For Quick Alerts
  ALLOW NOTIFICATIONS  
  For Daily Alerts

  ಕೇರಳದಲ್ಲೇ 'ಕಾಂತಾರ' ಬಜೆಟ್ ವಾಪಸ್: ಭಾರೀ ಮೊತ್ತಕ್ಕೆ ತೆಲುಗು, ಮಲಯಾಳಂ ಸ್ಯಾಟಲೈಟ್ ರೈಟ್ಸ್ ಮಾರಾಟ!

  |

  ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮತ್ತೊಂದು ಹೆಮ್ಮೆಯ ಸಿನಿಮಾ 'ಕಾಂತಾರ' ಗೆಲುವಿನ ಓಟ ಮುಂದುವರೆದಿದೆ. 300 ಕೋಟಿಗೂ ಅಧಿಕ ಕಲೆಕ್ಷನ್ ಸಿನಿಮಾ ಸಿನಿಮಾ ದಾಖಲೆ ಬರೆದಿದೆ. ಕೇರಳದಲ್ಲೇ ಚಿತ್ರಕ್ಕೆ ಹಾಕಿದ್ದ ಅಷ್ಟು ಬಂಡವಾಳ ವಾಪಸ್ ಬಂದಂತಾಗಿದೆ. ಇನ್ನು ಮಲಯಾಳಂ ಹಾಗೂ ತೆಲುಗು 'ಕಾಂತಾರ' ಸ್ಯಾಟಲೈಟ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ.

  ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ನಿರ್ಮಾಪಕರಿಗೆ ಹಾಗೂ ವಿತರಕರಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಎಲ್ಲಾ ಮೂಲಗಳಿಂದ ಭರ್ಜರಿ ಹಣವನ್ನು ತಂದು ಕೊಡುತ್ತಿದೆ. ಬರೀ ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿ ಸೂಪರ್ ಹಿಟ್ ಆಗಿದೆ. ಈಗ ಸ್ಯಾಟಲೈಟ್, ಡಿಜಿಟಲ್ ರೈಟ್ಸ್‌ನಿಂದಲೂ ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡ್ತಿದೆ. ಅಕ್ಟೋಬರ್ 20ರಂದು ಮಲಯಾಳಂ ಭಾಷೆಗೆ ಡಬ್ ಆಗಿ ಸಿನಿಮಾ ಕೇರಳದಲ್ಲಿ ರಿಲೀಸ್ ಆಗಿತ್ತು. ಪೃಥ್ವಿರಾಜ್ ಸುಕುಮಾರನ್ ಬಹಳ ದೊಡ್ಡಮಟ್ಟದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ಕೊಂಡೊಯ್ದಿದ್ದರು.

  ಪ್ರಜ್ವಲ್ ದೇವರಾಜ್ ನೂತನ ಚಿತ್ರ ತೆರೆಗೆ; ಮಹಾ ದಾಖಲೆ ಬರೆಯುವ ಮುನ್ನವೇ 'ಕಾಂತಾರ' ಎತ್ತಂಗಡಿ!ಪ್ರಜ್ವಲ್ ದೇವರಾಜ್ ನೂತನ ಚಿತ್ರ ತೆರೆಗೆ; ಮಹಾ ದಾಖಲೆ ಬರೆಯುವ ಮುನ್ನವೇ 'ಕಾಂತಾರ' ಎತ್ತಂಗಡಿ!

  ಸದ್ಯ 5 ಭಾಷೆಗಳಲ್ಲಿ ತೆರೆಕಂಡು ಸದ್ದು ಮಾಡುತ್ತಿರುವ 'ಕಾಂತಾರ' ಚಿತ್ರವನ್ನು ತುಳು ಭಾಷೆಗೆ ಡಬ್ ಮಾಡಿ ಕರಾವಳಿ ಭಾಗದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ತುಳು ವರ್ಷನ್ ತೆರೆಗೆ ಬರಲಿದೆ.

  ಕೇರಳದಲ್ಲಿ 17 ಕೋಟಿ ಕಲೆಕ್ಷನ್

  ಕೇರಳದಲ್ಲಿ 17 ಕೋಟಿ ಕಲೆಕ್ಷನ್

  ಕನ್ನಡ, ಹಿಂದಿ, ತೆಲುಗು, ತಮಿಳು ನಂತರ ಕೊನೆಯದಾಗಿ 'ಕಾಂತಾರ' ಮಲಯಾಳಂ ವರ್ಷನ್ ತೆರೆಗಪ್ಪಳಿಸಿತ್ತು. ಮೊದಲ ದಿನದಿಂದಲೂ ಮಲಯಾಳಂ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದರು. ಸದ್ಯ 26 ದಿನಕ್ಕೆ ಸಿನಿಮಾ ಅಂದಾಜು 17 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. 12 ರಿಂದ 13 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿತ್ತು. ಬರೀ ಕೇರಳ ಬಾಕ್ಸಾಫೀಸ್‌ನಲ್ಲೇ ಆ ಮೊತ್ತ ವಾಪಸ್ ಬಂದಂತಾಗಿದೆ. ಕೇರಳದಲ್ಲಿ 'KGF' ಚಾಪ್ಟರ್ 1 ದಾಖಲೆಯನ್ನು ಅಳಿಸಿ 'ಕಾಂತಾರ' ಮುನ್ನುಗ್ಗುತ್ತಿದೆ.

  ಸ್ಯಾಟಲೈಟ್ ರೈಟ್ಸ್‌ಗೆ ಡಿಮ್ಯಾಂಡ್

  ಸ್ಯಾಟಲೈಟ್ ರೈಟ್ಸ್‌ಗೆ ಡಿಮ್ಯಾಂಡ್

  ಥಿಯೇಟರ್‌ಗಳಲ್ಲಿ 'ಕಾಂತಾರ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾ ಓಟಿಟಿಗೆ ಯಾವಾಗ ಬರುತ್ತೆ? ಟಿವಿಗೆ ಬರೋದು ಯಾವಾಗ ? ಎನ್ನುವ ಚರ್ಚೆ ಶುರುವಾಗಿದೆ. ಏಷಿಯಾನೆಟ್ ಸಂಸ್ಥೆ ಮಲಯಾಳಂ ವರ್ಷನ್ ಟಿವಿ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಇನ್ನು ತೆಲುಗು ವರ್ಷನ್‌ ಕೂಡ ದಾಖಲೆ ಬೆಲೆಗೆ ಮಾರಾಟ ಮಾಡಿರುವ ಸುಳಿವು ಸಿಗುತ್ತಿದೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

  ತೆಲುಗು ರಾಜ್ಯಗಳಲ್ಲಿ 45 ಕೋಟಿ ಗಳಿಕೆ

  ತೆಲುಗು ರಾಜ್ಯಗಳಲ್ಲಿ 45 ಕೋಟಿ ಗಳಿಕೆ

  ಪಕ್ಕದ ಆಂಧ್ರ, ತೆಲಂಗಾಣದಲ್ಲೂ ಸಿನಿಮಾ ಭಾರೀ ಸದ್ದು ಮಾಡ್ತಿದೆ. 30 ದಿನಕ್ಕೆ 45 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರೋ ಸಿನಿಮಾ 25 ಕೋಟಿ ಶೇರ್ ತಂದುಕೊಟ್ಟಿರುವ ಲೆಕ್ಕಾಚಾರ ನಡೀತಿದೆ. ತೆಲುಗು ಸ್ಯಾಟಲೈಟ್ ರೈಟ್ಸ್ 4.5 ಕೋಟಿಗೆ ಮಾರಾಟವಾಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಸಿನಿಮಾ ಕ್ರೇಜ್ ನೋಡಿ ಮನರಂಜನೆ ವಾಹಿನಿಗಳು ಸಿನಿಮಾ ರೈಟ್ಸ್‌ಗಾಗಿ ಮುಗಿಬಿದ್ದಿವೆ.

  'ಕಾಂತಾರ' ಸದ್ಯಕ್ಕೆ ಓಟಿಟಿಗೆ ಬರಲ್ಲ

  'ಕಾಂತಾರ' ಸದ್ಯಕ್ಕೆ ಓಟಿಟಿಗೆ ಬರಲ್ಲ

  ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾ ಆದರೂ ರಿಲೀಸ್ ಆದ 48 ದಿನಗಳ ನಂತರ ಓಟಿಟಿಗೆ ಬರುತ್ತದೆ. ಆ ಲೆಕ್ಕಾಚಾರದಲ್ಲಿ ಇದೇ ಶುಕ್ರವಾರ 'ಕಾಂತಾರ' ಡಿಜಿಟಲ್‌ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಚರ್ಚೆ ನಡೀತಿದೆ. ಆದರೆ ಯಾವುದೇ ಕಾರಣಕ್ಕೂ ಸಿನಿಮಾ ಈಗಲೇ ಓಟಿಟಿಗೆ ಬರುವುದಿಲ್ಲ. 46 ದಿನವಾದರೂ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಆಗುತ್ತಿರುವ ಚಿತ್ರವನ್ನು ಈಗಲೇ ಸ್ಮಾಲ್‌ ಸ್ಕ್ರೀನ್‌ಗೆ ತರೋದು ಅನುಮಾನ. ಈವರೆಗೆ ಅಫೀಷಿಯಲ್ ಓಟಿಟಿ ರಿಲೀಸ್ ಡೇಟ್ ಕೂಡ ಘೋಷಣೆ ಆಗಿಲ್ಲ.

  English summary
  Kantara Kerala Collection, Kantara malayalam, telugu satellite rights sold for a whopping price. Kantara has earned a massive share from the Malayalam dubbed version. Know more.
  Wednesday, November 16, 2022, 23:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X