For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರ್ ನೂತನ ಚಿತ್ರಕ್ಕೆ ಮುಂಬೈನಿಂದ ಬಂದ ಬೆಡಗಿ ಈಕೆಯೇ.!

  |

  ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಇತ್ತೀಚೆಗೆಷ್ಟೇ ತಮ್ಮ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದರು. ನಿಖಿಲ್ ಕುಮಾರ್ ಜನ್ಮದಿನದ ಸಂದರ್ಭದಂದು ನಾಲ್ಕು ಚಿತ್ರಗಳ ಘೋಷಣೆ ಆಗಿತ್ತು. ಆ ಪೈಕಿ ಒಂದು ಚಿತ್ರದ ಮುಹೂರ್ತ ನೆರವೇರಿದೆ.

  ಲಹರಿ ಆಡಿಯೋ ಸಂಸ್ಥೆ ನಿರ್ಮಾಣ ಮಾಡುತ್ತಿರುವ ವಿಜಯ್ ಕುಮಾರ್ ಕೊಂಡ ಆಕ್ಷನ್ ಕಟ್ ಹೇಳುತ್ತಿರುವ ಇನ್ನೂ ಹೆಸರಿಡದ ಸ್ಪೋರ್ಟ್ಸ್ ಸಿನಿಮಾಗೆ ಚಾಲನೆ ನೀಡಲಾಗಿದೆ.

  ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿರುವ ಈ ಚಿತ್ರಕ್ಕೆ ಇದೀಗ ನಾಯಕಿಯ ಆಯ್ಕೆ ಫೈನಲ್ ಆಗಿದೆ. ಹಾಗಾದ್ರೆ, ನಿಖಿಲ್ ಗೆ ಜೋಡಿಯಾಗಲಿರುವ ನಟಿ ಯಾರು.? ನೀವೇ ನೋಡಿ...

  ಮುಂಬೈ ಬೆಡಗಿ ಕಾಶ್ಮೀರ ಪಾರ್ದೇಶಿ

  ಮುಂಬೈ ಬೆಡಗಿ ಕಾಶ್ಮೀರ ಪಾರ್ದೇಶಿ

  ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗುತ್ತಿರುವ ನಿಖಿಲ್ ಕುಮಾರ್ ಅಭಿನಯದ ಚಿತ್ರಕ್ಕೆ ನಾಯಕಿ ಆಗಿ ಮುಂಬೈನಿಂದ ಬಂದಿರುವ ಬೆಡಗಿಯ ಹೆಸರು ಕಾಶ್ಮೀರ ಪಾರ್ದೇಶಿ.

  'ಕುರುಕ್ಷೇತ್ರ' ಬಳಿಕ ನಿಖಿಲ್ ಗೆ ಮತ್ತೊಂದು ಮೆಗಾ ಆಫರ್ ನೀಡಿದ ಮುನಿರತ್ನ'ಕುರುಕ್ಷೇತ್ರ' ಬಳಿಕ ನಿಖಿಲ್ ಗೆ ಮತ್ತೊಂದು ಮೆಗಾ ಆಫರ್ ನೀಡಿದ ಮುನಿರತ್ನ

  ಯಾರು ಈ ಕಾಶ್ಮೀರ ಪಾರ್ದೇಶಿ.?

  ಯಾರು ಈ ಕಾಶ್ಮೀರ ಪಾರ್ದೇಶಿ.?

  ಮುಂಬೈನಲ್ಲಿ ಹುಟ್ಟಿ ಬೆಳೆದ 23 ರ ಹರೆಯದ ನಟಿ ಕಾಶ್ಮೀರ ಪಾರ್ದೇಶಿ. ಈಗಾಗಲೇ 'ನರ್ತನಶಾಲಾ', 'ಮಿಶನ್ ಮಂಗಲ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಕಾಶ್ಮೀರ ಪಾರ್ದೇಶಿ ಇದೀಗ ನಿಖಿಲ್ ಕುಮಾರ್ ಜೊತೆಗಿನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

  ತೆಲುಗು ನಿರ್ದೇಶಕರ ಚಿತ್ರದಲ್ಲಿ ನಿಖಿಲ್ ಕುಮಾರ್ ಸ್ವಾಮಿತೆಲುಗು ನಿರ್ದೇಶಕರ ಚಿತ್ರದಲ್ಲಿ ನಿಖಿಲ್ ಕುಮಾರ್ ಸ್ವಾಮಿ

  ಸಿನಿಮಾದಲ್ಲಿ ಇಬ್ಬರು ನಾಯಕಿಯರು

  ಸಿನಿಮಾದಲ್ಲಿ ಇಬ್ಬರು ನಾಯಕಿಯರು

  ವಿಜಯ್ ಕುಮಾರ್ ಕೊಂಡ ನಿರ್ದೇಶನದ ಈ ಚಿತ್ರದಲ್ಲಿ ನಿಖಿಲ್ ಗೆ ಇಬ್ಬರು ನಾಯಕಿಯರು ಇದ್ದಾರೆ. ಮೊದಲನೇ ನಾಯಕಿಯಾಗಿ ಕಾಶ್ಮೀರ ಪಾರ್ದೇಶಿ ಕಾಣಿಸಿಕೊಂಡರೆ, ಎರಡನೇ ನಾಯಕಿಯಾಗಿ ಕಿರುತೆರೆ ನಟಿ ಸಂಪದ ಅಭಿನಯಿಸಲಿದ್ದಾರೆ. ಜೊತೆಗೆ ದತ್ತಣ್ಣ, ಶಿವರಾಜ್.ಕೆ.ಆರ್.ಪೇಟೆ, ರಾಜೇಶ್, ಬೇಬಿ ಪ್ರಾಣ್ಯ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.

  ಕಿರುತೆರೆಯ ಈ ನಟಿ ಇದೀಗ ನಿಖಿಲ್ ಕುಮಾರ್ ಗೆ ಹೀರೋಯಿನ್.!ಕಿರುತೆರೆಯ ಈ ನಟಿ ಇದೀಗ ನಿಖಿಲ್ ಕುಮಾರ್ ಗೆ ಹೀರೋಯಿನ್.!

  ಅರ್ಜುನ್ ಜನ್ಯ ಮ್ಯೂಸಿಕ್

  ಅರ್ಜುನ್ ಜನ್ಯ ಮ್ಯೂಸಿಕ್

  ಈ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಿಖಿಲ್ ಕುಮಾರ್ ಮಿಂಚಲಿದ್ದಾರೆ. ಲಹರಿ ಅಡಿಯೋ ಸಂಸ್ಥೆ ಬಂಡವಾಳ ಹಾಕುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ.

  English summary
  Kashmira Pardeshi is playing lead opposite Nikhil Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X