For Quick Alerts
  ALLOW NOTIFICATIONS  
  For Daily Alerts

  ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಅಂಬರೀಷ್ ಸ್ಮಾರಕ ಪ್ರತಿಷ್ಠಾನ ಸಮಿತಿ ರಚನೆ

  |

  ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಅಂಬರೀಷ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕನ್ನಡದ ಮೇರು ನಟರಾದ ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪ್ರತಿಷ್ಠಾನದಂತೆಯೇ, ಅಂಬರೀಷ್ ಅವರ ಸ್ಮಾರಕ ನಿರ್ಮಾಣ ಪ್ರತಿಷ್ಠಾನ ಸಮಿತಿ ರಚಿಸಲಾಗಿದೆ.

  ಅಂಬರೀಶ್ ಸ್ಮಾರಕ ವಿಚಾರವಾಗಿ ಆಡಳಿತಾತ್ಮಕ ನಿರ್ಣಯ, ರೂಪು ರೇಷೆ, ಅನುಷ್ಠಾನ ಹಾಗೂ ಕಾರ್ಯಕ್ರಮಗಳ ನಿರ್ವಹಣೆಗಳ ಪರಿಶೀಲನೆಗಾಗಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಎಂಟು-ಸದಸ್ಯರ ಅಂಬರೀಷ್ ಸ್ಮಾರಕ ಪ್ರತಿಷ್ಠಾನ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

  ಅಂಬಿ ಇಲ್ಲದ ಒಂದು ವರ್ಷ: ಏನೇನೆಲ್ಲಾ ನಡೆದು ಹೋಯ್ತು.!ಅಂಬಿ ಇಲ್ಲದ ಒಂದು ವರ್ಷ: ಏನೇನೆಲ್ಲಾ ನಡೆದು ಹೋಯ್ತು.!

  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಅಥವಾ ನಿರ್ದೇಶಕರು, ಅಂಬರೀಷ್ ಅವರ ಧರ್ಮಪತ್ನಿ ಶ್ರೀಮತಿ ಸುಮಲತ, ಅಂಬರೀಷ್ ಅವರ ಪುತ್ರ ಶ್ರೀ ಅಭಿಷೇಕ್, ಕರ್ನಾಟಕ ಚಲನಚಿತ್ರ ವಾಣಜ್ಯ ಮಂಡಳಿಯ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿ ಸದಸ್ಯರಾಗಿರುವ ಈ ಸಮಿತಿಗೆ ಶ್ರೀ ಕಂಠೀರವ ಸ್ಟುಡಿಯೋದ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

  English summary
  Karnataka Government orders to form Ambareesh Smaraka Nirmana Prathistana Samiti.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X