಜೋಡಿಗಳಿದ್ದು, ಎಲ್ಲರು ಯುವ ಪ್ರತಿಭೆಗಳು ಎನ್ನುವುದು ವಿಶೇಷ. ಸಚಿನ್ ಪುರೋಹಿತ್, ಸಚಿನ್ ಜಿ, ಮತ್ತು ಕಿರಣ್ ರಾಯಬಾಗಿ ಮೂವರು ನಾಯಕ ನಟರಾಗಿದ್ದು, ಇವರಿಗೆ ಭವ್ಯ ಕೃಷ್ಣ, ಅಂಕಿತ, ಮತ್ತು ಸುವರ್ಣ ಶೆಟ್ಟಿ ಜೋಡಿಯಾಗಿದ್ದಾರೆ.

ಇನ್ನು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನದ ಜೊತೆ ನಿರ್ಮಾಣ ಮಾಡಿರುವುದು ಸಂತೋಷ್ ಕುಮಾರ್. ಸಂತೋಷ್ ಈ ಹಿಂದೆ ಹಲವು ಚಿತ್ರಗಳಲ್ಲಿ ನಟನಾಗಿ ಅಭಿನಯಿಸಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ಮೂಡಿ ಬಂದಿದ್ದ 'ಸಿರಿವಂತ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ನಂತರ ನೆಗಿಟಿವ್ ಪಾತ್ರಗಳಿಗೆ ಹೆಚ್ಚು ಹೆಚ್ಚು ಅವಕಾಶಗಳು ದೊರೆಯಿತು. ಆದ್ರೆ, ನಟನೆಯಿಂದ ಹಿಂದೆ ಸರಿದ ಸಂತೋಷ್ ಕುಮಾರ್ ಸ್ವಂತ ನಿರ್ಮಾಣ ಸಂಸ್ಥೆಯನ್ನ ಸ್ಥಾಪಿಸಿ ಈಗ 'ಸ್ಟೂಡೆಂಟ್ಸ್' ಸಿನಿಮಾ ಮಾಡಿದ್ದಾರೆ.

Kannada Movie Students is Releasing on June

'ಸ್ಟೂಡೆಂಟ್ಸ್' ಚಿತ್ರಕ್ಕೆ ಜೆ.ಜೆ.ಶರ್ಮಾ ಅವರ ಛಾಯಾಗ್ರಹಣವಿದ್ದು, ಎಡ್ವರ್ಡ್ ಅವರು ಸಂಗೀತ ನೀಡಿದ್ದಾರೆ. ಇನ್ನು ಹೇಮಂತ್.ವಿ.ಎಚ್ ಸಂಭಾಷಣೆ ಬರೆದಿದ್ದು, ನೆಲಮನೆ ರಾಘವೇಂದ್ರ ಅವರ ಸಾಹಿತ್ಯ ಚಿತ್ರಕ್ಕಿದೆ. ಗೋಕರ್ಣ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿತ್ರೀಕರಣ ಮಾಡಿರುವ 'ಸ್ಟೂಡೆಂಟ್ಸ್' ಜೂನ್ ತಿಂಗಳಲ್ಲಿ ತೆರೆ ಕಾಣಲಿದೆ.

ಸ್ಟೂಡೆಂಟ್ಸ್ ಚಿತ್ರದ ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

English summary
Santhosh Kumar Directed Kannada Movie 'Students' is All Set to Release On June All Over karanataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada