»   » 'ನೆರಳು' ಚಿತ್ರ ಬಿಡುಗಡೆ ಎರಡು ವಾರ ಮುಂದಕ್ಕೆ

'ನೆರಳು' ಚಿತ್ರ ಬಿಡುಗಡೆ ಎರಡು ವಾರ ಮುಂದಕ್ಕೆ

Posted By:
Subscribe to Filmibeat Kannada

ಈ ಹಿಂದೆ ತಿಳಿಸಲಾಗಿದ್ದ ವಿಚಾರ 'ನೆರಳು' ಚಿತ್ರವೂ ಇದೆ ಜುಲೈ 26ರಂದು ಬಿಡುಗಡೆ ಆಗುವುದು ಎಂದು, ಈಗ ಎರಡು ವಾರ ಮುಂದೆ ಹೋಗಿದೆ. ಅಂದರೆ ಆಗಸ್ಟ್ 9 ರಂದು 'ನೆರಳು' ಬಿಡುಗಡೆ ಆಗಲಿದೆ. ಸದ್ಯದ ಇನ್ನೊಂದು ವಿಚಾರ ಅಂದರೆ ಈ ಚಿತ್ರದ ವಿಡಿಯೋ ತುಣುಕುಗಳು ಯೂಟ್ಯೂಬ್ ನಲ್ಲಿ ಹೆಚ್ಚು ವೀಕ್ಷಕರನ್ನು ಸೃಷ್ಟಿಸಿಕೊಂಡಿರುವುದು.

ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರದ ನಿರ್ದೇಶನ ಮಾಡಿದ್ದ ಯುವ ಪ್ರತಿಭೆ ವಿನೋದ ಖಣದಾಳೆ ಚಿತ್ರ ಬಿಡುಗಡೆಗೂ ಮುನ್ನವೇ ಅನಾರೋಗ್ಯದಿಂದ ವಿಧಿವಶರಾಗಿದ್ದು ಮಾತ್ರ ವಿಪರ್ಯಾಸ. ನಿರ್ಮಾಪಕ ಅತುಲ್ ಕುಲಕರ್ಣಿ ಅವರ ಪ್ರಥಮ ಕಾಣಿಕೆ 'ನೆರಳು' ಚಿತ್ರ. ವಿನೋದ್ ಕೆ. ಅವರ ಪ್ರಥಮ ನಿರ್ದೇಶನದ ಚಿತ್ರ ಮನರಂಜನೆ ಜೊತೆಗೆ ಮನಕ್ಕೆ ಒಪ್ಪುವ ವಿಚಾರವನ್ನು ಸಹ ಪ್ರೇಕ್ಷಕನ ಮುಂದೆ ಇಡಲಿದೆ.


ತಪ್ಪು ಮಾಡದವರು ಯಾರವ್ರೆ... ಆ ತಪ್ಪು ಸರಿಪಡಿಸಿಕೊಂಡು ಹೋಗುವುದೇ ಜೀವನ. ಆದರೆ ಕೆಲವರು ತಪ್ಪು ಮಾಡುತ್ತಲೆ ಇರುತ್ತಾರೆ. ಅಂತಹವರಿಗೆ ಪಾಪಪ್ರಜ್ಞೆ ನೆರಳಿನಂತೆ ಕಾಡುತ್ತಲೆ ಇರುವುದು. ಇಂತಹ ವಿಚಾರವನ್ನು ಇಟ್ಟುಕೊಂಡು ಬೆಳಗಾವಿಯಲ್ಲಿ 'ಜೈ ಕರ್ನಾಟಕ' ಪತ್ರಿಕೆಯ ಮಾಧ್ಯಮ ಮಿತ್ರರು ಕೆಲವು ಟಿ.ವಿ ಸೀರಿಯಲ್ ಗಳಿಗೆ (ಕಪ್ಪು ತೆರೆ, ಕುಂಕುಮ ಭಾಗ್ಯ, ತೇಲಿಹೋದ ನೌಕೆ) ಧಾರವಾಹಿಗಳಿಗೆ ಕೆಲಸ ಮಾಡಿದ ಅನುಭವದಿಂದ ದೊಡ್ಡ ಪರದೆಯ ಚಿತ್ರ ನಿರ್ದೇಶಿಸಿದ್ದಾರೆ.

ನಿರ್ಮಾಪಕ ಅತುಲ್ ಕುಲಕರ್ಣಿ ಅವರು ಇದೊಂದು ಥ್ರಿಲ್ ನೀಡುವ ಜೊತೆ ಮನೆಮಂದಿಗೆ ಇಷ್ಟ ಆಗುವ ಸಿನೆಮಾ ಅಂತಾರೆ. ಅವರು ಮಹಾರಾಷ್ಟ್ರ ಮೆಟೀರಿಯಲ್ ಟೆಸ್ಟಿಂಗ್ ಕಾರ್ಖಾನೆ ಒಡೆಯ. ಇದೇ ಮೊದಲ ಬಾರಿಗೆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಪಾತ್ರವರ್ಗದಲ್ಲಿ ಸಂಜೀವ್, ಆಕಾಶ್, ಶಶಿಕುಮಾರ್, ಹಿರಿಯ ನಟ ಅವಿನಾಷ್ ಹಾಗೂ ಸುಧಾ ಬೆಳವಾಡಿ ಜೋಡಿ ಈ ಚಿತ್ರದಲ್ಲಿದೆ. ಹೊನ್ನವಳ್ಳಿ ಕೃಷ್ಣ, ಶಂಕರ್ ಅಶ್ವಥ್ ಇದ್ದಾರೆ. ಶಿವರಾಜ್ ಮೇಹು ಅವರ ಸಂಕಲನ, ಶಂಕರ್ ಅವರ ಛಾಯಾಗ್ರಹಣ, ಶ್ರೀಹರ್ಷ ಅವರ ಸಂಗೀತ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
Kannada film Neralu which was supposed to release on 26th July will now release on A9th August. The film leads Sanjeev, Aakash, Shashikumar and produced by business man Atul Kulkarni.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada