For Quick Alerts
  ALLOW NOTIFICATIONS  
  For Daily Alerts

  ವಿಕಾಸ ಸೌಧದಲ್ಲಿ ಬಿಡುಗಡೆ ಆಗಲಿದೆ ಯೋಗರಾಜ್ ಭಟ್ಟರ ಹಾಡು

  By Naveen
  |

  ನಿರ್ದೇಶಕ ಯೋಗರಾಜ್ ಭಟ್ ಚುನಾವಣೆಯ ಮತದಾನದ ಅರಿವು ಮೂಡಿಸಲು ಒಂದು ಹಾಡನ್ನು ರಚನೆ ಮಾಡಿದ್ದರು. ಈ ಹಾಡು ಇಂದು ವಿಕಾಸ ಸೌಧದಲ್ಲಿ ಬಿಡುಗಡೆಯಾಗಲಿದೆ. ಇಂದು ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮುಂತಾದವರು ಭಾಗವಹಿಸಲಿದ್ದಾರೆ

  ಚುನಾವಣಾ ಗೀತೆ ಕರ್ನಾಟಕ ಚುನಾವಣಾ ಆಯೋಗದ ಹೊಸ ಪರಿಕಲ್ಪನೆಯಾಗಿದೆ. ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಈ ರೀತಿಯ ಚುನಾವಣಾ ಗೀತೆ ರಚನೆಯಾಗುತ್ತಿರುವುದು ಇದೇ ಮೊದಲು. ಈ ಗೀತೆಯ ಮುಖ್ಯ ಉದ್ದೇಶ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವುದಾಗಿದೆ. ಇದೇ ಕಾರಣಕ್ಕೆ ಯೋಗರಾಜ್ ಭಟ್ ಮತ್ತು 'ಪಂಚತಂತ್ರ' ಚಿತ್ರತಂಡವನ್ನು ಚುನಾವಣಾ ಗೀತೆ ರಚಿಸಲು ಚುನಾವಣಾ ಆಯೋಗ ಆಯ್ಕೆ ಮಾಡಿತ್ತು. ಇನ್ನು ಯೋಗರಾಜ್ ಭಟ್ ರಚಿಸಿರುವ ಈ ಹಾಡಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ನೀಡಿದ್ದಾರೆ.

  ವಿಕಾಸ ಸೌಧದಲ್ಲಿ ಇಂದು ಯೋಗರಾಜ ಭಟ್ಟರ ಚುನಾವಣಾ ಗೀತೆ ಬಿಡುಗಡೆ

  ಮೇ 12 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಾರಿ ಮತದಾನವನ್ನು ಹೆಚ್ಚು ಮಾಡಲು ಚುನಾವಣೆ ಆಯೋಗ ಈ ಪ್ಲಾನ್ ಮಾಡಿದೆ. ಸಂವಿಧಾನ ನೀಡಿದ ಅತ್ಯಮೂಲ್ಯ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ರಾಜಕೀಯ ಪ್ರಜ್ಞೆ ಮೆರೆಯಬೇಕೆಂಬ ಆಶಯ ಈ ಗೀತೆಯಲ್ಲಿದೆ.

  English summary
  Karnataka's first election anthem is set to be launched Today (April 13th). Kannada director Yogaraj Bhat has directed and has penned lyrics while top music director Hari Krishna has scored the music. CEO Sanjiv Kumar and the entire Yogaraj Bhat team will be present. Venue:Vikasa Soudha, room No. 419 Date: April 13, 2018 and Time: 6.30 pm

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X