»   » ಜುಲೈ 1 ರಂದು ಚಿನ್ನದ ಹುಡುಗ ಗಣೇಶ್ ಕಲರವ ಶುರು

ಜುಲೈ 1 ರಂದು ಚಿನ್ನದ ಹುಡುಗ ಗಣೇಶ್ ಕಲರವ ಶುರು

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರು ಕಾಣಿಸಿಕೊಂಡಿರುವ ರೋಮ್ಯಾಂಟಿಕ್ ಸಿನಿಮಾ 'Zooಮ್' ತೆರೆಗೆ ಬರಲು ಸಜ್ಜಾಗಿದ್ದು, ಮುಂದಿನ ತಿಂಗಳಲ್ಲಿ ಭರ್ಜರಿಯಾಗಿ ತೆರೆಗೆ ಅಪ್ಪಳಿಸಲಿದೆ.

ಇದೀಗ ಚಿತ್ರದ ಬಿಡುಗಡೆ ದಿನಾಂಕ ಖಚಿತವಾಗಿದ್ದು, ಜುಲೈ 1 ರಂದು ''Zooಮ್'' ಸಿನಿಮಾ ಅದ್ದೂರಿಯಾಗಿ ಇಡೀ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಈ ವಿಷಯವನ್ನು ಖುದ್ದು ನಟಿ ರಾಧಿಕಾ ಪಂಡಿತ್ ಅವರೇ ತಮ್ಮ ಟ್ವಿಟ್ಟರ್ ಮೂಲಕ ಖಚಿತಪಡಿಸಿದ್ದಾರೆ.['ಸ್ಟೈಲ್ ಕಿಂಗ್' ಬರುವ ಮುನ್ನ 'Zooಮ್' ಮಾಡಿ ನೋಡಿ..!]


Kannada Movie 'Zoom' release date confirmed

'ಲವ್ ಗುರು' ಚಿತ್ರದ ಖ್ಯಾತಿಯ ನಿರ್ದೇಶಕ ಪ್ರಶಾಂತ್ ರಾಜ್ ಅವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ 'ನಿಮ್ಮ ಸಿನಿಮಾ' ಸಂಸ್ಥೆ ಬಂಡವಾಳ ಹೂಡಿದೆ. ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು, ನಟ ಶ್ರೀಮುರಳಿ ಮತ್ತು ಲವ್ಲಿ ಸ್ಟಾರ್ ಪ್ರೇಮ್ ಅವರು ಹಾಡುಗಳ ಬಿಡುಗಡೆ ಮಾಡಿದ್ದಾರೆ.[ಅಯ್ಯೋ ಶಿವನೇ ಕನ್ನಡ ಭಾಷೆಯ ಹಾಡಿಗೆ ಇದೆಂತಹ ಅವಮಾನ]


ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್ ಎಸ್ ತಮನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ.


ಚಿತ್ರದ ಹಾಡುಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ನಟಿ ರಾಧಿಕಾ ಪಂಡಿತ್ ಅವರು ತಮ್ಮ ಧ್ವನಿ ನೀಡಿದ್ದಾರೆ.['ZOOಮ್' ಚಿತ್ರಕ್ಕೆ 'ಗಾನ ಕೋಗಿಲೆ' ಆದರು ನಟಿ ರಾಧಿಕಾ ಪಂಡಿತ್!]


Kannada Movie 'Zoom' release date confirmed

ಅಂದಹಾಗೆ ಹಲವಾರು ವರ್ಷಗಳ ಬಳಿಕ ಹಿರಿಯ ನಟ ಕಾಶೀನಾಥ್ ಅವರು ಮತ್ತೆ ತೆರೆಯ ಮೇಲೆ ಮಿಂಚಿದ್ದು, ಈ ಚಿತ್ರದಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ. ಇವರಿಗೆ ಕಾಮಿಡಿ ನಟ ಸಾಧು ಕೋಕಿಲಾ ಅವರು ಸಾಥ್ ನೀಡಿದ್ದಾರೆ.


ಅದೇನೇ ಇರಲಿ ಒಟ್ನಲ್ಲಿ 'ಸ್ಟೈಲ್ ಕಿಂಗ್' ಬಂದು ಹೋದ ಬೆನ್ನಲ್ಲೇ ಇದೀಗ Zooಮ್ ಬರಲು ತಯಾರಾಗಿದ್ದು, ಜುಲೈ 1ರ ತನಕ ಗಣಿ ಅಭಿಮಾನಿಗಳು ಕಣ್ಣಿಗೆ ಜೂಮ್ ಲೆನ್ಸ್ ಹಾಕಿಕೊಂಡು ಕಾಯಬೇಕಾಗುತ್ತದೆ.

English summary
Golden Star Ganesh starring Kannada movie 'Zoom's release date has been confirmed. The movie is releasing worldwide on July 1st. Actress Radhika Pandit is the heroine of the movie. The movie is directed by Prashant Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada