»   » ಕಾಶಿನಾಥ್ ವಯಸ್ಸು ಎಷ್ಟು.? ಯಾರಿಗೂ ಗೊತ್ತಾಗಲೇ ಇಲ್ಲ.!

ಕಾಶಿನಾಥ್ ವಯಸ್ಸು ಎಷ್ಟು.? ಯಾರಿಗೂ ಗೊತ್ತಾಗಲೇ ಇಲ್ಲ.!

Posted By:
Subscribe to Filmibeat Kannada

ಇಂದು ಬೆಳ್ಳಂಬೆಳಗ್ಗೆಯೇ ಕಾಶಿನಾಥ್ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಅಪಾರ ಶಿಷ್ಯಾವೃಂದಕ್ಕೆ ಆಶ್ರಯ ನೀಡಿದ್ದ ಕನ್ನಡ ಚಿತ್ರರಂಗದ ಹೆಮ್ಮರ ಇವತ್ತು ಧರೆಗುರುಳಿತು. ಕಾಶಿನಾಥ್ ಅವರ ಸಾವಿನ ಸುದ್ದಿ ಕೆಲವರಿಗೆ ಅರಗಿಸಿಕೊಳ್ಳಲು ಕಷ್ಟವಾದರೆ, ಇನ್ನೂ ಕೆಲವರಿಗೆ ನಂಬಲಸಾಧ್ಯವಾಗಿದೆ.

ಕಾಶಿನಾಥ್ ಅವರದ್ದು ಸಾಯುವ ವಯಸ್ಸಲ್ಲ ಅಂತ ಕನ್ನಡ ಚಿತ್ರರಂಗದ ತಾರೆಯರೇ ದುಃಖತಪ್ತರಾಗಿದ್ದಾರೆ. ಕಾಶಿನಾಥ್ ಅಗಲಿಕೆಯಿಂದಾಗಿ ಇಡೀ ಕನ್ನಡ ಚಿತ್ರರಂಗ ಶೋಕ ಸಾಗರದಲ್ಲಿ ಮುಳುಗಿದೆ.

ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್

ಅಷ್ಟಕ್ಕೂ, ಇಂದು ಇಹಲೋಕ ತ್ಯಜಿಸಿರುವ ಕಾಶಿನಾಥ್ ಅವರ ವಯಸ್ಸೆಷ್ಟು ಅಂತ ಕೇಳಿದ್ರೆ ಸ್ಯಾಂಡಲ್ ವುಡ್ ತಾರೆಯರ ಬಳಿ ಸ್ಪಷ್ಟ ಉತ್ತರವಿಲ್ಲ. ಯಾಕಂದ್ರೆ, ತಮ್ಮ ಹುಟ್ಟಿದ ದಿನಾಂಕ ಹಾಗೂ ವಯಸ್ಸನ್ನ ಕಾಶಿನಾಥ್ ಎಲ್ಲೂ, ಯಾರ ಬಳಿಯೂ ಹೇಳಿಕೊಂಡಿಲ್ಲ.!

Kashinath's age not known

ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಾಗಲೂ, ಕಾಶಿನಾಥ್ ಅವರ ಜನ್ಮದಿನಾಂಕ ಬಹಿರಂಗವಾಗಲಿಲ್ಲ. ನಿಜ ಹೇಳ್ಬೇಕಂದ್ರೆ, ಕಾಶಿನಾಥ್ ಅವರು ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿರಲಿಲ್ಲವಂತೆ. ಯಾಕೆ ಅಂತ ಕೇಳಿದರೆ, ''ಹುಟ್ಟುಹಬ್ಬ ಆಚರಿಸಿಕೊಂಡರೆ ಒಂದು ವರ್ಷ ಆಯಸ್ಸು ಕಮ್ಮಿಯಾಗುತ್ತೆ ಅಂತ ಖುಷಿ ಪಡ್ಬೇಕಾ.? ಅಥವಾ ವಯಸ್ಸು ಜಾಸ್ತಿ ಆಯ್ತು ಅಂತ ಖುಷಿ ಪಡ್ಬೇಕಾ.? ಮತ್ಯಾಕೆ ಬರ್ತಡೇ.?'' ಎಂದು ಉತ್ತರಿಸುವ ಕಾಶಿನಾಥ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ತಮ್ಮ ವಯಸ್ಸು ಹಾಗೂ ಹುಟ್ಟಿದ ದಿನಾಂಕವನ್ನ ಹೇಳಲಿಲ್ಲ.

ಕಾಶೀನಾಥ್ ಅವರು ತಮ್ಮ ವಯಸ್ಸು ಹೇಳೋದಿಲ್ಲ ಯಾಕೆ?

ವಿಕಿಪಿಡಿಯಾದಲ್ಲಿ ಕಾಶಿನಾಥ್ ಅವರ ಜನನ ಆಗಿದ್ದು 1951 ಅಂತ ಇದೆ. ಕೆಲ ವರದಿಗಳ ಪ್ರಕಾರ ಕಾಶಿನಾಥ್ ಅವರ ವಯಸ್ಸು 67. ಇನ್ನೂ ಕಾಶಿನಾಥ್ ಆಪ್ತರು ಹೇಳುವ ಪ್ರಕಾರ ಅವರಿಗೆ 65 ವರ್ಷ ವಯಸ್ಸಾಗಿತ್ತು. ಆದ್ರೆ, ಸ್ಪಷ್ಟ ಮಾಹಿತಿ ಯಾರ ಬಳಿಯೂ ಇಲ್ಲ.

ಅದೇನೇಯಿದ್ರೂ, 80 ರ ದಶಕದಲ್ಲಿ ಚಂದನವನದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಕಾಶಿನಾಥ್ ಇನ್ನು ನೆನಪು ಮಾತ್ರ.

English summary
Veteran Kannada Actor, Director Kashinath passed away in Bengaluru today (January 18th). Kashinath's age is not known to many as he never celebrated his Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada