»   » ಕುತೂಹಲ, ತಾರ್ಕಿಕ ಅಂಶ ಇದ್ದರೆ ಫಿಲಂಗೆ ಬೆಲೆ: ಹಂಸಲೇಖ

ಕುತೂಹಲ, ತಾರ್ಕಿಕ ಅಂಶ ಇದ್ದರೆ ಫಿಲಂಗೆ ಬೆಲೆ: ಹಂಸಲೇಖ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕುತೂಹಲ ಹಾಗೂ ತಾರ್ಕಿಕ ಅಂಶಗಳು ಒಳಗೊಂಡಿದ್ದಾರೆ ಮಾತ್ರ ಒಂದು ಉತ್ತಮ ಚಲನಚಿತ್ರ ಮೂಡಿಬರಲು ಸಾಧ್ಯವಾಗುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರು ಅಭಿಪ್ರಾಯಪಟ್ಟಿದ್ದಾರೆ.

  ಶ್ರೀರಂಗಪಟ್ಟಣ ಸಮೀಪ ಕಾವೇರಿ ಸನ್ನಿಧಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಆಯೋಜಿಸಿದ ಚಲನಚಿತ್ರಗಳಿಗೆ ಚಿತ್ರಕಥೆ ರಚಿಸುವ ಬಗ್ಗೆ ಮೂರು ದಿನಗಳ ಚಿತ್ರಕಥಾ ರಚನಾ ಕಮ್ಮಟವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  Karnataka Chalanachitra Academy Script Writing Training with Hamsalekha

  'ಕಥೆಯಲ್ಲಿ ಕುತೂಹಲವಿರಬೇಕು ಹಾಗೂ ತಾರ್ಕಿಕ ಅಂಶಗಳು ಒಳಗೊಂಡಿರುಬೇಕು ಇದರಿಂದ ಸಿನಿಮಾ ನೋಡುಗರಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಹಾಗೂ ಚಿತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು ಕಥೆಗಾರನ್ನು ಉತ್ತಮ ಕಥೆಯನ್ನು ಬರೆಯುವುದು ಒಂದು ಕಲೆ ಹಾಗೂ ನಿರ್ದೇಶಕರಿಗೆ ಕಥೆ ಹೇಳುವುದು ಒಂದು ಕಲೆಯಾಗಿರುತ್ತದೆ ಎಂದರು.

  ಕರ್ನಾಟಕದಲ್ಲಿ ಸಿನಿಮಾ ರಂಗದಲ್ಲಿ ಕಥೆಗಾರನ್ನು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು. ಕಥೆಗಾರನು ಪ್ರತಿಯೊಂದು ಸಂಭಾಷಣೆಯನ್ನು ಹಾಗೂ ಘಟನೆಯನ್ನು ನಿರ್ದೇಶಕನಿಗೆ ಉತ್ತಮವಾಗಿ ಪ್ರಸ್ತುತ ಪಡಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಆಗ ಮಾತ್ರ ನಿರ್ದೆಶಕರು ಕಥೆಯನ್ನು ಒಪ್ಪುತ್ತಾರೆ ಎಂದು ತಿಳಿಸಿದರು.

  Karnataka Chalanachitra Academy Script Writing Training with Hamsalekha

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರು ಮಾತನಾಡಿ ಯಾವುದೇ ಸಿನಿಮಾ ಯಶಸ್ವಿಯಾಗಲು ಉತ್ತಮ ಕಥೆ ಮುಖ್ಯ ಹಾಗೂ ಕನ್ನಡ ಸಿನಿಮಾದಲ್ಲಿ ಒಳ್ಳೆಯ ಚಿತ್ರಕಥೆ ರಚಿಸುವವರು ಬರಬೇಕು ಎಂಬ ಉದ್ದೇಶದಿಂದ ಮೂರು ದಿನಗಳ ಚಿತ್ರಕಥಾ ರಚನಾ ಕಮ್ಮಟವನ್ನು ಆಯೋಜಿಸಿದ್ದು ಇದರ ಸದುಪಯೋಗ ಪಡೆದು ಉತ್ತಮ ಚಿತ್
  ರಕಥಾಗಾರರಾಗಿ ಕನ್ನಡ ಚಲನಚಿತ್ರ ರಂಗಕ್ಕೆ ಬರಲಿ ಎಂದು ಅವರು ಆಶಿಸಿದರು.

  ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕರಾದ ಎನ್.ಆರ್.ನಂಜುಂಡೇಗೌಡ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಬೀರಪ್ಪ, ಕಮ್ಮಟದ ನಿರ್ದೇಶಕರು ಹಾಗೂ ಚಲನಚಿತ್ರ ನಿರ್ದೇಶಕರಾದ ರಾಮದಾಸನಾಯ್ಡು, ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ. ದಿನೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಾಶ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

  English summary
  Karnataka Chalanachitra Academy invites application for a short term screenplay writing training in Bangalore. The course starts from in the month of July, 2014. Last date for submission for applications is 10th July, 2014.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more