For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬಂದ ಹೊಸ ಕೋಮಲಾಂಗಿ, ಯಾರಿದು?

  By Rajendra
  |

  ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಬೆಡಗಿಯರ ಆಗಮನವಾಗುತ್ತಲೇ ಇದೆ. ಹಳಬರೊಂದಿಗೆ ಹೊಸಬರ ಸ್ಪರ್ಧೆ ನಿತ್ಯ ನಿರಂತರ. ಕೆಲವರು ಇಲ್ಲೇ ತಳವೂರಿದರೆ, ಇನ್ನೂ ಕೆಲವರು ಒಂದು ಎರಡು ಚಿತ್ರಗಳಿಗೆಲ್ಲಾ ನಾಪತ್ತೆಯಾಗಿಬಿಡುತ್ತಾರೆ.

  ಈಗ ಕನ್ನಡಕ್ಕೆ ಮತ್ತೊಬ್ಬ ಮಲ್ಲು ಬೆಡಗಿಯ ಆಗಮನವಾಗಿದೆ. ಹೆಸರು ಮೀರಾ ನಂದನ್. ಕಾಮಿಡಿ ನಟ ಕೋಮಲ್ ಜೊತೆಗಿನ 'ಕರೋಡ್ ಪತಿ' ಚಿತ್ರದಲ್ಲಿ ಈ ಕೋಮಲಾಂಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ನವದೆಹಲಿ ಮೂಲದ ರೂಪದರ್ಶಿ ಹಾಗೂ ನಟಿ ಜಾಸ್ಮಿನ್ ಸಹ ಅಭಿನಯಿಸುತ್ತಿದ್ದಾರೆ.

  ಈಗ 'ಕರೋಡ್ ಪತಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಿ ರಮೇಶ್ ಆಕ್ಷನ್ ಕಟ್ ಹೇಳಿರುವ ಚಿತ್ರವಿದು. ಈ ಚಿತ್ರ ಅಕ್ಟೋಬರ್ 2012ರಲ್ಲೇ ತೆರೆಕಾಣಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಈಗ ಬಿಡುಗಡೆ ಭಾಗ್ಯ ಕಾಣುತ್ತಿದೆ.

  ಎಸ್ ಎನ್ ರಮೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗದಲ್ಲಿ ಮಾಳವಿಕಾ, ಗುರುಪ್ರಸಾದ್, ಬಿರಾದಾರ್, ಡಿಂಗ್ರಿ ನಾಗರಾಜ್, ಜಯಶ್ರೀ ಕೃಷ್ಣ, ಯತಿರಾಜ್ ಮುಂತಾದವರು ಇದ್ದಾರೆ.

  ಒಂದು ಹೊತ್ತಿನ ಊಟಕ್ಕೂ ಪರದಾಡುವವನೊಬ್ಬ 'ಕರೋಡ್ ಪತಿ' ಹೇಗಾಗುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಈ ಚಿತ್ರದಲ್ಲಿ ಸಾಕಷ್ಟು ಎಕ್ಸ್ ಪೋಸ್ ಇದ್ದ ಕಾರಣ ಪ್ರಿಯಾ ಎಂಬ ಹೊಸ ನಟಿ ಅಭಿನಯಿಸಲು ನಿರಾಕರಿಸಿದ್ದರು. ಆ ಜಾಗಕ್ಕೆ ದೆಹಲಿ ಮೂಲದ ಜಾಸ್ಮಿನ್ ಬಂದಿದ್ದರು. (ಏಜೆನ್ಸೀಸ್)

  English summary
  Malayalam actress Meera Nandan debuting in Kannada movies through comedy movie Karodpathi, which is ready for release. The movie has comedy star Komal in the lead role and C Ramesh is directing it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X