»   » ಕನ್ನಡಿಗರ ರೋಷಾಗ್ನಿ ಹೊತ್ತಿ ಉರಿಯುವಂತೆ ಮಾಡಿದ ವರ್ಮ

ಕನ್ನಡಿಗರ ರೋಷಾಗ್ನಿ ಹೊತ್ತಿ ಉರಿಯುವಂತೆ ಮಾಡಿದ ವರ್ಮ

Posted By:
Subscribe to Filmibeat Kannada

ನಿರ್ದೇಶಕ ರಾಮ್ ಗೋಪಾಲ್ ವರ್ಮ ಮತ್ತೆ ವಿವಾದ ಹುಟ್ಟು ಹಾಕಿದ್ದಾರೆ. ಈ ಬಾರಿ 'ಆರ್.ಜಿ.ವಿ' ಕನ್ನಡಿಗರನ್ನ ಕೆಣಕ್ಕಿದ್ದಾರೆ. ಕನ್ನಡಿಗರಿಗೆ ಸ್ವಾಭಿಮಾನವಿಲ್ಲವೆಂದು ಟೀಕಿಸಿದ್ದಾರೆ.

ಇದಕ್ಕೆ ಕಾರಣ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ'. ಹೌದು, 'ಬಾಹುಬಲಿ-2' ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಗಳಿಸಿ ದಾಖಲೆ ಬರೆದಿದೆ. ಅದೇ, ರೀತಿ ಕರ್ನಾಟಕದಲ್ಲೂ ಕೂಡ 'ಬಾಹುಬಲಿ-2' ಅಬ್ಬರಿಸಿ ದಾಖಲೆಯ ಕಲೆಕ್ಷನ್ ಮಾಡಿದೆ. ಇದು ಕನ್ನಡಿಗರಿಗಾದ ಹಿನ್ನಡೆ ಎಂದು ರಾಮ್ ಗೋಪಾಲ್ ವರ್ಮ ಟ್ವೀಟ್ ಮಾಡುವ ಮೂಲಕ ಕೆಣಕ್ಕಿದ್ದಾರೆ.

ಅಷ್ಟೇ ಅಲ್ಲದೇ, ಪರಭಾಷೆ ಚಿತ್ರಗಳನ್ನ ವಿರೋಧಿಸುವ ಕನ್ನಡಿಗರು ಮೊದಲು ಪರಭಾಷೆ ಸಿನಿಮಾಗಳನ್ನ ನೋಡುವ ಕನ್ನಡಿಗರ ವಿರುದ್ಧ ಹೋರಾಟ ಮಾಡಿ ಎಂದು ಅಣುಕಿಸಿದ್ದಾರೆ. ವರ್ಮ ಮಾಡಿರುವ ಟ್ವೀಟ್ ಗಳನ್ನ ನೋಡಿ. ಮುಂದೆ ಓದಿ.....

ಕರ್ನಾಟಕದಲ್ಲಿ 'ಬಾಹುಬಲಿ' ಗೆಲುವು

''ಕರ್ನಾಟಕದಲ್ಲಿ ತೆಲುಗು ಚಿತ್ರ ಬಾಹುಬಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇದು ಕನ್ನಡದ ದೊಡ್ಡ ಚಿತ್ರಗಳಿಗಿಂತ ದೊಡ್ಡ ಗೆಲುವು. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರವೇನು ಅಲ್ಲ''- ರಾಮ್ ಗೋಪಾಲ್ ವರ್ಮ, ನಿರ್ದೇಶಕ

ಪರಭಾಷೆ ನೋಡುವ ಕನ್ನಡಿಗರ ವಿರುದ್ಧ ಹೋರಾಡಿ!

''ಕನ್ನಡಿಗರು ಡಬ್ಬಿಂಗ್ ಚಿತ್ರಗಳ ವಿರುದ್ಧ ಹೋರಾಟ ಮಾಡಿದರು. ಆದ್ರೆ, ನೇರವಾಗಿ ಬಿಡುಗಡೆಯಾದ ಪರಭಾಷೆ ಚಿತ್ರಗಳನ್ನ ಕನ್ನಡಿಗರು ದೊಡ್ಡ ಮಟ್ಟದಲ್ಲಿ ನೋಡುತ್ತಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಲ್ಲ. ಅವರಿಗೆ ಬೇಕಾಗಿರುವುದು ಉತ್ತಮ ಚಿತ್ರವಷ್ಟೇ''- ರಾಮ್ ಗೋಪಾಲ್ ವರ್ಮ, ನಿರ್ದೇಶಕ

ಕನ್ನಡಿಗರ ವಿರುದ್ಧವೇ ಕನ್ನಡಿಗರು ಹೋರಾಡಿ!

''ಹೆಮ್ಮೆಯ ಕನ್ನಡಿಗರು, ಕನ್ನಡಿಗರ ವಿರುದ್ಧವೇ ಹೋರಾಡಿ. ಯಾಕಂದ್ರೆ, ಕನ್ನಡ ಸಿನಿಮಾಗಳಿಗಿಂತ ತೆಲುಗು ಚಿತ್ರವನ್ನ ಹೆಚ್ಚು ನೋಡುತ್ತಿದ್ದಾರೆ ಕನ್ನಡಿಗರು''-ರಾಮ್ ಗೋಪಾಲ್ ವರ್ಮ, ನಿರ್ದೇಶಕ

ವರ್ಮ ವಿರುದ್ಧ ಕನ್ನಡಿಗರು ಸಮರ

''ರಾಮ್ ಗೋಪಾಲ್ ವರ್ಮ ಹಾಕಿರುವ ಈ ಪೋಸ್ಟ್ ಗಳಿಂದ ಕನ್ನಡ ಚಿತ್ರ ಪ್ರೇಮಿಗಳು ತಿರುಗಿ ಬಿದ್ದಿದ್ದಾರೆ. ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ವರ್ಮ ವಿರುದ್ಧ ಸಮರ ಸಾರುತ್ತಿದ್ದಾರೆ.

ವರ್ಮ ಟ್ವೀಟ್ ಉದ್ದೇಶವೇನು?

ಅಷ್ಟಕ್ಕೂ, ವರ್ಮ ಮಾಡಿರುವ ಈ ಟ್ವೀಟ್ ನ ಉದ್ದೇಶವೇನು? ಇದಕ್ಕೆ ಉತ್ತರ ಕೊಡೋರು ಯಾರು? ಡಬ್ಬಿಂಗ್ ಬೇಡ ಎಂದು ಹೋರಾಟ ಮಾಡುತ್ತಿರುವ ಹೋರಾಟಗಾರರ? ಅಥವಾ ಕನ್ನಡದಲ್ಲಿ ನೆಲದಲ್ಲಿ ಪರಭಾಷೆ ಸಿನಿಮಾಗಳನ್ನ ಪ್ರೋತ್ಸಾಹ ಮಾಡುತ್ತಿರುವ ಚಿತ್ರಪ್ರೇಮಿಗಳಾ?

English summary
Ram Gopal Varma is at it again. The filmmaker, who has been relentlessly tweeting about SS Rajamouli's Baahubali 2: The Conclusion, took potshots at Kannadigas, saying that they have "no pride at all"

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada