»   » ಎಲ್ಲಾ ಭಾಷೆಗಳ ಟಿಕೆಟ್ ದರ ಗರಿಷ್ಠ 200 ರು : ಸರ್ಕಾರದ ಆದೇಶ ಜಾರಿ

ಎಲ್ಲಾ ಭಾಷೆಗಳ ಟಿಕೆಟ್ ದರ ಗರಿಷ್ಠ 200 ರು : ಸರ್ಕಾರದ ಆದೇಶ ಜಾರಿ

Posted By:
Subscribe to Filmibeat Kannada

ಸಿನಿಪ್ರಿಯರಿಗೆ ಮಂಗಳವಾರ ಸಂಜೆ ಸಿದ್ದರಾಮಯ್ಯ ಸರ್ಕಾರವು ಸಕತ್ ಸುದ್ದಿ ನೀಡಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು 200 ರು ಗರಿಷ್ಠ ಮಿತಿ ನಿಗದಿ ಮಾಡಲಾಗಿದೆ.

2017-18ನೇ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಸಿದ್ದರಾಮಯ್ಯ ಅವರು ಏಕರೂಪ ಟಿಕೆಟ್ ನಿಗದಿ ಜಾರಿಗೊಳಿಸಲಾಗಿದೆ. ಆದರೆ, ಕೆಲ ನಿಬಂಧನೆಗಳನ್ನು ಹಾಕಲಾಗಿದೆ.

Karnataka government issue Rs 200 cap on Multiplex ticket rates

ಆದೇಶದಲ್ಲಿ ಏನಿದೆ?: 2017-18ರ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಗಳೂ ಸೇರಿದತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ(ಟಿಕೆಟ್) ನೀತಿ ಜಾರಿಗೆ ತರಲಾಗುತ್ತಿದ್ದು, 200 ರು ಗರಿಷ್ಠ ಪ್ರವೇಶ ದರ ನಿಗದಿ ಪಡಿಸಲಾಗಿದೆ.

ವಾರ್ತಾ ಮತ್ತುಸಾರ್ವಜನಿಕ ಸಂಪರ್ಕ ಇಲಾಖೆ ನೀಡಿದ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಪರಿಗಣಿಸಿ ಎಲ್ಲಾ ಚಿತ್ರಮಂದಿರಗಳಲ್ಲಿ ತೆರಿಗೆ ಹೊರತುಪಡಿಸಿ 200 ರುಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.

Karnataka government issues Rs 200 cap on Multiplex ticket rates

ಈ ಆದೇಶ ಷರತ್ತುಗಳನ್ನು ಹೊಂದಿದ್ದು,
* ಈ ಗರಿಷ್ಠ ಮಿತಿಯು ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ಭಾಷೆಗಳ ಚಲನಚಿತ್ರಗಳಿಗೆ ಅನ್ವಯಿಸುತ್ತದೆ.
* 200 ರೂ ಗಳ ಗರಿಷ್ಠ ಮಿತಿಯು ಮಲ್ಟಿಪ್ಲೆಕ್ಸ್ ಗಳಲ್ಲಿನ ಗೋಲ್ಡ್ ಕ್ಲಾಸ್ ಸ್ಕ್ರೀನ್ ಹಾಗೂ ಗೋಲ್ಡ್ ಕ್ಲಾಸ್ ಸೀಟ್ ಗಳನ್ನು (ಒಟ್ಟು ಸೀಟುಗಳ ಶೇ 10ರಷ್ಟು ಮೀರದಂತೆ) ಹೊರತುಪಡಿಸಲಾಗಿದೆ.
* ಐಮ್ಯಾಕ್ಸ್ ಹಾಗೂ 4DX ಚಿತ್ರಮಂದಿರಗಳನ್ನೂ ಸಹ 200 ರೂ ಗಳ ಗರಿಷ್ಠ ಮಿತಿಯಿಂದ ವಿನಾಯಿತಿ ಪಡೆದುಕೊಂಡಿವೆ.

ಪ್ರೈಮ್ ಟೈಮ್ : ರಾಜ್ಯದಲ್ಲರುವ ಮಲ್ಟಿಪ್ಲೆಕ್ಸ್ ಗಳಲ್ಲನ ಒಂದು ಪರದೆಯಲ್ಲ ಮಧ್ನಾಹ್ನ 1.30 ರಂದ 7.30ರವರಗನ ಪ್ರೈಮ್ ಟೈಮ್(ಪ್ರಮುಖ ಅವಧಿ)ನಲ್ಲ ಕನ್ನಡ ಹಾಗೂ ಪ್ರಾದೇಶಿಕ ಚಲನಚತ್ರ ಪ್ರದರ್ಶನವನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ಎಷ್ಟಾಗಲಿದೆ ಟಿಕೆಟ್ ದರ: 200 ರು ಟಿಕೆಟ್ ಗರಿಷ್ಠ ಟಿಕೆಟ್ ದರ + ಮನರಂಜನಾ ತೆರಿಗೆ ಶೇ 30 + ಸೇವಾ ತೆರಿಗೆ ಶೇ 15 + ಹೆಚ್ಚುವರಿ ಸೆಸ್ ಗಳು ಸೇರಿದರೆ ಸಿನಿಮಾ ಟಿಕೆಟ್ ಬೆಲೆ 260 ಪ್ಲಸ್ ಆಗಲಿದೆ.

ಈ ಎಲ್ಲಾ ಆದೇಶಗಳು ಬಜೆಟ್ ನಲ್ಲಿ ಘೋಷಣೆಯಾಗಿರುವುದರಿಂದ ಏಪ್ರಿಲ್ 01ರಿಂದ ಪೂರ್ವನ್ವಯವಾಗುವಂತೆ ಜಾರಿಗೆ ಬರಬೇಕಿದೆ. ಹೀಗಾಗಿ, ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಓದಿಕೊಳ್ಳುವುದು.

English summary
The State government issued an order reducing ticket rates in multiplexes to Rs 200 on Tuesday(April 02).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada