twitter
    For Quick Alerts
    ALLOW NOTIFICATIONS  
    For Daily Alerts

    50ನೇ ದಿನದತ್ತ ಕಾಂತಾರ; 46 ದಿನಗಳ ಕಲೆಕ್ಷನ್ ಎಷ್ಟು, 400 ಕೋಟಿಗೆ ಇನ್ನೆಷ್ಟು ಗಳಿಸಬೇಕು?

    |

    ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ರಾಜ್ಯಾದ್ಯಂತ 200+ ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಮೊದಲಿಗೆ ಕನ್ನಡದಲ್ಲಿ ಮಾತ್ರ ತಯಾರಾಗಿ ತೆರೆಕಂಡಿದ್ದ ಕಾಂತಾರ ಚಿತ್ರಕ್ಕೆ ಮೊದಲ ದಿನವೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಇದು ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಬೇಕಿತ್ತು ಎಂಬ ಅಭಿಪ್ರಾಯವನ್ನು ಚಿತ್ರ ವೀಕ್ಷಿಸಿದ ಹಲವರು ವ್ಯಕ್ತಪಡಿಸಿದ್ದರು.

    ಕಾಂತಾರ ಕನ್ನಡ ಅವತರಿಣಿಕೆಗೆ ಯಾವಾಗ ಬೇರೆ ರಾಜ್ಯಗಳಲ್ಲೂ ಹೌಸ್‌ಫುಲ್ ಬೋರ್ಡ್ ಬೀಳಲಾರಂಭಿಸಿತೋ ಆ ಕೂಡಲೇ ಎಚ್ಚೆತ್ತ ಹೊಂಬಾಳೆ ಫಿಲ್ಮ್ಸ್ ಚಿತ್ರವನ್ನು ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಿತು. ನಿರೀಕ್ಷೆಯಂತೆ ಕಾಂತಾರ ಚಿತ್ರ ಪರಭಾಷೆಗಳಲ್ಲೂ ಅಬ್ಬರಿಸಿತು. ವಿಶೇಷವಾಗಿ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಕಾಂತಾರ ಬೃಹತ್ ಪ್ರತಿಕ್ರಿಯೆ ಪಡೆದುಕೊಂಡಿತು. ತೆಲುಗಿನಲ್ಲಿ ಬಿಡುಗಡೆ ದಿನವೇ ನಾಲ್ಕು ಕೋಟಿ ಗಳಿಕೆ ಮಾಡಿದ ಕಾಂತಾರ ಅಬ್ಬರಿಸಿತ್ತು.

    7 ಚಿತ್ರಗಳನ್ನು ಥಿಯೇಟರ್‌ನಲ್ಲೇ ರಿಲೀಸ್ ಮಾಡಿದ್ದ ಹೊಂಬಾಳೆ ಫಿಲ್ಮ್ಸ್‌ನ ಈ ಚಿತ್ರ ನೇರವಾಗಿ ಓಟಿಟಿಗೆ!7 ಚಿತ್ರಗಳನ್ನು ಥಿಯೇಟರ್‌ನಲ್ಲೇ ರಿಲೀಸ್ ಮಾಡಿದ್ದ ಹೊಂಬಾಳೆ ಫಿಲ್ಮ್ಸ್‌ನ ಈ ಚಿತ್ರ ನೇರವಾಗಿ ಓಟಿಟಿಗೆ!

    ಈ ಮೂಲಕ ಕನ್ನಡ ಭಾಷೆಯಲ್ಲಿಯೇ ಕಾಂತಾರ ಚಿತ್ರವನ್ನು ಎಲ್ಲೆಡೆ ತಲುಪಿಸಬೇಕೆಂಬ ಚಿತ್ರತಂಡದ ಉದ್ದೇಶವೂ ಬದಲಾಗಿತ್ತು. ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಾಂತಾರ ಚಿತ್ರ ವಿದೇಶ ಕಲೆಕ್ಷನ್ ಮೂಲಕವೇ ಈ ಮೊತ್ತವನ್ನು ಸಂಪಾದಿಸಿತ್ತು. ಹೀಗೆ ಎಲ್ಲೆಡೆ ಅಬ್ಬರ ನಡೆಸುತ್ತಿರುವ ಕಾಂತಾರ ಚಿತ್ರದ ಕನ್ನಡ ಅವತರಿಣಿಕೆ ನಿನ್ನೆಗೆ ( ನವೆಂಬರ್‌ 14 ) 46 ದಿನಗಳನ್ನು ಪೂರೈಸಿದ್ದು ಐವತ್ತನೇ ದಿನದತ್ತ ಹಾಗೂ 400 ಕೋಟಿ ಕಲೆಹಾಕುವತ್ತ ಮುನ್ನುಗ್ಗುತ್ತಿದೆ. ಹಾಗಾದರೆ ಕಾಂತಾರ ಚಿತ್ರ 46 ದಿನಗಳಲ್ಲಿ ಎಷ್ಟು ಕೋಟಿ ಕಲೆಹಾಕಿದೆ ಹಾಗೂ 400 ಕೋಟಿ ಕಲೆಕ್ಷನ್ ಮಾಡಲು ಇನ್ನೆಷ್ಟು ಗಳಿಸಬೇಕು ಎಂಬ ವಿವರ ಈ ಕೆಳಕಂಡಂತಿದೆ..

    46 ದಿನಗಳಲ್ಲಿ ಕಾಂತಾರ ಗಳಿಸಿದ್ದೆಷ್ಟು?

    46 ದಿನಗಳಲ್ಲಿ ಕಾಂತಾರ ಗಳಿಸಿದ್ದೆಷ್ಟು?

    ಕಾಂತಾರ ಚಿತ್ರ ನವೆಂಬರ್ 14ರ ಸೋಮವಾರದಂದು 2 ಕೋಟಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಅನಾಲಿಸ್ಟ್‌ಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಕಾಂತಾರ ಚಿತ್ರ ಎಲ್ಲಾ ಅವತರಿಣಿಕೆ ಸೇರಿದಂತೆ ಇಲ್ಲಿಯವರೆಗೆ 371 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಪೈಕಿ ಎಲ್ಲೆಲ್ಲಿ ಕಾಂತಾರ ಎಷ್ಟು ಗಳಿಕೆ ಮಾಡಿದೆ ಎಂಬ ವಿವರ ಈ ಕೆಳಕಂಡಂತಿದೆ..

    ಕರ್ನಾಟಕ : 176.40 ಕೋಟಿ

    ಆಂಧ್ರ ಪ್ರದೇಶ ಹಾಗೂ ತೆಲಂಗಾಣ : 51.31 ಕೋಟಿ

    ತಮಿಳು ನಾಡು : 9.75 ಕೋಟಿ

    ಕೇರಳ: 13.60 ಕೋಟಿ

    ಹಿಂದಿ + ದೇಶದ ಇತರೆ ನಗರಗಳಲ್ಲಿ : 92.50 ಕೋಟಿ

    ವಿದೇಶ: 27.75 ಕೋಟಿ

    ಹಿಂದಿಯಲ್ಲಿ 75 ಕೋಟಿ; 400 ಕೋಟಿಯ ಹೊಸ್ತಿಲಲ್ಲಿ ಕಾಂತಾರ!

    ಹಿಂದಿಯಲ್ಲಿ 75 ಕೋಟಿ; 400 ಕೋಟಿಯ ಹೊಸ್ತಿಲಲ್ಲಿ ಕಾಂತಾರ!

    ಇನ್ನು ಈವರೆಗೆ ಕಾಂತಾರ ಹಿಂದಿ ವರ್ಷನ್ 75 ಕೋಟಿ ಗಳಿಕೆ ಮಾಡಿದೆ. ಸದ್ಯ ಹಿಂದಿಗೆ ಡಬ್ ಆಗಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಕ್ಷಿಣ ಭಾರತದ ಚಿತ್ರಗಳ ಪಟ್ಟಿಯಲ್ಲಿ ಕಾಂತಾರ ಒಂಬತ್ತನೇ ಸ್ಥಾನದಲ್ಲಿದೆ. ಇನ್ನು 46 ದಿನಗಳಲ್ಲಿ 371 ಕೋಟಿ ಗಳಿಕೆ ಮಾಡಿರುವ ಕಾಂತಾರ ಚಿತ್ರ 400 ಕೋಟಿ ಗಳಿಕೆ ಮಾಡಲು ಇನ್ನೂ 29 ಕೋಟಿ ಗಳಿಸಬೇಕಿದೆ.

    ಕನ್ನಡದಲ್ಲಿ ಇಂಡಸ್ಟ್ರಿ ಹಿಟ್, ನೂತನ ದಾಖಲೆ!

    ಕನ್ನಡದಲ್ಲಿ ಇಂಡಸ್ಟ್ರಿ ಹಿಟ್, ನೂತನ ದಾಖಲೆ!

    ಕನ್ನಡದಲ್ಲಿ ಈ ಹಿಂದೆ ಕೆಜಿಎಫ್ ಚಾಪ್ಟರ್ 2 ಮಾಡಿದ್ದ ಗಳಿಕೆ ದಾಖಲೆಯನ್ನು ಹಿಂದಿಕ್ಕಿ ತನ್ನದೇ ಹೊಸ ಕಲೆಕ್ಷನ್ ದಾಖಲೆ ಬರೆದಿರುವ ಕಾಂತಾರ ಕರ್ನಾಟಕದಲ್ಲಿ ನೂತನ ಇಂಡಸ್ಟ್ರಿ ಹಿಟ್ ಆಗಿದೆ. ಅಷ್ಟೇ ಅಲ್ಲದೇ ಬಿಡುಗಡೆಗೊಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಐವತ್ತು ದಿನ ಪೂರೈಸಲಿರುವ ಕನ್ನಡದ ಮೊದಲ ಚಿತ್ರ ಎಂಬ ವಿನೂತನ ದಾಖಲೆ ಬರೆಯುವತ್ತ ಕಾಂತಾರ ಹೆಜ್ಜೆ ಇಟ್ಟಿದೆ.

    English summary
    Kantara grossed 371 crores in 46 days and heading towards 400 crores. Read on
    Tuesday, November 15, 2022, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X