»   » ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ಗೆ ಕೊನೆಗೂ ಸಂದ ಜಯ

ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ಗೆ ಕೊನೆಗೂ ಸಂದ ಜಯ

Posted By:
Subscribe to Filmibeat Kannada

ಕಡೆಗೂ ಕಾರ್ಮಿಕರ ಒಕ್ಕೂಟದಲ್ಲಿ ಎದ್ದಿದ್ದ ವಿವಾದಕ್ಕೆ ತೆರೆಬಿದ್ದಿದೆ. ಪ್ರತ್ಯೇಕ ಒಕ್ಕೂಟದ ಕೂಗಿಗೆ ವಾಣಿಜ್ಯ ಮಂಡಳಿ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ರಾಜೇಶ್ ಬ್ರಹ್ಮಾವರ್ ಮತ್ತವರ ಬಳಗದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ವರ್ಷಗಳಿಂದಲೂ ಚಾಲ್ತಿಯಲ್ಲಿದ್ದ ಕಾರ್ಮಿಕರ ಒಕ್ಕೂಟ ನಿರ್ಮಾಪಕರ ಸ್ನೇಹಿಯಾಗಿಲ್ಲ. ಕಾರ್ಮಿಕರ ಹಿತಾಸಕ್ತಿ ಪರ ಇಲ್ಲ ಅಂತ, ಕಳೆದ ವರ್ಷ ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ಪರ್ಯಾಯ (ಕಾರ್ಮಿಕರ ಮತ್ತು ತಂತ್ರಜ್ಞರ ಒಕ್ಕೂಟ) ಕಟ್ಟಿದ್ದರು.

film chamber

ಆದ್ರೆ, ಪರ್ಯಾಯ ಒಕ್ಕೂಟದಿಂದ ಚಿತ್ರರಂಗ ಒಡೆದ ಮನೆಯಂತಾಗಬಾರದು ಅನ್ನುವ ಕಾರಣಕ್ಕೆ ಇಂಡಸ್ಟ್ರಿಯಿಂದ ಹಲವರು ಈ ಬೆಳವಣಿಗೆಯನ್ನ ವಿರೋಧಿಸಿದ್ದರು. ಇದರಿಂದ ವಾಣಿಜ್ಯ ಮಂಡಳಿ ಕೂಡ ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡುವ ಗೋಜಿಗೆ ಹೋಗಿರ್ಲಿಲ್ಲ. [ಫಿಲಂ ಚೇಂಬರ್ ನಲ್ಲಿ ನೂಕಾಟ, ತಳ್ಳಾಟ, ರಂಪಾಟ]

ಆದ್ರೆ, ಕಳೆದ ಶನಿವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಜೇಶ್ ಬ್ರಹ್ಮಾವರ್ ನೇತೃತ್ವದ ಕಾರ್ಮಿಕರ ಮತ್ತು ತಂತ್ರಜ್ಞರ ಒಕ್ಕೂಟಕ್ಕೆ ಅಧಿಕೃತ ಮಾನ್ಯತೆ ಸಿಕ್ಕಿದೆ. [ಒಕ್ಕೂಟ ಒಡೆದರೆ ಸುಮ್ಮನಿರಲ್ಲ: ಅಶೋಕ್ ಗುಡುಗು]

ಇದರಿಂದ ಕೆಲ ನಿರ್ಮಾಪಕರು ಸಂತಸ ವ್ಯಕ್ತಪಡಿಸಿದ್ದಾರೆ. ಹಳೆ ಒಕ್ಕೂಟದಲ್ಲಿ ದಬ್ಬಾಳಿಕೆ ಅಂತ ದೂರುವ ನಿರ್ಮಾಪಕರು ಹೊಸ ಒಕ್ಕೂಟದ ಕಾರ್ಮಿಕರ ಮೊರೆ ಹೋಗಬಹುದು. (ಏಜೆನ್ಸೀಸ್)

English summary
In a recent development, Karnataka Film Chamber of Commerce has given official recognition to the New Workers Union lead by Choreographer Rajesh Brahmavar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada