»   » ಹೊರಗೆ ಮಳೆ; ಜ್ಯಾನಜ್ಯೋತಿಯಲ್ಲಿ ಪ್ರಶಸ್ತಿಗಳ ಸುರಿಮಳೆ

ಹೊರಗೆ ಮಳೆ; ಜ್ಯಾನಜ್ಯೋತಿಯಲ್ಲಿ ಪ್ರಶಸ್ತಿಗಳ ಸುರಿಮಳೆ

Posted By:
Subscribe to Filmibeat Kannada
Vishnuvardhan Anu Prabhakar
2009-2010ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುತ್ತಿದೆ. ಕನ್ನಡದ ಚಲನಚಿತ್ರದ ಎಲ್ಲ ದಿಗ್ಗಜರು ಅಲ್ಲಿ ಸೇರಿದ್ದಾರೆ. ಭಾರತಿ ವಿಷ್ಣುವರ್ಧನ್, ಆರ್ ಅಶೋಕ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆ ಜ್ಯಾನಜ್ಯೋತಿ ಸಭಾಂಗಣದಲ್ಲಿ ಪ್ರಶಸ್ತಿಗಳ ಸುರಿಮಳೆ ಆಗುತ್ತಿದೆ.

ಈ ವರ್ಷದ ಪ್ರಶಸ್ತಿ ಪಟ್ಟಿಯ ಬಗ್ಗೆ ಪ್ರತಿವರ್ಷಕ್ಕಿಂತ ಹೆಚ್ಚೇ ಎನ್ನಬಹುದಾದಷ್ಟು ಅಪಸ್ವರ ಕೇಳಿಬಂದಿತ್ತು. ಕೊಡಬೇಕಾದವರಿಗೆ ಕೊಡದೇ ಕೊಡಬಾರದವರಿಗೆ ಪ್ರಶಸ್ತಿ ಹಂಚಲಾಗಿದೆ ಎಂಬ ಕೂಗು ಧ್ವನಿಸಿತ್ತು. ಅಪಸ್ವರದ ನಡುವೆಯೂ ನಿರಾತಂಕವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿರುವುದು ಆಶ್ಚರ್ಯವಾದರೂ ಸತ್ಯ.

ಪ್ರಶಸ್ತಿ ಸಮಾರಂಭದ ವೇದಿಕೆಯೀಗ ಸಿನಿಮಾ ತಾರೆಗಳ ಕಾಲಿನ ಸ್ಟರ್ಶಕ್ಕೆ ಸಾಕ್ಷಿಯಾಗುತ್ತಿದೆ. ಜ್ಯಾನಜ್ಯೋತಿ ಸಭಾಂಗಣ ಸಿನಿಮಾ ತಾರೆಯರು ಹಾಗೂ ಗಣ್ಯರಿಂದ ತುಂಬಿಹೋಗಿದೆ. ಎಲ್ಲೆಡೆ ಸಂಭ್ರಮದ ವಾತಾವರಣ ಮನೆಮಾಡಿದೆ. ಅಲ್ಲಿನ ಪ್ರಶಸ್ತಿ ಸುರಿಮಳೆಗೆ ಹೊರಗಡೆ ಸುರಿಯುತ್ತಿರುವ ಧಾರಾಕಾರ ಮಳೆ ಸಾಥ್ ನೀಡಿದೆ. (ಒನ್ ಇಂಡಿಯಾ ಕನ್ನಡ)

English summary
Karnataka Sate Film Award 2009-2010 function is held in Bangalore Jyanajyothi Sabhangana today on May 15, 2012. 
 
Please Wait while comments are loading...