For Quick Alerts
  ALLOW NOTIFICATIONS  
  For Daily Alerts

  ವಿಭಿನ್ನ ಟೈಟಲ್‌ನಿಂದ 'ಅನ್ ಲಾಕ್' ಆದ ರಾಘವ: ಮತ್ತೊಂದು ಹೊಸಬರ ಸಿನಿಮಾ!

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್‌ವುಡ್ ಹೊಸ ಹೊಸ ಪ್ರಯೋಗಕ್ಕೆ ಮುಂದಾಗುತ್ತಿದೆ. ಮಡಿವಂತಿಕೆಯನ್ನು ಬಿಟ್ಟು ಟೈಟಲ್‌ನಿಂದಲೇ ಗಮನ ಸೆಳೆಯುವುದಕ್ಕೆ ಶುರು ಮಾಡಿದೆ. ಈಗಾಗಲೇ ಹಲವು ಸಿನಿಮಾಗಳು ವಿಶಿಷ್ಟ ಟೈಟಲ್‌ನಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಇಂತಹದ್ದೇ ಮತ್ತೊಂದು ಸಿನಿಮಾ 'ಅನ್ ಲಾಕ್'.

  ವಿಭಿನ್ನವಾದ ಟೈಟಲ್‌ನಿಂದ ಪ್ರೇಕ್ಷಕರಿಗೆ ಹತ್ತಿರವಾಗುವ ಪ್ರಯತ್ನಕ್ಕೆ 'ಅನ್‌ ಲಾಕ್‌ ರಾಘವ' ಮುಂದಾಗುತ್ತಿದ್ದಾನೆ. ಈ ಹೊಸಬರ ಸಿನಿಮಾ ಈಗಾಗಲೇ 50ದಿನಕ್ಕೂ ಹೆಚ್ಚು ಶೂಟಿಂಗ್ ಮಾಡಿದೆ. ಕೋಟೆ ನಾಡು ಚಿತ್ರದುರ್ಗದ ವಿವಿಧ ಸ್ಥಳಗಳಲ್ಲಿ ಹಾಗೂ ಬೆಂಗಳೂರಿನ ವಿವಿದೆಡೆ ಮತ್ತಷ್ಟು ದಿನಗಳ ಕಾಲ ಸಿನಿಮಾ ಶೂಟಿಂಗ್ ಮಾಡಲಾಗಿದೆ.

  ಸದ್ಯ ರಾಘವ 'ಅನ್‌ ಲಾಕ್‌' ಆಗುವುದಕ್ಕೆ ಕ್ಲೈಮ್ಯಾಕ್ಸ್‌ ಮತ್ತು ಹಾಡಿನ ಚಿತ್ರೀಕರಣ ನಡೆಯಬೇಕಿದೆ. ಇವಿಷ್ಟು ಮುಗಿದರೆ ಸಿನಿಮಾ ಬಹುತೇಕ ಮುಗಿದ ಹಾಗೆ. ಸದ್ಯದಲ್ಲೇ ಚಿತ್ರತಂಡ ಕೊನೆಯ ಹಂತದ ಶೂಟಿಂಗ್ ಆರಂಭ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. 'ಅನ್‌ ಲಾಕ್‌ ರಾಘವ' ಚಿತ್ರದ ನಾಯಕನಾಗಿ 'ವೀಕೆಂಡ್‌' ಚಿತ್ರದಲ್ಲಿ ನಟಿಸಿದ್ದ ಮಿಲಿಂದ್‌ ಹಾಗೂ ನಾಯಕಿಯಾಗಿ 'ಲವ್‌ ಮಾಕ್ಟೇಲ್‌ 2' ಖ್ಯಾತಿಯ ರೇಚಲ್‌ ಡೇವಿಡ್‌ ನಟಿಸುತ್ತಿದ್ದಾರೆ.

  ಸಾಧುಕೋಕಿಲ, ಅವಿನಾಶ್‌, ರಮೇಶ್‌ ಭಟ್‌, ವೀಣಾ ಸುಂದರ್‌, ಸುಂದರ್‌, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಮೂಗು ಸುರೇಶ್‌, ಭೂಮಿ ಶೆಟ್ಟಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಸ್ಯಪ್ರಧಾನವಾದ ನವಿರಾದ ಪ್ರೇಮಕತೆಯುಳ್ಳ 'ಅನ್‌ ಲಾಕ್‌ ರಾಘವ' ಸಿನಿಮಾವನ್ನು ದೀಪಕ್‌ ಮಧುವನಹಳ್ಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

  Kannada Movie Unlock Raghava Shooting In Final Stage

  ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯಪ್ರಕಾಶ್‌ 'ಅನ್‌ಲಾಕ್ ರಾಘವ'ನಿಗೆ ಕಥೆ-ಚಿತ್ರಕಥೆ-ಸಂಭಾಷಣೆಯನ್ನು ಬರೆದಿದ್ದಾರೆ. ಸತ್ಯ - ಮಯೂರ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಮಂಜುನಾಥ್‌ ಡಿ ಮತ್ತು ಸತ್ಯಪ್ರಕಾಶ್‌ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಗನಿಧಿ ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ.

  English summary
  Kannada Movie Unlock Raghava Shooting In Final Stage, Know More.
  Thursday, December 8, 2022, 23:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X