»   » ಪವನ್ ಒಡೆಯರ್ ಜತೆ ಸಂಗೀತಾ 'ಪ್ರೀತಿ ಗೀತಿ ಇತ್ಯಾದಿ'

ಪವನ್ ಒಡೆಯರ್ ಜತೆ ಸಂಗೀತಾ 'ಪ್ರೀತಿ ಗೀತಿ ಇತ್ಯಾದಿ'

Posted By:
Subscribe to Filmibeat Kannada

ಗೋವಿಂದಾಯ ನಮಃ ಹಾಗೂ ಗೂಗ್ಲಿ ಚಿತ್ರಗಳ ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ಪ್ರೀತಿ ಗೀತಿ ಇತ್ಯಾದಿ' ಚಿತ್ರ ಬಹುತೇಕ ಸಿದ್ಧವಾಗಿದೆ. ಚಿತ್ರವನ್ನು ಇತ್ತೀಚಿಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ ಮುಕ್ತವಾಗಿ ಪ್ರಶಂಸಿಸಿ ಚಿತ್ರಕ್ಕೆ 'ಯು' ಅರ್ಹತಾ ಪತ್ರವನ್ನು ನೀಡಿದೆ.

ಒಟ್ಟು 120 ನಿಮಿಷಗಳ ಸಂಪೂರ್ಣ ಮನರಂಜನೆ ಜೊತೆಗೆ ಸುಮಧುರವಾದ ಹಾಡುಗಳುಳ್ಳ ಈ ಚಿತ್ರವು ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಬೆಳಗಾವಿಯ ವಿಜಯಕುಮಾರ್ ಅವರು ಈ ಚಿತ್ರದ ನಿರ್ಮಾಪಕರು. [ಪವರ್ ಸ್ಟಾರ್ 'ರಣ ವಿಕ್ರಮ' ಥ್ರಿಲ್ಲಿಂಗ್ ಡೀಟೇಲ್ಸ್]


ಜನಪ್ರಿಯ ನಿರ್ದೇಶಕ ಯೋಗರಾಜ ಭಟ್ಟರ ಶಿಷ್ಯ ವೀರೇಂದ್ರ ಸ್ವತಂತ್ರ ನಿರ್ದೇಶಕರಾಗಿ ಈ ಚಿತ್ರದ ಮೂಲಕ ಪರಿಚಿತರಾಗುತ್ತಿದ್ದಾರೆ. 'ಪ್ರೀತಿ ಗೀತಿ ಇತ್ಯಾದಿ' ಚಿತ್ರಕ್ಕೆ ಮುಂಬಯಿಯ ಸ್ಟುಡಿಯೋ ಒಂದರಲ್ಲಿ ಗ್ರೇಡಿಂಗ್ ಕೆಲಸವನ್ನು ಮಾಡಲಾಗಿದೆ.

ವೀರೇಂದ್ರ ಅವರ ನಿರ್ದೇಶನದಲ್ಲಿ ಎರಡು 100 ದಿವಸಗಳ ಸಿನಿಮಾ ನಿರ್ದೇಶಕರಾದ ಪವನ್ ವಡೆಯರ್ (ಇವರು ಸಹ ಭಟ್ಟರ ಶಿಷ್ಯ) ನಾಯಕರಾಗಿ ತೆರೆಯ ಮೇಲೆ ಬರುತ್ತಿದ್ದಾರೆ. ಪವನ್ ವಡೆಯರ್ ಅವರು ಈ ಸಿನಿಮಾದಲ್ಲಿ ಬಾರ್ ಒಂದರಲ್ಲಿ ಉದ್ಯೋಗಿ ಆಗಿ ಅಭಿನಯಿಸುತ್ತಿದ್ದಾರೆ.

ಮಾತಿನ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರು, ತೀರ್ಥಹಳ್ಳಿ ಸ್ಥಳಗಳಲ್ಲಿ ಮಾಡಲಾಗಿದೆ. ಕೇವಲ ಎಂಟು ಪಾತ್ರದಾರಿಗಳನ್ನು ಒಳಗೊಂಡ ಈ 'ಪ್ರೀತಿ ಗೀತಿ ಇತ್ಯಾದಿ' ಚಿತ್ರದ ನಾಯಕಿ ಸಂಗೀತ ಭಟ್.

ವೀರ್ ಸಮರ್ಥ ಅವರ ಸಂಗೀತ, ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಾಹಕರು. ರಂಗಾಯಣ ರಘು, ವಿನಯಾ ಪ್ರಕಾಶ್, ಮಂಜುನಾಥ್ ಗೌಡ, ನಭ ನಟೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada movie 'Preethi Geethi Ityadi' clears censor and got 'U' certificate from regional censor board, directed by Veerendra, and starring Pawan Wodeyar, Sangeetha Bhat in the lead. The audio of PGI is already a hit in the markets and the team recently launched their trailer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada