»   » 'ಕೆಲವು ದಿನಗಳ ನಂತರ' ಬಂದ 'ಕಾಮಿಡಿ ಕಿಲಾಡಿಗಳು' ಲೋಕೇಶ್, ಶುಭಾಪೂಂಜಾ

'ಕೆಲವು ದಿನಗಳ ನಂತರ' ಬಂದ 'ಕಾಮಿಡಿ ಕಿಲಾಡಿಗಳು' ಲೋಕೇಶ್, ಶುಭಾಪೂಂಜಾ

Posted By:
Subscribe to Filmibeat Kannada

'ಕಾಮಿಡಿ ಕಿಲಾಡಿಗಳು' ಲೋಕೇಶ್ ಈಗ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಬಾರಿ ಕಾಮಿಡಿ ಸಸ್ಪೆನ್ಸ್ ಚಿತ್ರ ಮಾಡುತ್ತಿರುವ ಲೋಕೇಶ್ ಗೆ ಶುಭಾಪೂಂಜಾ ಜೊತೆಯಾಗಿದ್ದಾರೆ. 'ಕೆಲವು ದಿನಗಳ ನಂತರ' ಎಂಬ ಹೊಸ ಚಿತ್ರದಲ್ಲಿ ಈ ಇಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ.

ಶುಭಾ ಪೂಂಜಾ ಈಗ ಒಂದು ಮಗುವಿನ ತಾಯಿ

'ಕೆಲವು ದಿನಗಳ ನಂತರ' ಇಂದಿನ ಯುವ ಜನತೆಯ ಸಮಸ್ಯೆಗಳ ಕುರಿತು ತಯಾರಾಗುತ್ತಿರುವ ಹಾಸ್ಯ ಪ್ರಧಾನ ಸಸ್ಪೆನ್ಸ್ ಚಿತ್ರ ಇದಾಗಿದೆಯಂತೆ. ಸಿನಿಮಾದ ತಾರಾಬಳಗದಲ್ಲಿ ಶುಭಾಪೂಂಜಾ, 'ಮಜಾ ಟಾಕೀಸ್' ಪವನ್, 'ಕಾಮಿಡಿ ಕಿಲಾಡಿಗಳು' ಲೋಕೇಶ್, ದ್ರವ್ಯಶೆಟ್ಟಿ, ಜಗದೀಶ್, ಸೋನು ಪಾಟೀಲ್ ಹಾಗೂ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ನಿರ್ದೇಶಕರಾದ ಶರಣಯ್ಯ ಅಭಿ‌ಯಿಸಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

Kelavu Dinagala Nanthara kannada movie teser released

ಮುತ್ತುರಾಜ್ ಹೆಚ್.ಪಿ ಅವರ ನಿರ್ಮಾಣದಲ್ಲಿ ಶ್ರೀನಿ ರವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. 'ಕೆಲವು ದಿನಗಳ ನಂತರ' ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದೆ. ಆಡಿಯೋ ರಿಲೀಸ್ ಸದ್ಯದಲ್ಲಿಯೇ ಆಗಲಿದೆ. ಮೇ ತಿಂಗಳ ಕೊನೆಯ ವಾರದಲ್ಲಿ ಈ ಸಿನಿಮಾ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡುವ ಸಾಧ್ಯತೆ ಇದೆ. ಚಿತ್ರದ ಪ್ರಮುಖ ವಿಶೇಷತೆ ಅಂದರೆ ಇಲ್ಲಿ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನ ಮೂಲಕ ತಯಾರಿಸಲಾಗಿದೆ. ಇನ್ನು ವಿಭಿನ್ನ ಟೈಟಲ್ ಮೂಲಕ ಬರುತ್ತಿರುವ ಈ ಚಿತ್ರದ ಟೀಸರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

English summary
Kannada actress Shubha Ponja's 'Kelavu Dinagala Nanthara' kannada movie teser released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X