For Quick Alerts
  ALLOW NOTIFICATIONS  
  For Daily Alerts

  Kannada Actor Rajesh Death : ಹಿರಿಯ ನಟ ಕಲಾ ತಪಸ್ವಿ 'ರಾಜೇಶ್' ನಿಧನ!

  |

  ಕನ್ನಡದ ಖ್ಯಾತ ಹಿರಿಯ ನಟ 'ಕಲಾ ತಪಸ್ವಿ' ರಾಜೇಶ್​ ಅವರು ಇನ್ನು ನೆನಪು ಮಾತ್ರ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇಂದು ಮುಂಜಾನೆ (ಫೆ.19)​ ಕೊನೆಯುಸಿರು ಎಳೆದಿದ್ದಾರೆ. ಉಸಿರಾಟದ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣ ಅವರನ್ನು ಫೆಬ್ರವರಿ 9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ.

  ರಾಜೇಶ್​ ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ರಾಜೇಶ್​​ ಅವರಿಗೆ ವೆಂಟಿಲೇಟರ್​ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾಜೇಶ್ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬುದು ನೋವಿನ ಸಂಗತಿ. ಅವರ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

  ಇಂದು (ಫೆ.19) ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಭಿಮಾನಿಗಳು, ಆಪ್ತರು ಅಂತಿಮ ದರ್ಶನ ಪಡೆದುಕೊಳ್ಳದು ಬಹುದಾಗಿದೆ. ಸಂಜೆ ತನಕ ಅಂತಿಮ ದರ್ಶನಕ್ಕೆ ಅವಕಾಶ. ನಂತರ ಅಂತ್ಯಕ್ರಿಯೆ ನಡೆಯಲಿದೆ.

  ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ರಾಜೇಶ್ ಅವರಿಗೆ ವೆಂಟಿಲೇಟರ್ ಮೂಲಕವೇ ಚಿಕಿತ್ಸೆ ನೀಡಲಾಗುತ್ತಿತ್ತು. ಹಾಗಾಗಿ ಮೊದಲ ದಿನವೇ ಆರೋಗ್ಯ ಸ್ಥಿತಿ ಗಂಭೀರ ಎಂದು ಹೇಳಲಾಗಿತ್ತು. ಬೆಂಗಳೂರಿನ ಬಾಣಸವಾಡಿಯ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ರಾಜೇಶ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದು ಬಂದಿತ್ತು.

  ಕನ್ನಡ ಚಿತ್ರರಂಗದಲ್ಲಿ ಸಾವಿನ ಸುದ್ದಿಗಳು ಇತ್ತೀಚೆಗೆ ಹೆಚ್ಚಾಗಿವೆ. ಇತ್ತೀಚೆಗಷ್ಟೆ ಹಿರಿಯ ನಟಿ ಭಾರ್ಗವಿ ಅವರು ನಿಧನ ಹೊಂದಿದರು. ಈಗ ರಾಜೇಶ್ ಅವರು ಇಲ್ಲವಾಗಿದ್ದಾರೆ. ಹಾಗಾಗಿ ಕನ್ನಡ ಚಿತ್ರರಂಗಕ್ಕೆ ಇದು ನೋವಿನ ಸಂಗತಿ. ಚಿತ್ರರಂಗದ ತಾರೆಯರು, ಅಭಿಮಾನಿಗಳು, ಪ್ರೇಕ್ಷಕ ಬಳಗ ರಾಜೇಶ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

  ಹಿರಿಯ ನಟ ರಾಜೇಶ್ ಅವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ರಂಜಿಸಿದ್ದಾರೆ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿ ಇಂದ ಅವರು ತಮ್ಮ ನಟನಾ ಪ್ರವೃತ್ತಿ ಆರಂಭಿಸಿದರು. ಶಾಲೆ ಓದುವಾಗಲೇ ಅವರು, ನಾಟಕ ಮಂಡಳಿಯಲ್ಲಿ ಪಾತ್ರ ಮಾಡಲು ಆರಂಭಿಸಿದ್ದರು. 'ಶಕ್ತಿ ನಾಟಕ ಮಂಡಳಿ' ಎನ್ನುವ ಮಂಡಳ ಸ್ಥಾಪಿಸಿ, ಹಲವು ನಾಟಗಳನ್ನು ಅವರು ಪ್ರಸ್ತುತ ಪಡಿಸಿದ್ದಾರೆ. ನಂತರ 'ವೀರ ಸಂಕಲ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು.

  1968ರ 'ನಮ್ಮ ಊರು' ಚಿತ್ರ ರಾಜೇಶ್ ಅವರಿಗೆ ಹೆಸರು ತಂದುಕೊಟ್ಟಿತ್ತು. 'ಸೊಸೆ ತಂದ ಸೌಭಾಗ್ಯ', 'ದೇವರ ದುಡ್ಡ', 'ಕಲಿಯುಗ', 'ದೇವರ ಗುಡಿ', 'ವೀರ ಸಂಕಲ್ಪ', 'ಗಂಗೆ ಗೌರಿ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ರಾಜೇಶ್​ ಬಣ್ಣ ಹಚ್ಚಿದ್ದರು. ಇನ್ನು ಅವರು ಅಭಿನಯದ ಕೊನೆಯ ಚಿತ್ರ 'ಓಲ್ಡ್​ ಮಾಂಕ್​' ಈ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಫೆ.25ರಂದು ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಇದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.

  English summary
  Kalatapasvi Kannada Senior Actor Rajesh Passes away. He is father in law of actor Arjun Sarja.
  Saturday, February 19, 2022, 8:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X