»   » ಈ ವಾರ 'ಬೆಳ್ಳಿ ಹೆಜ್ಜೆ'ಯಲ್ಲಿ ಇರ್ತಾರಣ್ಣ 'ನೀರ್ ದೋಸೆ' ದತ್ತಣ್ಣ

ಈ ವಾರ 'ಬೆಳ್ಳಿ ಹೆಜ್ಜೆ'ಯಲ್ಲಿ ಇರ್ತಾರಣ್ಣ 'ನೀರ್ ದೋಸೆ' ದತ್ತಣ್ಣ

By Naveen
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಚಿತ್ರರಂಗ ಕಂಡ ಅದ್ಬುತ ಕಲಾವಿದ ಹೆಚ್.ಜೆ.ದತ್ತಾತ್ರೇಯ 'ದತ್ತಣ್ಣ' ಅಂತಲೇ ಜನಪ್ರಿಯ. 75 ವರ್ಷವಾಗಿದ್ದರೂ ಇನ್ನೂ ಯುವಕನಂತೆ ಉತ್ಸಾಹ ಹೊಂದಿರುವ ದತ್ತಣ್ಣನ ಬಗ್ಗೆ ಈಗ ಒಂದು ವಿಶೇಷ ಕಾರ್ಯಕ್ರಮ ನಡೆಯುತ್ತಿದೆ.

  ಕರ್ನಾಟಕ ಚಲನಚಿತ್ರ ಅಕಾಡಮಿ ಪ್ರತಿ ವಾರ ಬೆಳ್ಳಿ ಹೆಜ್ಜೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ವಾರ ಈ ಕಾರ್ಯಕ್ರಮ ದತ್ತಣ್ಣನ ವಿಶೇಷವಾಗಿದೆ. ಜುಲೈ 27 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಗಾಂಧಿಭವನದಲ್ಲಿ ಈ ಸಮಾರಂಭ ನಡೆಯುತ್ತದೆ.

  ನೀರ್ ದೋಸೆ 'ದತ್ತಣ್ಣ'ಗೆ 75 ವರ್ಷ ಆಯ್ತಣ್ಣಾ.!

  ನಿರ್ದೇಶಕರಾದ ಟಿ.ಎಸ್.ನಾಗಭರಣ, ಶೇಷಾದ್ರಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಆಯುಕ್ತರಾದ ಡಾ ಪಿ.ಎಸ್.ಹರ್ಷ ಈ ವಾರದ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  ರಂಗಭೂಮಿಯಿಂದ ಸಿನಿಮಾರಂಗಕ್ಕೆ ಕಾಲಿಟ್ಟ ದತ್ತಣ್ಣ 46 ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. 'ಆಸ್ಫೋಟ', 'ಶರವೇಗದ ಸರದಾರ', 'ಮಾಧುರಿ', 'ಚಿನ್ನಾರಿ ಮುತ್ತ', 'ಬೆಟ್ಟದ ಜೀವ', ಇತ್ತೀಚಿಗಿನ 'ನೀರ್ ದೋಸೆ', 'ರಾಜಕುಮಾರ' ಸೇರಿದಂತೆ 185 ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ.

  ಉಳಿದಂತೆ, ಪೋಷಕ ನಟ ರಾಜ್ಯ ಪ್ರಶಸ್ತಿ (ಆಸ್ಫೋಟ), ಬೆಸ್ಟ್ ನಟ ರಾಜ್ಯ ಪ್ರಶಸ್ತಿ (ಮುನ್ನುಡಿ), ಪೋಷಕ ನಟ ರಾಷ್ಟ್ರ ಪ್ರಶಸ್ತಿ (ಮುನ್ನುಡಿ), ನಟನೆಗಾಗಿ ಎರಡು ಬಾರಿ ಸ್ಪೆಸಲ್ ಮೆನ್ಷನ್ ರಾಷ್ಟ್ರ ಪ್ರಶಸ್ತಿಗಳು ( ಮೌನಿ, ಭಾರತ್ ಸ್ಟೋರ್ಸ್ ), ಫೀಜಿ ಫಿಲಂ ಫೆಸ್ಟಿವಲ್ ನ ಬೆಸ್ಟ್ ಆಕ್ಟರ್ ಪ್ರಶಸ್ತಿ (ಭಾರತ್ ಸ್ಟೋರ್ಸ್) ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ದತ್ತಣ್ಣ ಅವರನ್ನ ಅರಸಿ ಬಂದಿವೆ.

  English summary
  'Belli - Hejje' program organized by Karnataka Chalana Chitra Academy on july 27th at 5 pm in Gandhi Bhavan Mahadev Desai Hall, Kumara Park Road Bengaluru. Kannada senior actor Dattanna will be guest for this week.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more