»   » ಎಸ್ ನಾರಾಯಣ್-ಅನೂಪ್ ರೇವಣ್ಣ ಚಿತ್ರದ ಮುಹೂರ್ತ ಯಾವಾಗ?

ಎಸ್ ನಾರಾಯಣ್-ಅನೂಪ್ ರೇವಣ್ಣ ಚಿತ್ರದ ಮುಹೂರ್ತ ಯಾವಾಗ?

Posted By:
Subscribe to Filmibeat Kannada

ನಿರ್ದೇಶಕ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು 'ಡಿಕ್ಟೇಟರ್' ಕೈ ಬಿಟ್ಟು 'ಲಕ್ಷ್ಮಣ' ಖ್ಯಾತಿಯ ನಟ ಅನೂಪ್ ರೇವಣ್ಣ ಅವರಿಗೆ ಹೊಸ ಸಿನಿಮಾ ಮಾಡುತ್ತಿರುವ ಬಗ್ಗೆ ನಾವೇ ನಿಮಗೆ ಹೇಳಿದ್ವಿ ತಾನೆ.

ಇದೀಗ ಚಿತ್ರಕ್ಕೆ 'ಪಂಟ' ಎಂದು ಟೈಟಲ್ ಕೂಡ ಫಿಕ್ಸ್ ಮಾಡಲಾಗಿದ್ದು, ಈ ಚಿತ್ರಕ್ಕೆ ಅಸೋಸಿಯೇಟ್ ಆಗಿ ಎಸ್ ನಾರಾಯಣ್ ಅವರ ಮಗ ನಟ ಪಂಕಜ್ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.[ವೆಂಕಟ್ ಜೊತೆ 'ಡಿಕ್ಟೇಟರ್' ಬಿಟ್ಟ ಎಸ್ ನಾರಾಯಣ್ ಮಾಡಿದ್ದೇನು?]

Karnataka CM Siddaramaiah to sound clap for Kannada Movie 'Panta'

ಅಂದಹಾಗೆ ಎಸ್ ನಾರಾಯಣ್ ಅವರ ಎರಡನೇ ಮಗ ಪವನ್ ಕಾರ್ತಿಕ್ ಅವರು ತಂದೆಯ ಚಿತ್ರಗಳಿಗೆ ಪ್ರೊಡಕ್ಷನ್ ಕಂಟ್ರೋಲರ್ ಆಗಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಇದೀಗ ಎಸ್ ನಾರಾಯಣ್ ಅವರ ದೊಡ್ಡ ಮಗ ನಟ ಪಂಕಜ್ ಅವರು ಕೂಡ ತಂದೆಯ ಸಹಾಯಕ್ಕೆ ನಿಂತಿದ್ದಾರೆ.[ವೆಂಕಟ್ ವಿರುದ್ಧ ಚಾಟಿ ಬೀಸಿದ ನಿರ್ದೇಶಕ ಎಸ್ ನಾರಾಯಣ್]

Karnataka CM Siddaramaiah to sound clap for Kannada Movie 'Panta'

ನಟ ಅನೂಪ್ ರೇವಣ್ಣ ಅವರ ಎರಡನೇ ಸಿನಿಮಾ 'ಪಂಟ' ಜೂನ್ 9 ರಂದು ಸೆಟ್ಟೇರಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕ್ಲ್ಯಾಪ್ ಮಾಡಲಿದ್ದಾರೆ.

ಕೆ.ಎಫ್.ಸಿ.ಸಿ ಅಧ್ಯಕ್ಷ ಸಾರಾ ಗೋವಿಂದು ಅವರು ದೀಪ ಬೆಳಗಿಸಿ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮವು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಜರುಗಲಿದೆ.

English summary
Karnataka Chief Minister Siddaramaiah is all set to sound the clap for Actor Anup Revanna's second film 'Panta'. The launch of 'Panta' is scheduled on the 09th of June, at the Kanteerava Studios. The movie is directed by S.Narayan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada