For Quick Alerts
  ALLOW NOTIFICATIONS  
  For Daily Alerts

  ಅನಾರೋಗ್ಯದಿಂದ ಬಳಲುತ್ತಿದ್ದಾರೆ 80ಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ನಟರಾಜ್

  |

  ನಟ ನಟರಾಜ್ ಎಂಬ ಹೆಸರು ಕೇಳಿದ ತಕ್ಷಣ ಇವರು ಯಾರು ಎಂದು ನಿಮಗೆ ತಿಳಿಯದಿರಬಹುದು. ಆದರೆ, ಇವರ ಫೋಟೋ ನೋಡಿದರೆ ಖಂಡಿತ ಯಾವುದೋ ಸಿನಿಮಾದಲ್ಲಿ ನೋಡಿದ್ದೇವಲ್ಲ ಎಂದು ನೆನಪಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟರಾಜ್ ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

  ಐದು ತಿಂಗಳ ಹಿಂದೆ ನಟರಾಜ್ ಅವರಿಗೆ ಸ್ಟ್ರೋಕ್ ಆಗಿತ್ತು. ಅಲ್ಲಿಂದ ಅವರು ಯಾವ ಕೆಲಸ ಮಾಡಲು ಆಗುತ್ತಿಲ್ಲ. ಮನೆ ಸಂಸಾರದ ಜೊತೆಗೆ ಸಾಲ ಬೇರೆ ಇದ್ದು, ನಟರಾಜ್ ಅವರಿಗೆ ಬದುಕು ಸಾಕಾಗಿದೆ. ಮಗಳ ಓದಿನ ಖರ್ಚು, ತನ್ನ ಆಸ್ಪತ್ರೆ ಖರ್ಚು ಯಾವುದಕ್ಕೂ ಹಣ ಇಲ್ಲದಂತೆ ಆಗಿದೆ.

  ಲಾವಿದರ ಸಂಘ ಇತ್ತ ಒಮ್ಮೆ ನೋಡಿ ಕಷ್ಟದಲ್ಲಿ ಇರುವ ನಟರಾಜ್ ಅವರಿಗೆ ಸಹಾಯ ಮಾಡಬೇಕಿದೆ. ಆನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ಹಣದ ಅಗತ್ಯ ಇದೆ. ಹೀಗಾಗಿ ಕನ್ನಡ ಚಿತ್ರರಂಗ ನೆರವು ನೀಡಬೇಕಿದೆ.

  ಅಂದಹಾಗೆ, ನಟರಾಜ್ ವಿಷ್ಣುವರ್ಧನ್ ಅವರ ಅಭಿಮಾನಿ. ಅವರ 'ನನ್ನ ಪ್ರತಿಜ್ಞೆ' ಸಿನಿಮಾದ ಶೂಟಿಂಗ್ ನೋಡಿ ತಾನು ನಟ ಆಗುವ ಪ್ರತಿಜ್ಞೆ ಮಾಡಿದರು. ಒಟ್ಟು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟರಾಜ್, ಶಿವರಾಜ್ ಕುಮಾರ್ ಅವರ 'ಸಂತ' ಹಾಗೂ ವಿಷ್ಣುವರ್ಧನ್ ಅವರ 'ಏಕದಂತ' ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Kannada supporting actor Nataraj is suffering from illness.He acted morethan 80 movvies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X