For Quick Alerts
  ALLOW NOTIFICATIONS  
  For Daily Alerts

  ಪೋಷಕ ನಟ ಹರೀಶ್ ರಾಯ್‌ಗೆ ಥೈರಾಯ್ಡ್ ಕ್ಯಾನ್ಸರ್: ನೆರವು ಬೇಕಿದೆ!

  |

  ಕನ್ನಡದ ಹೆಸರಾಂತ ಕಲಾವಿದ ಹರೀಶ್ ರಾಯ್ ಯಾರಿಗೆ ಗೊತ್ತಿಲ್ಲ ಹೇಳಿ. ದಶಕಗಳಿಂದ ಸಿನಿಮಾರಂಗದಲ್ಲಿ ಹರೀಶ್ ರಾಯ್ ಸಕ್ರಿಯವಾಗಿದ್ದಾರೆ. ಕೆಲಕಾಲ ಅವರು ನಟನೆಯಿಂದ ದೂರ ಉಳಿದ ಕಾರಣ, ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಕೆಜಿಎಫ್​​ನಲ್ಲಿ ನಟಿಸುವ ಮೂಲಕ ಮತ್ತೇ ಕಮ್ ಬ್ಯಾಕ್ ಮಾಡಿದರು.

  ಹಲವಾರು ಸಿನಿಮಾಗಳ ಮೂಲಕ ಜನಮನ ಗೆದ್ದ ನಟನಿಗೀನ ಸಂಕಷ್ಟ ಎದುರಾಗಿದೆ. ಹರೀಶ್ ರಾಯ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮುಗಿದ ಬಳಿಕ ಹರೀಶ್ ರಾಯ್ ಅವರಲ್ಲಿ ನಾರೋಗ್ಯದ ಸಮಸ್ಯೆ ಹೆಚ್ಚಾಗಿದೆ.

  ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳುತ್ತಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಪ್ರೀತಿಯ ಚಾಚಾನಾಗಿ ನಟಿಸಿದ್ದ ಹರೀಶ್ ರಾಯ್ ಅವರ ಆರೋಗ್ಯ ಸ್ಥಿತಿಯು ಸದ್ಯ ಗಂಭೀರವಾಗಿದೆ.
  ಕ್ಯಾನ್ಸರ್​ನೊಂದಿಗೆ ಹೋರಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

  ಹರೀಶ್ ರಾಯ್ ಅನಾರೋಗ್ಯ!

  ಹರೀಶ್ ರಾಯ್ ಅನಾರೋಗ್ಯ!

  ಹರೀಶ್ ರಾಯ್‌ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಕೊನೆಯ ಹಂತ ತಲುಪಿದೆ. ಸದ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಯುಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. ಸದ್ಯ ಇವರಿಗೆ ಚಿಕಿತ್ಸೆ ಕೊಡಿಸಿ, ಉಳಿಸಿಕೊಳ್ಳಲು ಕುಟುಂಬಸ್ಥರು ಕಷ್ಟಪಡುತ್ತಿದ್ದಾರೆ. ಇನ್ನು ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬ ಕಷ್ಟಪಡುತ್ತಿದೆ ಎನ್ನಲಾಗಿದೆ.

  ಕೆಜಿಎಫ್ ಸಮಯದಲ್ಲಿ ತೊಂದರೆ ಇತ್ತು!

  ಕೆಜಿಎಫ್ ಸಮಯದಲ್ಲಿ ತೊಂದರೆ ಇತ್ತು!

  ಹರೀಶ್ ರಾಯ್‌ ಅವರಿಗೆ ಹಲವು ದಿನಗಳಿಂದ ಥೈರಾಯ್ಡ್ ಸಮಸ್ಯೆ ಇತ್ತತ್ತಂತೆ. ಆದರೆ ಅದು ಅವರ ಅರಿವಿಗೆ ಬಂದಿದ್ದೇ ತಡವಾಗಿ. ಕೆಜಿಎಫ್ ಸಿನಿಮಾ ಮಾಡುವ ಸಂದರ್ಭದಲ್ಲಿ ಅವರಿಗೆ ತೊಂದರೆ ಇದ್ದರೂ ಗೊತ್ತಾಗಿರಲಿಲ್ಲವಂತೆ. ಸಮಸ್ಯೆ ಕಾಣಿಸಿಕೊಂಡಾಗ, ಕೆಜಿಎಫ್ ಸಿನಿಮಾ ಮಾಡಿದ ಬಳಿಕ ಚಿಕಿತ್ಸೆ ಪಡೆಯೋಣ ಎಂದು ಸುಮ್ಮನಾಗಿದ್ದರಂತೆ. ಕಾರಣ ಮನೆಯಲ್ಲಿ ಕಷ್ಟ ಇದ್ದಿದ್ದರಿಂದ ಕೆಜಿಎಫ್ ಸಿನಿಮಾದಿಂದ ಬರುವ ಹಣವನ್ನು ಮನೆಯ ಕಡೆಗೆ ಸೇಫ್ಟ್ ಮಾಡಿ ಬಳಿಕ ಚಿಕಿತ್ಸೆಗೆ ಹೋಗೋಣ ಎಂದು ಸುಮ್ಮನಿದ್ದರಂತೆ. ಆದರೀಗ ಕ್ಯಾನ್ಸರ್ ಕೊನೆಯ ಹಂತ ತಲುಪಿ ಬಿಟ್ಟಿದೆ.

  ಅವಕಾಶ ಸಿಗೋದಿಲ್ಲ ಎನ್ನುವ ಭಯ: ಹರೀಶ್ ರಾಯ್‌!

  ಅವಕಾಶ ಸಿಗೋದಿಲ್ಲ ಎನ್ನುವ ಭಯ: ಹರೀಶ್ ರಾಯ್‌!

  ಅವರು ಕೊಟ್ಟ ಸಂದರ್ಶನದಲ್ಲಿ ಈ ವಿಚಾರವನ್ನು ಯಾಕೆ ಮುಚ್ಚಿಟ್ಟಿದ್ದಾರೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಅವರು ನಟಿಸಿಸದ್ದಾರೆ. ಹಾಗಾಗಿ ಅವರ ಬಳಿ ಈ ವಿಚಾರ ಯಾಕೆ ಹೇಳಿಕೊಂಡಿಲ್ಲ ಎನ್ನುವ ಬಗ್ಗೆ ತಿಳಿಸಿದ್ದಾರೆ. ಈ ವಿಚಾರ ಸಿನಿಮಾರಂಗದಲ್ಲಿ ಗೊತ್ತಾದರೆ ಯಾರೂ ಅವಕಾಶ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಮುಚ್ಚಿಟ್ಟಿದ್ದರಂತೆ. ಸಂದರ್ಶನದ ವೇಳೆ ಅವರ ಫೋನ್ ನಂಬರ್ ಕೂಡ ನೀಡಿದ್ದಾರೆ. 9606960656 ಈ ನಂಬರ್‌ಗೆ ಹಣ ಹಾಕುವ ಮೂಲಕ ನೀವೂ ಕೂಡ ಅವರಿಗೆ ಸಹಾಯ ಮಾಡಹುದಾಗಿದೆ.

  ಹಲವು ಸಿನಿಮಾಗಳಲ್ಲಿ ನಟನೆ!

  ಹಲವು ಸಿನಿಮಾಗಳಲ್ಲಿ ನಟನೆ!

  ಹರೀಶ್ ರೈ ಕನ್ನಡ ಚಲನಚಿತ್ರೋದ್ಯಮದಲ್ಲಿ ಬಹಳಷ್ಟು ವರ್ಷಗಳಿಂದ ಕೆಲಸ ಮಾಡಿದ್ದಾರೆ. KGF ಚಾಪ್ಟರ್ 2ನಂತಹ ಜನಪ್ರಿಯ ಸಿನಿಮಾಗಳಲ್ಲಿ ಹರೀಶ್ ಕೆಲಸ ಮಾಡಿದ್ದಾರೆ. ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿಯೇ ನಟಿಸಿದ್ದ, ಹರೀಶ್ ರಾಯ್ ಕೆಜಿಎಎಫ್‌ನಲ್ಲಿ ಪಾಸಿಟಿವ್ ಶೇಡ್​ನಲ್ಲಿ ನಟಿಸಿ ಭಾರೀ ಖ್ಯಾತಿ ಪಡೆದರು. ಅಲ್ಲಿಯವರೆಗೂ ನೆಗೆಟಿವ್ ಶೇಡ್​ನ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದರು. ಆದರೂ ಸಹ ಕೆಜಿಎಫ್​ ನಲ್ಲಿ ಅವರ ಪಾತ್ರ ಪ್ರೇಕ್ಷರನ್ನು ಸೆಳೆಯುವಲ್ಲಿ ಯಶಸ್ಸು ಕಂಡಿದೆ.

  English summary
  KGF 2 fame actor Harish Rai Battling Thyroid Cancer, he asks for Help with teary eyes,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X