»   » ಕಠಾರಿವೀರ ವಾರಾಂತ್ಯದ ಗಳಿಕೆ; ನೋಡಿ ಆನಂದಿಸಿ

ಕಠಾರಿವೀರ ವಾರಾಂತ್ಯದ ಗಳಿಕೆ; ನೋಡಿ ಆನಂದಿಸಿ

Posted By:
Subscribe to Filmibeat Kannada

ಸದ್ಯಕ್ಕೆ ವಿವಾದಾತ್ಮಕ ಚಿತ್ರವೆಂಬ ಹಣೆಪಟ್ಟಿ ಹೊತ್ತಿರುವ ಕಠಾರಿವೀರ ಸುರಸುಂದರಾಂಗಿ ಪ್ರೇಕ್ಷಕರಿಂದ ಗಳಿಸಿರುವ ಮಿಶ್ರ ಪ್ರತಿಕ್ರಿಯೆ ನಡುವೆಯೂ ಉತ್ತಮ ಬಾಕ್ಸ್ ಆಫೀಸ್ ಗಳಿಕೆ ದಾಖಲಿಸಿದೆ. ಮೊದಲ ವಾರದಲ್ಲಿ ಸುಮಾರು 5.7 ಕೋಟಿ ರು. ಗಳಿಸಿ ಎಲ್ಲರ ಹುಬ್ಬೇರಿಸಿದೆ. ಕಳೆದ ವಾರ, ಮೇ 10ಕ್ಕೆ ಬಿಡುಗಡೆಯಾಗಿರುವ ಕಠಾರಿವೀರ '3ಡಿ' ಚಿತ್ರಕ್ಕೆ ಇಲ್ಲಿಯವರೆಗಿನ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿದೆ.

12 ಕೋಟಿ ರು ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿರುವವರು ಈ ಮೊದಲು ರಕ್ತಕಣ್ಣೀರು ನಿರ್ಮಿಸಿದ್ದ ನಿರ್ಮಾಪಕರ ಸಂಘದ ಅಧ್ಯಕ್ಷರೂ ಆಗಿರುವ ಮುನಿರತ್ನ. ಬರೋಬ್ಬರಿ 12 ಕೋಟಿ ರು ಖರ್ಚು ಮಾಡಿ ಸಿನಿಮಾ ಮಾಡಿದ ಅವರು ಸಹಜವಾಗಿಯೇ ಲಾಭದ ನಿರೀಕ್ಷೆಯಲ್ಲಿದ್ದಾರೆ. ಇದೇ ರೀತಿ ಗಳಿಕೆಯಿದ್ದರೆ ಎರಡನೇ ವಾರಾಂತ್ಯದ ಹೊತ್ತಿಗೆ ಹಾಕಿದ ಬಂಡವಾಳ ವಾಪಸ್ ಆಗಿ ಮುನಿರತ್ನ ಮುಖದಲ್ಲಿ ಮಂದಹಾಸ ಖಾತ್ರಿ.

ಬಿಡುಗಡೆಗೆ ಸಿದ್ಧವಾದಾಗಿನಿಂದಲೂ ಒಂದಲ್ಲ ಒಂದು ವಿವಾದಕ್ಕೆ ಅಂಟಿಕೊಂಡೇ ಇರುವ ಈ ಚಿತ್ರ ಬಿಡುಗಡೆಯ ನಂತರವಂತೂ ಇನ್ನೂ ವಿವಾದಕ್ಕೆ ತುತ್ತಾಗಿದೆ. ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಚಿತ್ರದಲ್ಲಿನ ಹಲವು ದೃಶ್ಯಗಳಿಗೆ ಕತ್ತರಿ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆಗೂ ಸಿಲುಕಿರುವ ಕಠಾರಿವೀರದ ಮುಂದಿನ ಪ್ರಯಾಣ ಹೇಗೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. (ಒನ್ ಇಂಡಿಯಾ ಕನ್ನಡ)

English summary
Upendra and Ramya starrer Katari Veera Surasundarangi has collected Rs 5.70 crore in the first weekend. It has done wonders at Kannada Box Office.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada