For Quick Alerts
  ALLOW NOTIFICATIONS  
  For Daily Alerts

  ಈ ವಾರ ತೆರೆಗೆ ಬರುತ್ತಿರುವ ಕನ್ನಡ ಚಲನಚಿತ್ರಗಳ ಪಟ್ಟಿ ಇಲ್ಲಿದೆ

  By Harshitha
  |

  ಯು.ಎಫ್.ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ಈ ಶುಕ್ರವಾರ ಅಂದ್ರೆ ಮಾರ್ಚ್ 16 ರಂದು ಕನ್ನಡ ಚಿತ್ರಗಳು ತೆರೆಗೆ ಬರಲಿವೆ.

  ದಂಡುಪಾಳ್ಯ - 3

  'ದಂಡುಪಾಳ್ಯ 3' (ಪಾರ್ಟ್ |||) ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹಿಂದೆ 'ದಂಡುಪಾಳ್ಯ', 'ದಂಡುಪಾಳ್ಯ-2' ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸರಾಜು ಅವರೇ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ನವೀನ್ ಕೃಷ್ಣ, ಗುರುರಾಜ ದೇಸಾಯಿ, ರಮೇಶ್ ಹಾಗೂ ತಬಲಾನಾಣಿ ಸಂಭಾಷಣೆ ರಚಿಸಿದ್ದಾರೆ.

  'ದಂಡುಪಾಳ್ಯ-2' ಚಿತ್ರದ ಮುಂದುವರಿದ ಭಾಗವಾಗಿ ಈ ಚಿತ್ರ ಮೂಡಿಬರಲಿದ್ದು, ಆ ಚಿತ್ರದಲ್ಲಿ ಉಳಿಸಿಕೊಂಡಿದ್ದ ಒಂದಷ್ಟು ಕನ್‍ ಫ್ಯೂಷನ್ ಗಳಿಗೆ ಈ ಚಿತ್ರದ ಮೂಲಕ ಉತ್ತರ ಸಿಗಲಿದೆ.

  ಮತ್ತೆ ಚಿತ್ರ ಪ್ರದರ್ಶನ ಶುರು : ಯು ಎಫ್ ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

  ರಾಮ್ ತಳ್ಳೂರಿ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಶ್ರೀನಿವಾಸರಾಜು ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಪೂಜಾಗಾಂಧಿ, ರವಿಶಂಕರ್, ರವಿಕಾಳೆ, ನಕುಲ್ ದೇಶಪಾಂಡೆ, ಕರಿಸುಬ್ಬು, ಪೆಟ್ರೋಲ್ ಪ್ರಸನ್ನ ಸೇರಿದಂತೆ 'ದಂಡುಪಾಳ್ಯ 2' ಚಿತ್ರದಲ್ಲಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇದೆ.

  'ನನಗಿಷ್ಟ'

  ಶ್ರೀಲಕ್ಷ್ಮೀವೆಂಕಟೇಶ್ವರ ವಿಷನ್ಸ್ ಲಾಂಛನದಲ್ಲಿ ಯುವರಾಜ್ ನಿರ್ಮಿಸಿರುವ 'ನನಗಿಷ್ಟ' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ರಾಧಾಕೃಷ್ಣ ಕೆ.ವಿ ಕಥೆ ಬರೆದಿರುವ ಈ ಚಿತ್ರಕ್ಕೆ ದಿನೇಶ್ ಬಾಬು ಅವರು ಚಿತ್ರಕಥೆ, ಸಂಭಾಷಣೆ ಬರೆದು ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ನಂದಿತ ರಾಕೇಶ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ವಿನಿಲ್ ಮೆನನ್ ಹಿನ್ನಲೆ ಸಂಗೀತ ನಿಡಿದ್ದಾರೆ. ಹಂಸಲೇಖ ಅವರು ಗೀತರಚನೆ ಮಾಡಿರುವ ಈ ಚಿತ್ರಕ್ಕೆ ಕುಮಾರ್ ಕೋಟೆಕೊಪ್ಪ ಅವರ ಸಂಕಲನವಿದೆ.

  ಅಶ್ವಿನ್ ದೇವಾಂಗ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ರಚನಗೌಡ (ದಿವಂಗತ) ನಟಿಸಿದ್ದಾರೆ. ರಾಜೇಶ್ ನಟರಂಗ, ಕರಿಸುಬ್ಬು, ತನುಜ, ಜಯಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  'ಇದಂ ಪ್ರೇಮಂ ಜೀವನಂ'

  ಗೋಕುಲ್ ಎನ್.ಕೆ ಹಾಗೂ ನವೀನ್ ಕುಮಾರ್ ಜೆ.ಪಿ ಅವರು ನಿರ್ಮಿಸಿರುವ 'ಇದಂ ಪ್ರೇಮಂ ಜೀವನಂ' ಚಿತ್ರ ಈ ವಾರ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

  ರಾಘವಾಂಕ ಪ್ರಭು ನಿರ್ದೇಶನದ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ನವೀನ್ ಪಂಚಾಕ್ಷರಿ ಛಾಯಾಗ್ರಹಣ ಹಾಗೂ ಕುಮಾರ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಸನತ್, ಶನಾಯ ಕಾಟ್ವೆ, ಅವಿನಾಶ್, ಮಾಳವಿಕ, ಬಾಲರಾಜ್, ವಿನಯ್, ಸಿರಿ, ನಿಶಾ ಮುಂತಾದವರಿದ್ದಾರೆ.

  ಓ ಪ್ರೇಮವೇ

  ನವ ನಿರ್ದೇಶಕ ಮನೋಜ್ ನಿರ್ದೇಶನದ ಸಿನಿಮಾ 'ಓ ಪ್ರೇಮವೇ' ಕೂಡ ಇದೇ ವಾರ ನಿಮ್ಮೆಲ್ಲರ ಮುಂದೆ ಬರಲಿದೆ. ಚಿತ್ರದಲ್ಲಿ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ, ಅಪೂರ್ವ, ಹುಚ್ಚ ವೆಂಕಟ್ ಜೊತೆಗೆ ಅನೇಕರು ಅಭಿನಯಿಸಿದ್ದಾರೆ.

  English summary
  Here is the list of Kannada Movies which are releasing on March 16th. Dandupalya 3, Nanagishta, Idam Premam Jeevanam and Oo Premave are releasing this friday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X