»   » ಚಂದನವನದ ನಕ್ಷತ್ರ ಕೆಎಸ್ಎಲ್ ಸ್ವಾಮಿ ಅವರಿಗೆ ನುಡಿ-ನಮನ

ಚಂದನವನದ ನಕ್ಷತ್ರ ಕೆಎಸ್ಎಲ್ ಸ್ವಾಮಿ ಅವರಿಗೆ ನುಡಿ-ನಮನ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ನವೆಂಬರ್ 5ರಂದು ಬೆಳಿಗ್ಗೆ 11-30 ಗಂಟೆಗೆ ಬೆಂಗಳೂರು ನಗರದ ಕುಮಾರ ಪಾರ್ಕ್ ರಸ್ತೆಯಲ್ಲಿರುವ ಗಾಂಧೀ ಭವನದಲ್ಲಿ ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕಮ್ ನಟ ರವೀ (ಕೆಎಸ್‌ಎಲ್ ಸ್ವಾಮಿ) ಅವರ ಕುರಿತ ರವೀ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ, ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಎಚ್. ಬಿ. ದಿನೇಶ್ ಅವರು ತಿಳಿಸಿದ್ದಾರೆ.

Karnataka Chalanachitra Academy to pay tribute to Late KSL Swamy

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಭಾಗವಹಿಸಲಿದ್ದಾರೆ. [ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ವಿಧಿವಶ]

ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದರಾದ ನಟ-ನಿರ್ಮಾಪಕ-ನಿರ್ದೇಶಕ ದ್ವಾರಕೀಶ್, ನಟ ಎಸ್. ಶಿವರಾಂ, ಕೆಎಸ್‌ಎಲ್ ಸ್ವಾಮಿ ಪತ್ನಿ ಬಿ.ವಿ. ರಾಧಾ, ಎಚ್.ಜಿ. ಸೋಮಶೇಖರ್ ರಾವ್, ವಿಜಯಲಕ್ಷ್ಮೀ ಸಿಂಗ್, ಎಂ.ಎಸ್. ರಮೇಶ್, ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್.ಕೆ. ಭಗವಾನ್, ಗಿರೀಶ್ ಕಾಸರವಳ್ಳಿ, ಸಿ.ವಿ. ಶಿವಶಂಕರ್, ರವಿ ಅವರ ಒಡನಾಡಿ ಕೃಪಾ, ಹಿರಿಯ ಪತ್ರಕರ್ತ ಗಂಗಾಧರ್ ಮೊದಲಿಯಾರ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. [ಕೆ.ಎಸ್.ಎಲ್.ಸ್ವಾಮಿ ನಿಧನಕ್ಕೆ ಚಿತ್ರರಂಗದ ಗಣ್ಯರ ಕಂಬನಿ]

English summary
Karnataka Chalanachitra Academy to pay tribute to Late KSL Swamy On November 5th at 11.30 Am in Kumar Park, Gandhi Bhavan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada