For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಶ್ರಮವನ್ನು ಕೊಂಡಾಡಿದ ಸಿಎಂ ಯಡಿಯೂರಪ್ಪ

  |

  ನಟ ದರ್ಶನ್‌ಗೆ ರೈತರ ಬಗ್ಗೆ ಅಪಾರ ಕಾಳಜಿ. ಇದನ್ನು ಹಲವರು ಬಾರಿ ಹೇಳಿದ್ದಾರೆ ಕೃತಿಯ ಮೂಲಕವೂ ತೋರಿಸಿದ್ದಾರೆ. ಸ್ವತಃ ಕೃಷಿ ಹಾಗೂ ಪಶುಸಂಗೋಪನೆ ಮಾಡುತ್ತಿರುವ ದರ್ಶನ್ ಇದೀಗ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

  ನಟ ದರ್ಶನ್ ಅವರು ಕೃಷಿ ಇಲಾಖೆ ರಾಯಭಾರಿಯಾಗಿ ಆಯ್ಕೆ ಆಗಿದ್ದು, ಇಂದು ಅಧಿಕೃತವಾಗಿ ಸಿಎಂ ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರುಗಳ ಸಮ್ಮುಖದಲ್ಲಿ ಕೃಷಿ ಇಲಾಖೆ ರಾಯಭಾರಿಯಾಗಿ ಗೌರವ ಸ್ವೀಕರಿಸಿದರು.

  ಇಂದು ವಿಕಾಸಸೌಧದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ದರ್ಶನ್ ಅವರನ್ನು ಅಧಿಕೃತವಾಗಿ ಕೃಷಿ ಇಲಾಖೆಯ ರಾಯಭಾರಿ ಎಂದು ಘೋಷಿಸಲಾಯಿತು. ಇದೇ ಸಮಾರಂಭದಲ್ಲಿ ಹಾಜರಿದ್ದ ಸಿಎಂ ಯಡಿಯೂರಪ್ಪ ಅವರು ದರ್ಶನ್ ಅವರ ಶ್ರಮವನ್ನು ಬಹುವಾಗಿ ಕೊಂಡಾಡಿರು.

  ಕೃಷಿಕರ ಪರವಾಗಿ ದರ್ಶನ್‌ಗೆ ಅಭಿನಂದನೆ

  ಕೃಷಿಕರ ಪರವಾಗಿ ದರ್ಶನ್‌ಗೆ ಅಭಿನಂದನೆ

  'ಮಾನ್ಯ ದರ್ಶನ್ ಅವರು ಸಿನಿಮಾ ಕ್ಷೇತ್ರದಲ್ಲಿ ಬಹು ಎತ್ತರಕ್ಕೆ ಹೋಗಿದ್ದರೂ ಸಹ ಕೃಷಿ ಮಾಡುತ್ತಾ, ಎಸ್ಟೇಟ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ. ದರ್ಶನ್ ಅವರು ಯಾವುದೇ ಸಂಭಾವನೆ ಪಡೆಯದೇ ಕೃಷಿ ಇಲಾಖೆ ರಾಯಭಾರಿ ಆಗಲು ಒಪ್ಪಿಕೊಂಡಿರುವುದು ಅತ್ಯಂತ ಸಂತೋಶದ ಸಂಗತಿ, ಎಲ್ಲ ಕೃಷಿಕರ ಪರವಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದಿದ್ದಾರೆ ಯಡಿಯೂರಪ್ಪ.

  ದರ್ಶನ್ ರಾಯಭಾರಿ ಆಗಿರುವುದು ಕೃಷಿ ಕ್ಷೇತ್ರಕ್ಕೆ ಶಕ್ತಿ ತುಂಬಿದೆ: ಸಿಎಂ

  ದರ್ಶನ್ ರಾಯಭಾರಿ ಆಗಿರುವುದು ಕೃಷಿ ಕ್ಷೇತ್ರಕ್ಕೆ ಶಕ್ತಿ ತುಂಬಿದೆ: ಸಿಎಂ

  'ಅನ್ನದಾತನನ್ನು ಸ್ಮರಣೆ ಮಾಡುವಂತ ಕೃಷಿ ರಾಯಭಾರಿಯಾಗಿ ಇರಲು ಒಪ್ಪಿಕೊಂಡಿರುವುದು ಕೃಷಿ ಕ್ಷೇತ್ರಕ್ಕೆ, ಕೃಷಿ ಇಲಾಖೆಗೆ ಶಕ್ತಿಕೊಟ್ಟಂತಾಗಿದೆ ಎಂದು ಭಾವಿಸದ್ದೇನೆ. ಬಹಳ ಮುಖ್ಯವಾಗಿ ಯಾವುದೇ ಸಂಭಾವನೆ ಇಲ್ಲದೆ ಕೃಷಿ ರಾಯಭಾರಿ ಆಗಿ ಒಪ್ಪಿಕೊಂಡಿರುವುದು ಬಹಳ ಸಂತೋಶದ ವಿಷಯ' ಎಂದರು ಯಡಿಯೂರಪ್ಪ್.

  'ವಿಧಾನಸೌಧ ಮುಂಭಾಗ ಆಗಿದ್ದರೆ 50 ಸಾವಿರ ಜನ ಸೇರಿರುತ್ತಿದ್ದರು'

  'ವಿಧಾನಸೌಧ ಮುಂಭಾಗ ಆಗಿದ್ದರೆ 50 ಸಾವಿರ ಜನ ಸೇರಿರುತ್ತಿದ್ದರು'

  'ದರ್ಶನ್ ಅವರ ಜನಪ್ರಿಯತೆಗೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಇಲ್ಲಿ ಅಲ್ಲದೆ (ವಿಕಾಸಸೌಧ) ವಿಧಾನಸೌಧ ಮುಂಭಾಗದಲ್ಲಿ ಏನಾದರೂ ಈಕಾರ್ಯಕ್ರಮ ಮಾಡಿದ್ದರೆ ಸುಮಾರು 50 ಸಾವಿರ ಜನ ಸೇರುತ್ತಿದ್ದರೋ ಏನೋ ಎಂದು ಹೇಳಿದರು ಸಿಎಂ ಯಡಿಯೂರಪ್ಪ. ವಿಕಾಸಸೌಧದ ಸಭಾಂಗಣದಲ್ಲಿ ಬಹಳಷ್ಟು ಸಂಖ್ಯೆಯ ಜನ ಸೇರಿದ್ದರು.

  ಡಿ ಬಾಸ್ ಗೆ ಧನ್ಯವಾದ ಖುಷಿಯಿಂದ ಧನ್ಯವಾದ ಹೇಳಿದ ಯಡಿಯೂರಪ್ಪ | CM Yediyurappa | Darshan | Filmibeat Kannada
  ಕೃಷಿ ಕೈಪಿಡಿ ಬಿಡುಗಡೆ ಮಾಡಿದ ದರ್ಶನ್

  ಕೃಷಿ ಕೈಪಿಡಿ ಬಿಡುಗಡೆ ಮಾಡಿದ ದರ್ಶನ್

  ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ನಟ ದರ್ಶನ್, ಸಿಎಂ ಯಡಿಯೂರಪ್ಪ ಅವರುರಗಳು ಸೇರಿಕೊಂಡು ಕೃಷಿ ಕೈಪಿಡಿ 2021 ಅನ್ನು ಬಿಡುಗಡೆ ಮಾಡಿದರು. ಸಮಾಂಭದಲ್ಲಿ ಬಿ.ಸಿ.ಪಾಟೀಲ್ ಅವರು ಸಹ ದರ್ಶನ್ ಅವರು ಕುರಿತು ಮಾತನಾಡಿ ರಾಯಭಾರಿ ಆಗಲು ಒಪ್ಪಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

  English summary
  CM Yediyurappa praised actor Darshan for agreeing to be ambassador for Karnataka agriculture department.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X