»   » 'ಬೆಂಗಳೂರು ಅಂಡರ್ ವರ್ಲ್ಡ್' ಎದುರು 'ರಣಚಂಡಿ', 'ವರ್ಧನ', 'ರಿಯಲ್ ಪೊಲೀಸ್'

'ಬೆಂಗಳೂರು ಅಂಡರ್ ವರ್ಲ್ಡ್' ಎದುರು 'ರಣಚಂಡಿ', 'ವರ್ಧನ', 'ರಿಯಲ್ ಪೊಲೀಸ್'

Posted By:
Subscribe to Filmibeat Kannada

ಈ ವಾರ (ಮಾರ್ಚ್ 10) ಸ್ಯಾಂಡಲ್ ಸಿನಿ ಪ್ರಿಯರಿಗಾಗಿ 4 ಚಿತ್ರಗಳು ತೆರೆ ಮೇಲೆ ಬರುತ್ತಿವೆ. ಈ ನಾಲ್ಕು ಚಿತ್ರಗಳಲ್ಲಿ ಮೂರು ಚಿತ್ರಗಳು ಅಂಡರ್ ವರ್ಲ್ಡ್ ಮತ್ತು ರಿಯಲ್ ಪೊಲೀಸ್ ಬಗ್ಗೆ ಇರುವ ಸಿನಿಮಾಗಳಾಗಿದ್ದು, ಒಂದು ಚಿತ್ರ ಸಖತ್ ಮನರಂಜನೆ ಜೊತೆಗೆ ಸೆಂಟಿಮೆಂಟ್ ಹೊಂದಿದೆ.

'ಡೆಡ್ಲಿ ಸೋಮ' ಚಿತ್ರದಲ್ಲಿ ರೌಡಿ ಪಾತ್ರದಲ್ಲಿ ಅಭಿನಯಿಸಿದ್ದ ಆದಿತ್ಯ, ಈಗ ಮತ್ತೊಮ್ಮೆ ಖಡಕ್ ರೌಡಿ ರೋಲ್ ನಲ್ಲಿ ನಟಿಸಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಮತ್ತು ಲೇಡಿ ಡಾನ್ ಆಗಿ ರಾಗಿಣಿ ದ್ವಿವೇಡಿ ಬಣ್ಣ ಹಚ್ಚಿರುವ 'ವೀರ ರಣಚಂಡಿ' ಬಹು ನಿರೀಕ್ಷಿತ ಚಿತ್ರಗಳಾಗಿವೆ. ಜೊತೆಗೆ ಹರ್ಷ'ನ 'ವರ್ಧನ' ಮತ್ತು ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯದ 'ರಿಯಲ್ ಪೊಲೀಸ್' ಚಿತ್ರಗಳು ರಿಲೀಸ್ ಆಗುತ್ತಿವೆ.

ಈ ಸಿನಿಮಾಗಳ ಒಂದು ಸಣ್ಣ ಪರಿಚಯ ಹಾಗೂ ಅವುಗಳ ವಿಶೇಷತೆಗಳನ್ನ ಸಿಂಪಲ್ಲಾಗಿ ನಾವು ಹೇಳ್ತಿವಿ. ಯಾವ ಚಿತ್ರಕ್ಕೆ ಹೋಗಬೇಕು ಎಂಬುದನ್ನು ನೀವೆ ಡಿಸೈಡ್ ಮಾಡಿಕೊಳ್ಳಿ.

ಆದಿತ್ಯ ಅಭಿನಯದ 'ಬೆಂಗಳೂರು ಅಂಡರ್ ವರ್ಲ್ಡ್'

'ಮೆಜೆಸ್ಟಿಕ್' ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪಿ ಎನ್ ಸತ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಡೆಡ್ಲಿ' ಸೋಮ ನಂತರ ಮತ್ತೊಮ್ಮೆ ಖಡಕ್ ರೌಡಿ ಪಾತ್ರದಲ್ಲಿ ಆದಿತ್ಯ ಕಾಣಿಸಿಕೊಂಡಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಈ ವಾರದ ಬಹು ನಿರೀಕ್ಷಿತ ಚಿತ್ರ. ಬೆಂಗಳೂರಿನ ಅಂಡರ್ ವರ್ಲ್ಡ್ ಕುರಿತ ಸಿನಿಮಾ ಇದಾಗಿದ್ದು, ಮಾಲಿಕ್ ಎಂಬ ವ್ಯಕ್ತಿ ಇಬ್ಬರು ನಟೋರಿಯಸ್ ಡಾನ್ ಗಳ ಕೈಕೆಳಗೆ ಕೆಲಸ ಮಾಡಿ ಜೀವನ ಮಾಡುತ್ತಿದ್ದ ಬಗ್ಗೆ ಚಿತ್ರಕಥೆ ಹೊಂದಿದೆ.

'ಬೆಂಗಳೂರು ಅಂಡರ್ ವರ್ಲ್ಡ್' ನಲ್ಲಿ ಯಾರೆಲ್ಲಾ ಇದ್ದಾರೆ?

ಚಿತ್ರದಲ್ಲಿ ಆದಿತ್ಯ ಗೆ ಮಂಗಳೂರಿನ ಹುಡುಗಿಯಾದ ಪಾಯಲ್ ರಾಧಾಕೃಷ್ಣ ಅವರು ಜೋಡಿಯಾಗಿದ್ದಾರೆ. ಇನ್ನೂ ಚಿತ್ರದಲ್ಲಿ ಶೋಭರಾಜ್ ಸಹ ಕಾಣಿಸಿಕೊಂಡಿದ್ದಾರೆ. ಜಿ ಆನಂದ್ ಬಂಡವಾಳ ಹೂಡಿದ್ದು, ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ರಾಗಿಣಿಯ 'ವೀರ ರಣಚಂಡಿ'

ಬೆಳ್ಳಿತೆರೆಯ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ನಾಯಕನ ರೇಂಜ್ ನಲ್ಲಿ ಮಿಂಚಿರುವ 'ವೀರ ರಣಚಂಡಿ ಸಹ ನಾಳೆ (ಮಾರ್ಚ್ 10) ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ರಾಗಿಣಿ ಅವರು ಲೇಡಿ ಡಾನ್ ಆಗಿ ಕೈಲಿ ಗನ್ ಹಿಡಿದು ಜಬರ್ದಸ್ತ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಆನಂದ್ ಪಿ ರಾಜು ಆಕ್ಷನ್ ಕಟ್ ಹೇಳಿದ್ದು, ವಿ.ಕುಪ್ಪಸ್ವಾಮಿ ನಿರ್ಮಾಣ ಮಾಡಿದ್ದಾರೆ. ಎಸ್ ಪಿ ವೆಂಕಟೇಶ್ ಸಂಗೀತ ಸಂಯೋಜನೆ ನೀಡಿದ್ದಾರೆ. ಶೋಭರಾಜ್, ರಮೇಶ್ ಭಟ್, ಪದ್ಮಜಾ ರಾವ್, ಶರತ್ ಲೋಹಿತಾಶ್ವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ರಾಗಿಣಿ ಅವರ ಎರಡನೇ ಸಾಹಸಭರಿತ ಚಿತ್ರವಿದು.

ಹರ್ಷನ 'ವರ್ಧನ'

ಈ ಹಿಂದೆ 'ಮೊಗ್ಗಿನ ಮನಸ್ಸು', 'ರಾಜಾಹುಲಿ', 'ಮೋನಿ' ಮತ್ತು 'ಪವರ್' ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹರ್ಷ'ನ 'ವರ್ಧನ ಚಿತ್ರ ಸಹ ಮಾರ್ಚ್ 10 ರಂದು ತೆರೆ ಕಾಣುತ್ತಿದೆ. ಸುಮಾರು 190 ಚಿತ್ರಗಳಿಗೆ ಸಂಕಲನಕಾರನಾಗಿ ಕಾರ್ಯ ನಿರ್ವಹಿಸಿರುವ ನಾಗೇಂದ್ರ ಅರಸ್ ಅವರ ನಿರ್ದೇಶನದಲ್ಲಿ 'ವರ್ಧನ' ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಸದ್ದು ಮಾಡಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಹಾಸ್ಯ ಮತ್ತು ಸೆಂಟಿಮೆಂಟ್ ಚಿತ್ರಕಥೆಯನ್ನು ಹೊಂದಿದೆ. ಹರ್ಷ ಅವರಿಗೆ ನೇಹಾ ಪಾಟೀಲ್ ಜೋಡಿ ಆಗಿದ್ದಾರೆ. ಉಳಿದಂತೆ ಪದ್ಮಜಾರಾವ್, ಶೋಭರಾಜ್, ಪೆಟ್ರೋಸ್ ಪ್ರಸನ್ನ, ಯತಿರಾಜ್, ಲಿಂಗರಾಜು ಅಭಿನಯಿಸಿದ್ದಾರೆ.

ಸಾಯಿಕುಮಾರ್ ಮುಖ್ಯ ಭೂಮಿಕೆಯಲ್ಲಿ 'ರಿಯಲ್ ಪೊಲೀಸ್'

ಖ್ಯಾತ ನಿರ್ದೇಶಕ ಸಾಯಿಪ್ರಕಾಶ್ ಅವರ 98 ನೇ ಸಿನಿಮಾ 'ರಿಯಲ್ ಪೊಲೀಸ್'. ಅಜಾದ್ ಫಿಲ್ಮ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದು, ಸಮಾಜ ಘಾತುಕ ಶಕ್ತಿಗಳನ್ನು ಮೆಟ್ಟಿ ನಿಲ್ಲುವ ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಾಯಿಕುಮಾರ್ ಅಭಿನಯಿಸಿದ್ದಾರೆ. ನಿರ್ಮಾಪಕ ಸಾದಿಕ್ ವುಲ್ಲಾ ಆಜಾದ್ ಹಾಗೂ ನೂರ್ ಫರಹತ್ ಅವರು ಕೆಲವು ಘಟನೆಗಳನ್ನು ಪೊಲೀಸ್ ಡೈರಿಯಿಂದ ಹೆಕ್ಕಿ ನೀಡಿದ್ದಾರಂತೆ. ಚಿತ್ರದಲ್ಲಿ ದಿಶಾ ಪೂವಯ್ಯ, ಸಾಧು ಕೋಕಿಲ, ಮಂಜುನಾಥ ಹೆಗ್ಡೆ, ಅಕ್ಷತ, ಗಣೇಶ್ ರಾವ್, ಸುಹಾಸ್, ಮಿಮಿಕ್ರಿ ರಾಜಗೋಪಾಲ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೆ ಜಿ ಕೃಷ್ಣ ಛಾಯಾಗ್ರಹಣ, ಬಲರಾಮ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

English summary
Kannada Actor Aditya Starrer 'Bengaluru Underworld', Ragini starrer 'Veera Ranachandi', Sai Kumar starrer 'Real Police' and Harsha Starrer 'Vardhana' Movies are releasing tomorrow(March,10).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada