»   » ಕಾಶೀನಾಥ್ 50 ನಾಟೌಟ್: ಕನ್ನಡ ಸಿನಿ ಪ್ರೇಮಿಗಳಿಂದ ಸಲ್ಯೂಟ್

ಕಾಶೀನಾಥ್ 50 ನಾಟೌಟ್: ಕನ್ನಡ ಸಿನಿ ಪ್ರೇಮಿಗಳಿಂದ ಸಲ್ಯೂಟ್

Posted By: Naveen
Subscribe to Filmibeat Kannada

ಕಾಶೀನಾಥ್ ಹೆಸರು ಕೇಳ್ತಿದ್ದ ಹಾಗೆ, ಅವ್ರ ವಿಭಿನ್ನ ಮ್ಯಾನರಿಸಂ ಕಣ್ಮುಂದೆ ಬಂದು ಬಿಡುತ್ತೆ. ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಡಿಫರೆಂಟ್ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ ಕಾಶೀನಾಥ್. ಇತ್ತೀಚಿಗೆ ದ್ವಾರಕೀಶ್ ಬ್ಯಾನರ್ ನ 50ನೇ ಸಿನಿಮಾ 'ಚೌಕ'ದಲ್ಲಿ ನಟಿಸಿದ್ದ ಕಾಶೀನಾಥ್ ಈಗ ತಾವೇ ಹಾಫ್ ಸೆಂಚುರಿ ಬಾರಿಸೋಕೆ ಸಜ್ಜಾಗಿದ್ದಾರೆ.

ಸಾಮಾನ್ಯವಾಗಿ ಎಲ್ಲರಿಗೂ ತಮ್ಮ 25ನೇ ಸಿನಿಮಾ, 50ನೇ ಸಿನಿಮಾ, 100ನೇ ಸಿನಿಮಾ ಅಂದ್ರೆ ತುಂಬಾ ಸ್ಪೆಷಲ್ ಆಗಿರುತ್ತೆ. ಅಂತಹ ಸಿನಿಮಾಗಳ ಬಗ್ಗೆ ಪ್ರೇಕ್ಷಕರು ಸಹ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದೇ ರೀತಿ ಕಾಶೀನಾಥ್ ಅವ್ರ 50ನೇ ಸಿನಿಮಾ ಸಹ ಸಖತ್ ಸ್ಪೆಷಲ್ ಆಗಿದೆ. ಅದೇನು ಅಂತ ತಿಳಿದುಕೊಳ್ಳುವ ಕುತೂಹಲ ಇದ್ರೆ, ಮುಂದೆ ಓದಿ...

ಕಾಶೀನಾಥ್ 50ನೇ ಸಿನಿಮಾ ಯಾವುದು.?

ಕಾಶೀನಾಥ್ ತಮ್ಮ 50ನೇ ಸಿನಿಮಾದಲ್ಲಿ ವಿಶೇಷವಾದ ಪಾತ್ರವನ್ನ ನಿರ್ವಹಿಸುತಿದ್ದು, ಚಿತ್ರಕ್ಕೆ 'ಓಳ್ ಮುನಿಸ್ವಾಮಿ' ಅನ್ನೋ ಟೈಟಲ್ ಫಿಕ್ಸ್ ಆಗಿದೆ. ಪಕ್ಕಾ ಕಾಮಿಡಿ ಸಿನಿಮಾವಾಗಿರುವ ಈ ಚಿತ್ರ ಈಗಾಗಲೇ ಸೆಟ್ಟೇರಿದೆ.[ಉಪೇಂದ್ರ ಬರ್ತಡೆಗೆ 'ಶ್..!' ಉಡುಗೊರೆ]

ಪಾತ್ರ ಏನು.?

ಟೈಟಲ್ಲೇ ಹೇಳುವ ಹಾಗೆ ಇಲ್ಲಿ 'ಓಳ್ ಮುನಿಸ್ವಾಮಿ'ಯಾಗಿ ಕಾಣಿಸಿಕೊಳ್ತಿರೋದು ಕಾಶೀನಾಥ್. ಚಿತ್ರದಲ್ಲಿ 'ಮುನಿಸ್ವಾಮಿ'ಯಾಗಿ ಕಾಶೀನಾಥ್ ಬೇಜಾನ್ ಸುಳ್ಳು ಹೇಳುತ್ತಾರಂತೆ. ಅದಕ್ಕೆ ಸಿನಿಮಾಗೆ ಈ ರೀತಿ ಟೈಟಲ್ ಇಟ್ಟಿದ್ದಾರಂತೆ. ಹಿಂದೆ ಕಾಶೀನಾಥ್ ಶಿಷ್ಯ ಉಪೇಂದ್ರ 'ಬರಿ ಓಳು... ಬರಿ ಓಳು' ಅಂತ ಹಾಡಿ ಕುಣಿದಿದ್ರು. ಅದ್ರೀಗ ಕಾಶೀನಾಥ್ ಓಳು ಬಿಡುವ ಗಿರಾಕಿಯಾಗಿದ್ದಾರೆ.

'ಓಳ್ ಮುನಿಸ್ವಾಮಿ' ಚಿತ್ರತಂಡದ ಬಗ್ಗೆ

'ಓಳ್ ಮುನಿಸ್ವಾಮಿ' ಸಿನಿಮಾವನ್ನ ನಿರ್ದೇಶಕ ಆನಂದ್ ಪ್ರಿಯ ನಿರ್ದೇಶನ ಮಾಡ್ತಿದ್ದಾರೆ. 'ಜಲ್ಸಾ' ಸಿನಿಮಾದ ನಾಯಕ ನಿರಂಜನ್ ನಟನೆಯ ಎರಡನೇ ಸಿನಿಮಾ ಇದಾಗಿದ್ದು, ನಾಯಕಿಯಾಗಿ ಅಖಿಲಾ ಎನ್ನುವ ಹೊಸ ಹುಡುಗಿ ಕಾಣಿಸಿಕೊಳ್ತಿದ್ದಾರೆ.

ಕಥೆ ಏನು.?

ಸಮೂಹ ಬ್ಯಾನರ್ ನ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಇದೊಂದು ಸಮಾಜದ ವಿಡಂಬನಾತ್ಮಕ, ಭಾವನೆಗಳ ತೊಳಲಾಟದ ಜೊತೆಗೆ ದೇವರು, ನಂಬಿಕೆ, ಪ್ರೀತಿ ಬದುಕಿನ ಕಥೆಯನ್ನ ಹೊಂದಿದೆಯಂತ್ತೆ. ಸಮಾಜ ಈಗ ಬದುಕನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎನ್ನುವ ನಿರ್ದೇಶಕರು ಅದೇ ವಿಷಯವನ್ನ ಹೈಲೈಟ್ ಮಾಡಿ ಸಿನಿಮಾದಲ್ಲಿ ತೋರಿಸಿದ್ದಾರಂತೆ.

ಚಿತ್ರೀಕರಣ ಯಾವಾಗ.?

ಈಗಾಗಲೇ ಸಿನಿಮಾದ ಪೂಜೆ ನೆರವೇರಿದ್ದು, ಮೇ 3 ರಿಂದ 30 ದಿನ ಶೂಟಿಂಗ್ ನಡೆಯಲಿದೆಯಂತೆ. ಮೂಡಿಗೆರೆ, ಚಿಕ್ಕಮಗಳೂರು ಸೇರಿದಂತೆ ಅನೇಕ ಕಡೆ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡದ್ದು.

ಹಾಫ್ ಸೆಂಚುರಿ ಸಂಭ್ರಮ

ಕಾಶೀನಾಥ್ ಕೆರಿಯರ್ ನಲ್ಲಿ ಸಾಕಷ್ಟು ವಿಭಿನ್ನ ಸಿನಿಮಾವನ್ನ ಮಾಡಿದ್ದಾರೆ. ಅದ್ರಲ್ಲೂ 'ಅನುಭವ', 'ಅನಂತನ ಅವಾಂತರ', 'ಶ್', 'ಅವನೇ ನನ್ನ ಗಂಡ' ಚಿತ್ರಗಳು ಸಿಕ್ಕಾಪಟ್ಟೆ ಯಶಸ್ಸು ಗಳಿಸಿದೆ. ಇನ್ನೂ ಇತ್ತೀಚೆಗೆ 'ಚೌಕ' ಮತ್ತು 'ಜೂಮ್' ಸಿನಿಮಾಗಳ ಮೂಲಕ ಮತ್ತೆ ಫಾರ್ಮ್ ಗೆ ಬಂದಿರುವ ಕಾಶೀನಾಥ್ ಅವ್ರ ಹಾಫ್ ಸೆಂಚುರಿ ಸಿನಿಮಾದ ಮೇಲೆ ನಿರೀಕ್ಷೆ ದೊಡ್ಡದಿದೆ. 50ನೇ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಾಶೀನಾಥ್ ರವರಿಗೆ ನಮ್ಮ ಕಡೆಯಿಂದ ಒಂದು ಸೆಲ್ಯೂಟ್ [ಫುಲ್ 'ZOOಮ್' ನಲ್ಲಿ ಕಾಶೀನಾಥ್ ಮತ್ತೆ ಎಂಟ್ರಿ]

English summary
Kannada Actor Kashinath starrer 50th movie 'Ol Muniswamy' launched. Shooting starts from May 3rd, 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada